ನವಂಬರ್ 6 ರಿಂದ ಉತ್ತರಕರ್ನಾಟಕದಲ್ಲಿ ಜೆಡಿಎಸ್ ಪಾದಯಾತ್ರೆ ಶುರು

27 Oct 2017 4:22 PM |
3384 Report

ಉತ್ತರಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಜೆಡಿಎಸ್ ಈ ಭಾರಿ ಸದನದಲ್ಲಿ ಮಹತ್ವದ ಸಂಗತಿಗಳ ಪ್ರಸ್ತಾಪ ಮಾಡಲಾಗಿದೆ ಹಾಗು ಪಾದಯಾತ್ರೆ ನಾನಾ ಜಿಲ್ಲೆಗಳ ಮೂಲಕ ಹಾಯ್ದು ಅಧಿವೇಶನ ಆರಂಭವಾಗುವ ದಿನ ಬೆಳಗಾವಿ ತಲುಪಿ ಸಮಾವೇಶವಾಗಿ ಪರಿವರ್ತನೆತಗಲಿದೆ ಎಂದು ದೇವರಹಿಪ್ಪರಗಿ,ಶಾಸಕ ಪಾಟೀಲ ನಡಹಳ್ಳಿ ಹೇಳಿದ್ದಾರೆ.

ಉತ್ತರಕರ್ನಾಟಕದ ಜನರ ಸ್ವಾಭಿಮಾನ ಮತ್ತು ಹಕ್ಕಿನ ಜಾಗೃತಿಗೆ ನ.6 ರಿಂದ ರಾಯಚೂರಿನಿಂದ ಬೆಳಗಾವಿ ಸುವರ್ಣ ವಿಧಾನ ಸೌಧ ವರೆಗೆ ಪಾದಯಾತ್ರೆ ಕೈಗೊಳ್ಳಲಿದೆ. ಸುವರ್ಣ ವಿಧಾನಸೌಧದಲ್ಲಿ ಸರಕಾರ ವಾರ್ಷಿಕ 30 ದಿನಗಳ ಕಾಲ ಅಧಿವೇಶನ ನಡೆಸಬೇಕು. ಈ ಸಂಬಂಧ ವಿಧಾನಸಭಾಧ್ಯಕ್ಷರಿಗೆ ವಿಸ್ಕೃತ ಪತ್ರ ಬರೆದು ಒತ್ತಾಯಿಸಿದ್ದೇನೆ ಎಂದು ಅವರು ಸುವರ್ಣ ಸೌಧದ ಮೂಲ ಹಿತಾಸಕ್ತಿಯನ್ನು ಈವರೆಗೆ ಸರಕಾರಗಳು ಕಡೆಗಣಿಸಿವೆ. ಅದನ್ನು ಟೂರಿಂಗ್ ಟಾಕೀಸ್ ಮಾಡಿ ಯಾವಾಗಲೋ 10  ದಿನಗಳ ಕಾಲ ಬಂದು ಹೋಗುತ್ತಿವೆ. ಕೋಟಿ ರೂ. ವೆಚ್ಚ ಮಾಡಿ ಬೆಂಗಳೂರು ವಿಧಾನಸೌಧದಲ್ಲಿ ವಜ್ರಮಹೋತ್ಸವದ ಆಚರಣೆ ಮಾಡುತ್ತಿದ್ದರೆ, ಇಲ್ಲಿ ಕಸ ಹೊಡೆಯಲು ದಿಕ್ಕಿಲ್ಲ ಎಂದು ಆಕ್ರೋಶ ವ್ಯೆಕ್ತಪಡಿಸಿದರು. ಉತ್ತರಕರ್ನಾಟಕಕ್ಕೆ ಮೊದಲಿಂದಲೂ ಅನ್ಯಾಯವಾಗಿದೆ. ಹಾಗಂತ ಪ್ರತ್ಯೇಕ ಉತ್ತರಕರ್ನಾಟಕ ರಾಜ್ಯ ರಚನೆಯ ಬೇಡಿಕೆಗೆ ತಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದರು. ನಡಹಳ್ಳಿ ಉತ್ತರಕರ್ನಾಟಕದ ಪರ ಧ್ವನಿ ಎತ್ತಿದಕ್ಕೆ ಕಾಂಗ್ರೆಸ್ ತಮ್ಮನು ಉಚ್ಚಾಟನೆ ಮಾಡಿದೆ ಎಂದು ದೂರಿದರು.  

 

Edited By

Shruthi G

Reported By

jds admin

Comments