ಜೆಡಿಎಸ್ ಜತೆ ಕೈ ಸೇರಿಸಿದ ಕೇಂದ್ರದ ಮಾಜಿ ಸಚಿವ

22 Nov 2017 3:44 PM |
7831 Report

ಕೇಂದ್ರದ ಮಾಜಿ ಸಚಿವರೊಬ್ಬರು ತೆನೆ ಹೊತ್ತ ಮಹಿಳೆಯ ಕೈ ಹಿಡಿಯುತ್ತಿದ್ದಾರೆ. ಕೋಮುವಾದಿ ನಡೆ , ಮಹದಾಹಿ ಪರಿಹಾರ ನೀಡದ ಬಿಜೆಪಿ ಸಂಗಬೇಡ ಎಂದು ಬಾಬಾಗೌಡ ಪಾಟೀಲರವರು ಜೆಡಿಎಸ್ ಸೇರಿದ್ದಾರೆ. ಇವರು ರೈತ ಮುಖಂಡ ಆದ್ರೆ ಇತ್ತೀಚಿಗೆ ಬಿಜೆಪಿ ನಡೆಯಿಂದ ಅಸಮಾಧಾನಗೊಂಡಿರುವ ಬಾಬಾಗೌಡ. ಈಗ ತೆನೆ ಹೊತ್ತ ಮಹಿಳೆಯ ಕೈ ಹಿಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾದ ಅವರು ತಾವು ಯಾಕೆ ಜೆಡಿಎಸ್ ಜತೆ ಕೈ ಜೋಡಿಸುತ್ತಿದ್ದೇವೆ ಅನ್ನೋದಕ್ಕೆ ಕಾರಣ ಹೇಳಿಕೊಂಡಿದ್ದಾರೆ. ಮಹದಾಯಿ ನೀರಿಗಾಗಿ ರೈತರು 2  ವರ್ಷದಿಂದ ಹೋರಾಡುತ್ತಿದ್ದಾರೆ. ಆದ್ರೆ ವಿವಾದ ಇತ್ಯರ್ಥ ಪಡಿಸದೆ ಮೌನವಹಿಸಿರುವ ಬಿಜೆಪಿಯಲ್ಲಿರುವುದು ಇರಿಸು ಮುರಿಸು ತರಿಸಿದೆ. ಇತ್ತೀಚಿಗೆ ವಿವಾದದಿಂದಲೇ ಗೆದ್ದುಬಿಡುತ್ತೇವೆಂಬ ಧೋರಣೆ ಇರೋದು ಗೌಡರಿಗೆ ಇಡಿಸುತ್ತಿಲ್ಲವಂತೆ. ಅಲ್ಲದೆ ನೂರಾರು ಜನ ಎಂಎಲ್ ಎ ಗಳಿರಬಹುದು ,ಹತ್ತಾರು ಜನ ಮಂತ್ರಿಗಳಿರಬಹುದು ನಾನು ರೈತರ ಮಕ್ಕಳುಅಂತ ಹೇಳಬಹುದು. ಆದರೆ ಯಾರಿಂದ ಸಾಧ್ಯ ಆಗುತ್ತೆ ಕೇವಲ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಿಂದ ಮಾತ್ರ ಸಾಧ್ಯ. ಜೆಡಿಎಸ್ ನಿಂದ ಯಾರೇ ಅಭ್ಯರ್ಥಿಯಾದರು ಚಿಂತೆಯಿಲ್ಲ ,ಶತಾಯಗತಾಯ ಎಚ್ ಡಿಕೆ ಗೆಲ್ಲಬೇಕು ಅವರನ್ನು ಬೆಂಬಲಿಸೋದು ನಮ್ಮ ಗುರಿ ಎಂದು ಹೇಳಿದ್ದಾರೆ.

Edited By

hdk fans

Reported By

hdk fans

Comments