ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದ ಕುಮಾರಣ್ಣ

07 Nov 2017 5:09 PM |
3351 Report

ನವೆಂಬರ್ ೨೦ ರಂದು ಎಂ.ಡಿ. ರಮೇಶ್ ಗೌಡ ಅಭಿಮಾನಿ ಬಳಗದಿಂದ ನಡೆಸಲುದ್ದೇಶಿಸಿರುವ ಸ್ವಾಭಿಮಾನಿ ಸಮಾವೇಶದ ಕರಪತ್ರದಲ್ಲಿ ಪಕ್ಷದ ನಾಯಕರ ಭಾವಚಿತ್ರ ಹಾಕಿಕೊಳ್ಳುವುದಕ್ಕೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದು ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ ಎಂದು ಎಂ.ಡಿ.ರಮೇಶ್ ಗೌಡ ಅಭಿಮಾನಿ ಬಳಗದ ಅರೇಹಳ್ಳಿ ಜಗದೀಶ್ ತಿಳಿಸಿದರು. 

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖಂಡ, ತಾಪಂ ಮಾಜಿ ಅಧ್ಯಕ್ಷ ಎಂ‌‌.ಡಿ.ರಮೇಶ್ ಗೌಡ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವರು ಜಿಲ್ಲಾಧ್ಯಕ್ಷ ಚನ್ನಿಗಪ್ಪ ಅವರಿಗೆ ದೂರು ನೀಡಿ ಉಚ್ಚಾಟನೆ ಕ್ರಮ ಕೈಗೊಳ್ಳುವಂತೆ ಎಚ್.ಡಿ.ಕುಮಾರಸ್ವಾಮಿ ಅವರ ಮಾತಿನಿಂದ ಅಭಿಮಾನಿಗಳ ಆತ್ಮಸ್ಥೈರ್ಯ ಹೆಚ್ಚಾಗಿದೆ. ಜೆಡಿಎಸ್ ಪಕ್ಷದ ಬಗ್ಗೆ ಗೌರವ ಹೆಚ್ಚಾಗಿದೆ ಎಂದ ಅವರು,  ರಮೇಶ್ ಗೌಡರ ಉಚ್ಚಾಟನಾ ಕ್ರಮವನ್ನು ಖಂಡಿಸಿ, ಉಚ್ಚಾಟನೆ ಆದೇಶ ಹಿಂಪಡೆದು ಪಕ್ಷದಲ್ಲಿ ಎಂದಿನಂತೆಯೇ ಮುಂದುವರೆಸಬೇಕೆಂದು ಒತ್ತಾಯಿಸಲು ನವೆಂಬರ್ ೨೦ ರ ಸ್ವಾಭಿಮಾನಿ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಸಮಾವೇಶದ ಕರಪತ್ರ, ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಭಾವಚಿತ್ರಗಳನ್ನು ಹಾಕಿಕೊಂಡಿದ್ದನ್ನು ಆಕ್ಷೇಪಿಸಿ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಶಾಸಕರು ದೂರು ದಾಖಲಿಸಿರುವ ಬಗ್ಗೆ  ಮಾಧ್ಯಮಗಳಿಂದ ತಿಳಿದು ಬಂದ ಮೇಲೆ ಅಭಿಮಾನಿ ಬಳಗದ ಅರೇಹಳ್ಳಿಯ ಜಗದೀಶ್, ಮಂಜು, ಪುನೀತ್, ಪುರ ಬಾಲಕೃಷ್ಣ, ಹೇಮಾವತಿ ಮಂಜಣ್ಣ, ಹಿಂಡುಮಾರನಹಳ್ಳಿ ಹೇಮಂತ್, ಕಣತೂರು ಕೃಷ್ಣೇಗೌಡ ಸೇರಿದಂತೆ ಹಲವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ‌ ಮಾಡಿ ಸಮಾವೇಶದ ಕರಪತ್ರ ತೋರಿಸಿ, ಭಾವಚಿತ್ರ ಹಾಕಿರುವುದಕ್ಕೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿ ಠಾಣೆಯಲ್ಲಿ ದೂರು ನೀಡಿರುವ ಬಗ್ಗೆ ಹಾಗೂ ಪಕ್ಷದ ಸಂಘಟನೆಗೆ ದಶಕಗಳಿಂದ ಶ್ರಮಿಸುತ್ತಿರುವ ಎಂ.ಡಿ.ರಮೇಶ್ ಗೌಡರನ್ನು ಪಕ್ಷದಿಂದ ಉಚ್ಚಾಟಿಸಿರುವ ಬಗ್ಗೆ ತಿಳಿಸಿದೆವು‌. ಇದಕ್ಕೆ ಪ್ರತಿಕ್ರಯಿಸಿದ ಕುಮಾರಸ್ವಾಮಿ ಅವರು, ಪಕ್ಷದಿಂದ ರಮೇಶ್ ಗೌಡರನ್ನು ಉಚ್ಚಾಟಿಸಿರುವ ವಿಚಾರ ಗೊತ್ತಿಲ್ಲ. ಈ ಬಗ್ಗೆ ಸಂಬಂದಪಟ್ಟ ಜಿಲ್ಲಾಧ್ಯಕ್ಷರೊಂದಿಗೆ ಚರ್ಚಿಸುತ್ತೇನೆ. ಸ್ವಾಭಿಮಾನಿ ಸಮಾವೇಶದ ಕರಪತ್ರದಲ್ಲಿ ಪಕ್ಷದ ಅಭಿಮಾನಿಗಳಾಗಿ ನಾಯಕರ ಭಾವಚಿತ್ರ ಹಾಕಿಕೊಳ್ಳಲು ಯಾವುದೇ ಆಕ್ಷೇಪವಿಲ್ಲ ಎಂದು ತಿಳಿಸಿರುವುದಾಗಿ ಹೇಳಿದರು.

Edited By

Suresh M

Reported By

hdk fans

Comments