ದೊಡ್ಡಬಳ್ಳಾಪುರ ಜನೌಷಧಿ ಮಳಿಗೆಯಲ್ಲಿ ಮೋಸ

19 Nov 2017 8:44 AM |
347 Report

ವಿಜಯವಾಣಿ ವಾರ್ಥೆ: ದೊಡ್ಡಬಳ್ಳಾಪುರ ನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ತಾಯಿ ಮಗು ಆಸ್ಪತ್ರೆಯ ಜನೌಷಧ ಮಳಿಗೆಗೆ ಆರೊಗ್ಯ ಇಲಾಖೆ ಅಧಿಕಾರಿಗಳು ಹಾಗೂ ಕರವೇ ಕಾರ್ಯಕರ್ತರು ಜಂಟಿ ಕಾರ್ಯಾಚರಣೆ ನಡೆಸಿ ಖಾಸಗಿ ಮೆಡೀಕಲ್ ಸ್ಟೋರ್ ಗಳಲ್ಲಿ ಮಾರಾಟ ಮಾಡಾಲಾಗುವ ಔಷಧ ಮತ್ತು ಕಾಸ್ಮೆಟಿಕ್ಸ್ ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ನೋಟೀಸ್ ನೀಡೀದ್ದಾರೆ. ಕರವೇ [ಕನ್ನಡಿಗರ ಬಣ] ರಾಜ್ಯಾಧ್ಯಕ್ಷ ಚಂದ್ರಶೇಖರ್ ಕೇಂದ್ರ ಸರ್ಕಾರ ಬಡ ಜನತೆಗೆ ಅನುಕೊಲವಾಗಲೆಂದು ಜನರಿಕ್ ಮೆಡಿಕಲ್ ಸ್ಟೋರ್ ಸ್ಥಾಪಿಸಿ ಕಡಿಮೆ ದರಕ್ಕೆ ಔಷಧ ಪೂರೈಸುತ್ತಿದೆ. ಆದರೆ ಇಲ್ಲಿನ ಮಳಿಗೆಯಲ್ಲಿ ಔಷಧವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಔಷಧ ಕೊಂಡರೆ ಬಿಲ್ ನೀಡುತ್ತಿಲ್ಲ, ಖಾಸಗಿ ಮೆಡಿಕಲ್ ಔಷಧಗಳನ್ನು ತಂದು ಮಾರಾಟ ಮಾಡುತ್ತಿದ್ದರೂ ಹಿರಿಯ ಅಧಿಕಾರಿಗಳು ಗಮನಿಸದಿರುವುದು ವಿಪರ್ಯಾಸ. ಕೇಂದ್ರ ಸರ್ಕಾರ ನೀಡುತ್ತಿರುವ ಸೌಲಭ್ಯ ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ಜನೌಷಧ ಕೇಂದ್ರ ಮಾಡಬೇಕಿದೆ ಎಂದು ಒತ್ತಾಯಿಸಿದರು. ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಗಿರೀಶ್, ಡಾ.ಸೆಲ್ವಕುಮಾರ್, ಕರವೇ ತಾಲ್ಲೂಕು ಅಧ್ಯಕ್ಷ ಜಿ.ಎನ್. ಪ್ರದೀಪ್ ಕುಮಾರ್ ಮತ್ತಿತರರು ಇದ್ದರು

Edited By

Ramesh

Reported By

Ramesh

Comments