ದೊಡ್ಡಬಳ್ಳಾಪುರ ಪೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘ ನಡೆದು ಬಂದ ಹಾದಿ

24 Nov 2017 3:56 AM |
515 Report

ರಜತಮಹೋತ್ಸವದ *ಶುಭಾಷಯಗಳು* ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘವು 1992 ರಲ್ಲಿ ಐದಾರು ಛಾಯಾಗ್ರಾಹಕರಿಂದ ಪ್ರಾರಂಭವಾಯ್ತು, ಅಂದಿನ ದಿನಗಳಲ್ಲಿ ಇರುವ ನಾಲ್ಕು ಸ್ಟುಡಿಯೋಗಳೇ ಕಾಂಪಿಟೇಷನ್ ವ್ಯವಹಾರಗಳಿಂದ ಬೇಸೆತ್ತು ಹೋಗಿತ್ತು, ಇರುವಷ್ಟು ಜನರೇ ಹಲವಾರು ಸಭೆಗಳನ್ನು ನಡೆಸಿದರೂ ಸಹ ಸಮಸ್ಯೆ ಬಗೆಹರಿಯಲಿಲ್ಲ, ಕೊನೆಗೆ 1992 ರಲ್ಲಿ ದೊಡ್ಡಬಳ್ಳಾಪುರ ಛಾಯಾಗ್ರಾಹಕರ ಸಂಘ ಪ್ರಾರಂಭವಾಯಿತು.

ಈ ಸಂಸ್ಥೆ ಉತ್ತಮ ಗಳಿಗೆಯಲ್ಲಿ ಪ್ರಾರಂಭವಾಯ್ತು ಅನಿಸುತ್ತದೆ ಪ್ರಾರಂಭವಾದ ಗಳಿಗೆಯಿಂದ ಇಲ್ಲಿಯವರೆವಿಗೂ ಹಿಂತಿರುಗಿ ನೋಡಲೇ ಇಲ್ಲ, ಒಂದು ತಾಲ್ಲೂಕು ಸಂಘ ತನ್ನ ಅಸ್ಥಿತ್ವ ಕಾಪಾಡಿಕೊಳ್ಳಲು ಪಟ್ಟಪಾಡು ಅಷ್ಟಿಷ್ಟಲ್ಲ ಪ್ರತಿಯೊಂದು ಸ್ಟುಡಿಯೋದ ಛಾಯಾಗ್ರಾಹಕರನ್ನು ಒಂದು ಮಾರ್ಗದಲ್ಲಿ ತರಲು ಪ್ರತಿಯೊಬ್ಬರೂ ಪ್ರಯತ್ನಿಸಿದ್ದಾರೆ, ಎಲ್ಲರ ಪ್ರಯತ್ನದ ಫಲ ಇಂದು ತಾಲ್ಲೂಕಿನಲ್ಲಿ 250 ಕ್ಕೂ ಹೆಚ್ಚಿನ ಛಾಯಾಗ್ರಾಹಕ ಸದಸ್ಯರು ನಮ್ಮ ಸಂಘದಲ್ಲಿದ್ದಾರೆ.* *ಯಾರೊಬ್ಬರೂ ನಮ್ಮ ಸಂಘದಲ್ಲಿ ಸದಸ್ಯರಿಲ್ಲದೇ ಛಾಯಾಗ್ರಹಣ ಮಾಡುವಂತಿಲ್ಲ ನಮ್ಮಲ್ಲಿ ನಮ್ಮ ಸಂಘದ ಒಗ್ಗಟ್ಟು ಇಡೀ ರಾಜ್ಯದಲ್ಲೇ ಮಾತಾಗಿದೆ. ಇಲ್ಲಿನ ಶಿಸ್ತು, ಇಲ್ಲಿನ ವ್ಯವಹಾರ, ಇಲ್ಲಿನ ಪ್ರತಿಯೊಬ್ಬ ಛಾಯಾಗ್ರಾಹಕರೂ ಒಂದು ಕುಟುಂಬದವರಂತೆ ಬದುಕುತಿದ್ದೇವೆ‌.* *ಯಾರೊಬ್ಬರೂ ಸಹ ಸಂಘದ ನೀತಿ ನಿಯಮಗಳಿಗೆ ವಿರುದ್ದವಾಗಿ ವರ್ತಿಸುವಂತಿಲ್ಲ, ಅಂತಹವರಿಗೆ ಕಠಿಣಕ್ರಮ ಕಟ್ಟಿಟ್ಟ ಬುತ್ತಿ ಇಂತಹ ಅಪರೂಪದ ಸಂಸ್ಥೆ ನಮ್ಮ ದೊಡ್ಡಬಳ್ಳಾಪುರ ಸಂಘ.* 

*ದಶಮಾನೋತ್ಸವ ಆಚರಣೆಯಲ್ಲಿ ನಡೆದಾಡುವ ದೇವರು ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶ್ರೀ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಅಂದಿನ ಸಮಾರಂಭದಲ್ಲಿ ಕರ್ನಾಟಕದ ಛಾಯಾಗ್ರಹಣ ಕ್ಷೇತ್ರದ ಭೀಷ್ಮ ಚಕ್ರವರ್ತಿ ರಾಜಗೋಪಾಲ್, ರಾಜ್ಯ ಸರ್ಕಾರದ ರೇಷ್ಮೆ ಸಚಿವರು ಹೆಚ್,ಎಂ,ರೇವಣ್ಣ, ರಾಜ್ಯ ಛಾಯಾಗ್ರಹಣದ ದಂತಕತೆ ಬಿ.ಶ್ರೀನಿವಾಸ್, ನಟ ಶಿವರಾಮ್,ಮಾಸ್ಟರ್ ಹಿರಣ್ಣಯ್ಯ, ಸರಿಗಮ ವಿಜಿ, ಖ್ಯಾತ ಛಾಯಾಗ್ರಾಹಕ ಎಂ.ವಿಶ್ವನಾಥ್ ಹೀಗೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಂತರ ಛಾಯಾನಡಿಗೆ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಮುರುಘಾ ಶರಣರಾದ ಶ್ರೀ ಶಿವಮೂರ್ತಿ ಶಿವಾಚರಣರ ದಿವ್ಯ ಸಾನಿಧ್ಯವಹಿಸಿ, ಚಿತ್ರನಟ ವಿಜಯರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ಛಾಯಾಗ್ರಾಹಕ ವೀರೇಶ್ ಹಾಗೂ ಡಿ.ಸಿ.ನಾಗೇಶ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.*

*ಇಪ್ಪತ್ತೈದು ವರ್ಷಗಳಿಂದ ಇಲ್ಲಿಯವರೆವಿಗೂ ರಾಜ್ಯದ ಹಲವಾರು ಸಮಸ್ಯೆಗಳಿಗೆ ಜೊತೆಯಾಗಿದ್ದೇವೆ ಕಾವೇರಿ ಹೋರಾಟ, ರೈತ ಪರಹೋರಾಟ, ನಾಡು-ನುಡಿ ಇವುಗಳಿಗಾಗಿ ಹೋರಾಟ, ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನಗಳಿಂದ ಹಿಡಿದು ಸಮವಸ್ತ್ರ, ಪುಸ್ತಕ ಪರಿಕರಗಳು ಹೀಗೆ ಹಲವಾರು ರೀತಿಯ ಸಹಾಯ, ಅನಾರೋಗ್ಯ ಪೀಡಿತರಿಗೆ ಸಹಾಯ, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಸೈನಿಕರಿಗೆ ನೆರವು, ನೆರೆ ಹಾವಳಿಗೆ ಸಹಾಯ, ಸುನಾಮಿಯ ಸಂದರ್ಭದಲ್ಲಿ ಸಹಾಯ, ಭೂ ಕಂಪನದ ಸಂದರ್ಭದಲ್ಲಿ ಬುಚ್ ನಲ್ಲಿ ಸಹಾಯ, ಹೀಗೇ ಕೇವಲ ಹೆಸರಿಗೆ ಸಂಘವಾಗಿರದೇ ಮಾನವೀಯತೆಯ ಮೌಲ್ಯವನ್ನು , ಸಮಾಜದ ಜವಾಬ್ದಾರಿಯನ್ನು ಅರಿತು ಸಂಘಟನೆಗೆ ಸಾಕ್ಷಿಯಾಗಿದೆ ನಮ್ಮ ದೊಡ್ಡಬಳ್ಳಾಪುರದ ಸಂಘ.*

 

*ನಮ್ಮ ಸಂಘದ ವಿಶೇಷತೆಗಳು :*

*⭐ಇಪ್ಪತ್ತೈದು ವರ್ಷಗಳಿಂದಲೂ ಒಂದೇ ಸಂಘ, ಒಂದೇ ನಡೆ,ನುಡಿ,ಒಂದು ಕುಟುಂಬವಾಗಿದೆ.*

*⭐ಇಪ್ಪತ್ತೈದು ವರ್ಷಗಳಲ್ಲಿ 250 ಸದಸ್ಯರ ಒಟ್ಟು ಕುಟುಂಬ*

*⭐ತಾಲ್ಲೂಕಿನಾಧ್ಯಂತ ಒಂದೇ ದರಪಟ್ಟಿ ಒಂದೇ ರೀತಿಯ ವ್ಯಾಪಾರ.*

*⭐ಇಪ್ಪತ್ತೈದು ವರ್ಷಗಳಿಂದಲೂ ಸ್ಟುಡಿಯೋ ಮುಂಗಟ್ಟುಗಳು ತಿಂಗಳ ಕೊನೆಯ ಬುಧವಾರ ರಜೆ. ಇಲ್ಲಿಯ ವರೆವಿಗೂ ಈ ರಜೆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ.*

*⭐ನಮ್ಮ ಸಂಘದಿಂದ ರಾಷ್ಟ್ರಮಟ್ಟದ ಛಾಯಾಗ್ರಾಹಕರು ಇದ್ದಾರೆ, ರಾಜ್ಯ ಮಟ್ಟದ ಸಂಘಟನೆಗೆ ನಮ್ಮ ಸಂಘದ ಕೊಡುಗೆ ಅಪಾರ.*

ಇದು ನಮ್ಮ ದೊಡ್ಡಬಳ್ಳಾಪುರ ಛಾಯಾಗ್ರಾಹಕರ ಸಂಘದ ಸ್ವಲ್ಪ ವಿಚಾರಗಳು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಕೇವಲ ಸಂಘವಾಗಿರದೇ ಇಡೀ ಛಾಯಾಗ್ರಾಹಕರ ಒಗ್ಗಟ್ಟಿನ ಕುಟುಂಬವಾಗಿದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಮ್ಮ ಸಂಘ ಬೆಳೆಯಲು ಹಲವರ ನಿಸ್ವಾರ್ಥ ಸೇವೆ. ಸಂಘದ ಅಭಿವೃದ್ಧಿಗಾಗಿ ಎಲ್ಲರ ಅವಿರತ ಕಾಯಕ, ಎಲ್ಲರ ಅಭಿಮಾನ, ಈ ಸಂಘಕ್ಕೆ ಪ್ರೇರಣೆಯಾಗಿದೆ. ನೀವೂ ಸಹ ಮನಸ್ಸು ಮಾಡಿ ಒಂದಾಗಿ ಸಂಘಟನೆಗೆ ಪ್ರೋತ್ಸಾಹಿಸಿ ವೃತ್ತಿಯ ಒಗ್ಗಟ್ಟನ್ನು ಎತ್ತಿ ಹಿಡಿಯಿರಿ ಎಂಬುದೇ ನಮ್ಮ ಆಶಯ,

*ಇದೇ ಡಿಸೆಂಬರ್ 26-27, 2017 ರಂದು ದೊಡ್ಡಬಳ್ಳಾಪುರದ ವಕ್ಕಲಿಗರ ಭವನದಲ್ಲಿ ಸಂಘದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ರಾಜ್ಯದ ಸಮಸ್ತ  ಛಾಯಾಗ್ರಾಹಕರು ಆಗಮಿಸಿ ಬೆಳ್ಳಿಹಬ್ಬಕ್ಕೆ ಘನತೆಯನ್ನು ಹೆಚ್ಚಿಸಬೇಕಾಗಿ ತಮ್ಮಲ್ಲಿ ಸಂಘದ ಪರವಾಗಿ ಸವಿನಯವಾಗಿ ಪ್ರಾರ್ಥಿಸುತ್ತೇವೆ.*

 

ನಮಸ್ಕಾರಗಳೊಂದಿಗೆ,

ಬಿ.ಎನ್.ರವಿಕುಮಾರ್, ಅಧ್ಯಕ್ಷರು.

ದೊಡ್ಡಬಳ್ಳಾಪುರ ಪೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘ

Edited By

Ramesh

Reported By

Ramesh

Comments