ವಿಧಾನ ಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉಪೇಂದ್ರ

13 Nov 2017 10:52 AM |
608 Report

60 ಸಾವಿರ ಮೇಲ್‌: ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಕೇವಲ ವೇದಿಕೆ. ಪಕ್ಷದ ಅಭ್ಯರ್ಥಿಗಳಿಗೆ ಖುರ್ಚಿ ಖಾಲಿ ಇದೆ. ಸಾಧಿಸುವ ಉದ್ದೇಶ ಉಳ್ಳವರು ಈ ಖುರ್ಚಿಯಲ್ಲಿ ಕೂರಬಹುದು. ಈಗಾಗಲೇ ಪಕ್ಷದ ವತಿಯಿಂದ ಸ್ಪರ್ಧಿಸಲು 60 ಸಾವಿರ ಮೇಲ್‌ಗ‌ಳು ಬಂದಿವೆ. ಇವುಗಳಲ್ಲಿ 8 ಸಾವಿರ ಮೇಲ್‌ಗ‌ಳನ್ನು ಅಧ್ಯಯನ ಮಾಡಿರುವುದಾಗಿ ತಿಳಿಸಿದರು.

ಜನ ಆಶೀರ್ವದಿಸಿದರೆ ಮಾತ್ರ ರಾಜಕೀಯದಲ್ಲಿ ರಾಜಕಾರಣದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇರುತ್ತೇನೆ. ಇಲ್ಲದಿದ್ದರೆ ಸಿನಿಮಾ ರಂಗದಲ್ಲೇ ಸಕ್ರಿಯನಾಗುತ್ತೇನೆ ಎಂದು ಚಿತ್ರ ನಟ ಉಪೇಂದ್ರ ಹೇಳಿದ್ದಾರೆ. ನಗರದಲ್ಲಿ  ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಆ್ಯಪ್‌ ಮತ್ತು ವೆಬ್‌ಸೈಟ್‌ ಬಿಡುಗಡೆಗೊಳಿಸಿ ಮಾತನಾಡಿದರು. ಮುಂದಿನ ನಾಲ್ಕು ತಿಂಗಳ ಕಾಲ ಸಿನಿಮಾ ರಂಗ ಬಿಟ್ಟು ಬೇರು ಮಟ್ಟದಲ್ಲಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ತೊಡಗುವುದಾಗಿ ತಿಳಿಸಿದರು.

ಪ್ರತಿ ಕ್ಷೇತ್ರಕ್ಕೂ ಪ್ರಣಾಳಿಕೆ: ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಪ್ರತಿ ಕ್ಷೇತ್ರಕ್ಕೂ ಒಂದೊಂದು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಿದರು. ನನ್ನ ಕುಟುಂಬದ ಸದಸ್ಯರು ಬೇಸರಗೊಳ್ಳಬಾರದೆಂಬ ಕಾರಣಕ್ಕಾಗಿ ನಾನು ಕೆಪಿಜೆಪಿ ಪಕ್ಷದ ಕೆಲವು ಕಾರ್ಯಕ್ರಮಗಳಲ್ಲಿ ಅವರನ್ನು ಕರೆದುಕೊಂಡು ಬಂದಿದ್ದೆ. ಅಷ್ಟಕ್ಕೆ ಕೆಲವರು ಉಪೇಂದ್ರ ಅವರ ಕುಟುಂಬ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಆದರೆ ಇದು ಸತ್ಯಕ್ಕೆ ದೂರವಾದುದು. ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ. ಒಂದು ವೇಳೆ ಕುಟುಂಬ ಸದಸ್ಯರು ಪಕ್ಷಕ್ಕೆ ಬರಲು ಇಚ್ಛಿಸಿದರೆ ಅವರು ಕೂಡ ಪಕ್ಷದ ಮಾರ್ಗದರ್ಶಿ ಸೂತ್ರದ ಮೂಲಕವೇ ಪ್ರವೇಶಿಸಬೇಕಾಗುತ್ತದೆ ಎಂದು ತಿಳಿಸಿದರು.

Edited By

Uppendra fans

Reported By

upendra fans

Comments