ಬಿಎಸ್‌ವೈ ಮುಂದಾಳತ್ವದಲ್ಲಿ ವಿದ್ಯುತ್‌ ಖರೀದಿಗೆ ಕೇಂದ್ರಕ್ಕೆ ಮನವಿ : ಡಿಕೆಶಿ

28 Nov 2017 11:29 AM |
1664 Report

ಯಡಿಯೂರಪ್ಪ ಅವರು ಪ್ರತಿ ಯುನಿಟ್ ವಿದ್ಯುತ್ನ್ನು 2.5ರೂ. ದರದಲ್ಲಿ ನೀಡಲು ಕೇಂದ್ರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ಖರೀದಿಸಲು ಮುಂದಾಗುತ್ತಿಲ್ಲ ಎನ್ನುವ ಹೇಳಿಕೆ ಜನತೆಯ ದಾರಿತಪ್ಪಿಸುವ ಕೆಲಸ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದರು.  

 

ಕೇಂದ್ರ ಸರ್ಕಾರ ಪ್ರತಿ ಯುನಿಟ್‌ ವಿದ್ಯುತ್‌ನ್ನು 2.50 ರೂ. ದರದಲ್ಲಿ ಪೂರೈಸಲು ಸಿದ್ಧವಿದ್ದರೆ ಬಿ.ಎಸ್‌. ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ನಿಯೋಗ ತೆರಳಿ ವಿದ್ಯುತ್‌ ಖರೀದಿಗೆ ಸಿದ್ಧವಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೊಂದು ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ವಿದ್ಯುತ್‌ ನೀಡುತ್ತಿದ್ದರೆ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಹೀಗಾಗಿ ಇತರ ಕಡೆಯಿಂದ ಖರೀದಿಸುತ್ತಿರುವುದನ್ನು ರದ್ದುಗೊಳಿಸಿ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.


Edited By

dks fans

Reported By

dks fans

Comments