ಕಾಂಗ್ರೆಸ್ ಪಕ್ಷದ 2ನೇ ಸರ್ವೆಯಲ್ಲಿ, ಜೆಡಿಎಸ್ ಕಿಂಗ್ ಮೇಕರ್ ?

30 Oct 2017 5:38 PM |
7931 Report

ಕಾಂಗ್ರೆಸ್ ಪಕ್ಷದ ಸರ್ವೆಯಲ್ಲಿ ಸೋಲಿನ ಸುಳಿವು ಸಿಕ್ಕಿದೆ . ಎರಡನೆಯ ಸರ್ವೆಯಲ್ಲಿ 30 - 35 ಹಾಲಿ ಶಾಸಕರಿಗೆ ಸೋಲುತ್ತಾರೆ ಎಂದು ಸರ್ವೆಯಲ್ಲಿ ಹೇಳಿರುವಂತದ್ದು 224 ಕ್ಷೇತ್ರಗಳಲ್ಲಿ 2 ನೇ ಸರ್ವೇಯಲ್ಲೂ ಸಹ 80 ರಿಂದ 90 ಸ್ಥಾನ ಗಳಿಸಿದೆ. ಎರಡನೇ ಸರ್ವೆಯ ನಂತರ ಬದಲಾಗಲಿಲ್ಲ ಕೈ ಶಾಸಕರ ಭವಿಷ್ಯ .

ಶಾಸಕರಿಗೆ ಎಚ್ಚರಿಕೆಯನ್ನು ನೀಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್. ಅಲ್ಲದೆ ಸೋಲುವ ಶಾಸಕರಿಗೆ ಎಚ್ಚೆತ್ತುಕೊಳ್ಳಿ ಎಲ್ಲಿ ತಪ್ಪಾಗಿದೆ ಸರಿಪಡಿಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಫುಲ್ ಕ್ಲಾಸ್. 2018 ರ ವಿಧಾನಸಭಾ ಚುನಾವಣೆಗಾಗಿ, 224 ಕ್ಷೇತ್ರಗಳಲ್ಲಿ 2ನೇ ಬಾರಿ ಸರ್ವೇ ಮಾಡಿಸಿದ ಪರಮೇಶ್ವರ್ ರಿಸಲ್ಟ್ ನೋಡಿ ಬೆಚ್ಚಿಬಿದ್ದಿದ್ದಾರೆ. 2ನೇ ಸರ್ವೇಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎನ್ನುವ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್ ಈಗ ಚುನಾವಣೆ ನಡೆದರೂ ,80 ರಿಂದ 90 ಸ್ಥಾನಗಳನ್ನಷ್ಟೇ ಪಡೆಯಬಹುದು ಎಂದು ಎಚ್ಚರಿಕೆ ನೀಡಿದೆ.

ಹಾಲಿ ಶಾಸಕರಲ್ಲಿ ಹಲವರಿಗೆ ಸೋಲು ಎಂದು ವರದಿ ಸೂಚಿಸಿದೆ. ಮೊದಲನೇ ವರದಿಯಲ್ಲೂ ಸೋಲು ಅಂತ ಬಂದಿತ್ತು, ಅದಾದ ಬಳಿಕ ಕರೆದು ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೂಚಿಸಿದ್ದರು. ಎರಡನೇ ಸರ್ವೇ ಸಮಯದಲ್ಲೂ ಹಣೆಬರಹ ಬದಲಾಗಿಲ್ಲ. ದೆಹಲಿಯ ಮೂಲದ ಖಾಸಗಿ ಕಂಪನಿಯಿಂದ ಸರ್ವೇ ಮಾಡಿಸಿದ ಪರಂ, ಹಾಲಿ 30 ರಿಂದ 35 ಜನ ಶಾಸಕರಿಗೆ ಸೋಲಿನ ಭಯವಿರುವುದನ್ನು ಮನಗೊಂಡಿದ್ದಾರೆ. ಸರಕಾರದಿಂದ ಜನಪ್ರಿಯ ಕಾರ್ಯಕ್ರಮಗಳ ಘೋಷಣೆಯಾಗದಿದ್ದರೆ, ಈ ನಂಬರ್ ಮತ್ತಷ್ಟು ಏರಿ, ಗೆಲ್ಲುವ ಸೀಟುಗಳ ನಂಬರ್ ಕಡಿಮೆಯಾಗಲಿದೆ ಎಂದು ಸಮೀಕ್ಷೆ ಎಚ್ಚರಿಕೆ ಗಂಟೆ ಬಾರಿಸಿದೆ.

 

Edited By

hdk fans

Reported By

hdk fans

Comments