ನೈಸ್ ಅಕ್ರಮಕ್ಕೆ ರಾಜ್ಯ ಸರ್ಕಾರ ಅಶೋಕ್ ಖೇಣಿಗೆ ಶ್ರೀರಕ್ಷೆ ನೀಡ್ತಿದ್ಯಾ ಎಂದು ಎಚ್ ಡಿಕೆ ಆರೋಪ

25 Nov 2017 2:31 PM |
806 Report

ಅಶೋಕ್ ಖೇಣಿಗೆ ಮುಖ್ಯಮಂತ್ರಿ ಸಹಕಾರ ಕೊಡ್ತಿದ್ದಾರಾ? ಕಲಾಪದ ಕೊನೆಯ ದಿನ ಬೇಕಂತಲೇ ವಿನಯ್ ಕುಲಕರ್ಣಿ ವಿಷ್ಯ ಪ್ರಸ್ತಾಪವಾಯ್ತಾ? ಬಿಜೆಪಿಯವರು ಅಶೋಕ್ ಖೇಣಿ ಪರ ನಿಂತ್ತಿದ್ದಾರಾ? ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಗಂಭೀರ ಆರೋಪ.

ನೈಸ್ ಆಕ್ರಮದ ಬಗ್ಗೆ ಯಾಕೆ ಇನ್ನು ಕ್ರಮಕೈಕೊಂಡಿಲ್ಲ. ಅಶೋಕ್ ಖೇಣಿ ಗೆ ಮುಖ್ಯಮಂತ್ರಿ ಸಹಕಾರ ನೀಡ್ತಿದಾರ ,ಕಲಾಪದ ಕೊನೆಯ ದಿನ ಬೇಕು  ಅಂತಾನೆ ವಿನಯ್ ಕುಲಕರ್ಣಿ ವಿಷ್ಯ ಪ್ರಸ್ತಾಪಿಸಿ ಇಡೀ ಪ್ರಕರಣಕ್ಕೆ ಬೇರೆಯೇ ರೂಟ್ ಕೊಟ್ಟು ಇದನ್ನು ಡೈವರ್ಟ್ ಮಾಡಲಾಗಿದ್ಯಾ , ಬಿಜೆಪಿಯವರು  ಅಶೋಕ್ ಖೇಣಿಗೆ ಪರ ನಿಂತಿದಾರ ,ಇಲ್ಲ ಒಂದು ಪ್ರಬಲ ಪ್ರತಿ ಪಕ್ಷವಾಗಿ  ಅದು ಕೂಡ ವಾದವನ್ನು ಮಾಡಿಸಬೇಕಿತ್ತು. ಆದ್ರೆ ಅವರು ಮಾಡಿಲ್ಲ. ಹಾಗಾದರೆ ರಾಜ್ಯ ಸರ್ಕಾರದ ಶ್ರೀ ರಕ್ಷೆ ಅಶೋಕ್ ಖೇಣಿಯವರಿಗಿದ್ಯಾ ? ಹಲವಾರು ಪ್ರಶ್ನೆಗಳ ಮೂಲಕ ಕುಮಾರಸ್ವಾಮಿ ರಾಜ್ಯ ಸರಕಾರಕ್ಕೆ ಗಂಭೀರ ಆರೋಪ ಮಾಡಿದ್ದಾರೆ. ನೆನ್ನೆ ಚುನಾವಣಾ ದೃಷ್ಟಿಯಿಂದ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲೇ ನಡೆಸುತ್ತಿದ್ದಾರೆ. ಕನ್ನಡ ಸಮ್ಮೇಳನಕ್ಕೆ 8 ಕೋಟಿರೂಗಳನ್ನು ಉದಾರವಾಗಿ  ಕೊಟ್ಟಿದ್ದಾರೆ. ಒಂದು ವರ್ಷವಾಯಿತು ನೈಸ್ ಕಂಪನಿಯಾ ನಡವಳಿಕೆಗಳ ಬಗ್ಗೆ ಸದನ ಹಾಗು ಅದರ ಲೂಟಿಯ ಬಗ್ಗೆ, ಅಕ್ರಮಗಳ ಬಗ್ಗೆ ಸದನ ಸಮಿತಿ ರಿಪೋರ್ಟ್ ನ್ನು ಕನ್ನಡದಲ್ಲಿ ಬರೆದಿದ್ದಾರೆ ಅಂತ ಹೇಳಿ ಯಾವ ಕಂಪನಿ ಪ್ರೊಮೋಟರ್ ನನಗೆ ಕನ್ನಡ ಬರುವುದಿಲ್ಲ. ಇದನ್ನು ಇಂಗ್ಲಿಷ್ ನಲ್ಲಿ ತರ್ಜುಮೆ ಮಾಡಿಕೊಡಿ ಎಂದು ಹೇಳಿದ ಪ್ರೊಮೋಟರ್ ಗೆ ಸರ್ಕಾರ ತಲೆ  ಭಾಗುತ್ತಿದೆ. 3 ,4 ತಿಂಗಳಾಗುತ್ತಿದೆ ಎಂದು ನಂತರ ಇಂಗ್ಲಿಷ್ ನಲ್ಲಿ ತರ್ಜುಮೆ ಮಾಡಲು ಒಪ್ಪಿರುವ ಸಿಎಂ ಕನ್ನಡ ಸಮ್ಮೇಳನದ ಬಗ್ಗೆ ಎಚ್ ಡಿಕೆ ವಾಗ್ದಾಳಿ ನಡೆಸಿದರು .   

Edited By

hdk fans

Reported By

hdk fans

Comments