ರಾಜ್ಯದ ಕಲ್ಲಿದ್ದಲು ಕೊರತೆ ನೀಗಿಸುವ ಯತ್ನ ಮಾಡಲಾಗುತ್ತಿದೆ : ಡಿ.ಕೆ.ಶಿವಕುಮಾರ್
ಅಂತಾರಾಷ್ಟ್ರೀಯ ಮೂಲಗಳಿಂದಲೂ ಕಲ್ಲಿದ್ದಲು ಖರೀದಿಸಿ ರಾಜ್ಯದ ಕಲ್ಲಿದ್ದಲು ಕೊರತೆ ನೀಗಿಸುವ ಯತ್ನ ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಡಿ.6ರಿಂದ 8ರವರೆಗೆ ನವದೆಹಲಿಯಲ್ಲಿ ಇಂಧನ ಸಚಿವರ ಸಮ್ಮೇಳನ ನಡೆಯಲಿದ್ದು , ಆ ಸಮ್ಮೇಳನದಲ್ಲಿ ರಾಜ್ಯದಲ್ಲಿ ಉಂಟಾಗುವ ಕಲ್ಲಿದ್ದಲು ಕೊರತೆ ವಿಚಾರ ಪ್ರಸ್ತಾಪಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಈ ನಡುವೆ ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯುವುದಕ್ಕೂ ಕೇಂದ್ರ ಸರ್ಕಾರ ಕಲ್ಲು ಹಾಕಿದೆ. ಇದು ನಮಗೆ ಒಂದು ರೀತಿ ಶಾಕಿಂಗ್ ಆಗಿದೆ. ಆದರೂ ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ಯುಪಿಸಿಎಲ್ ಸಂಸ್ಥೆಯಿಂದ ಕಡಿಮೆ ದರದಲ್ಲಿ ವಿದ್ಯುತ್ ಖರೀದಿ ಮಾಡಲು ಉದ್ದೇಶಿಸಲಾಗಿದೆ ಎಂದ ಅವರು, ವಿದ್ಯುತ್ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
Comments