ವಜ್ರಮಹೋತ್ಸವದಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ಯೇಕೆ ?

25 Oct 2017 12:30 PM |
4778 Report

60ರ ಸಂಭ್ರಮದ ಹಿನ್ನಲೆಯಲ್ಲಿ ವಿಧಾನಸೌಧ ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿದೆ. ವಿಧಾನಸೌಧ ವಜ್ರಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದಕ್ಕಾಗಿ ಕೋಟಿಗಟ್ಟಲೇ ಹಣವನ್ನು ಸುರಿಯಲಾಗಿದೆ.

ವಜ್ರಮಹೋತ್ಸವದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಊಟಕ್ಕೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿರುವುದಕ್ಕೆ ಜೆಡಿಎಸ್ ರಾಜ್ಯಾದ್ಯಕ್ಷ ಎಚ್,ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಶಾಸಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಆದರೆ, ಯಾರೂ ಸಹ ಅಲ್ಲಿ ಊಟ ಮಾಡಬಾರದು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಒಂದು ಗುಟುಕು ನೀರು ಕುಡಿಯದೆ ರಾಷ್ಟ್ರಪತಿ ಭಾಷಣ ಮುಗಿಯುತ್ತಿದ್ದಂತೆಯೇ ಎಲ್ಲರೂ ವಿಧಾನಸೌಧದಿಂದ ಹೊರಬರಬೇಕು ಎಂದು ಸೂಚಿಸಿದ್ದರು . ಮಧ್ಯಾಹ್ನ 1.30ಕ್ಕೆ ವಿಧಾನಸೌಧದ ಹುಲ್ಲುಹಾಸಿನ ಮೇಲೆ ಭೋಜನಕೂಟವನ್ನು ಏರ್ಪಡಿಸಲಾಗಿದೆ. 

ಐತಿಹಾಸಿಕ  ಕ್ಷಣವನ್ನು ಸಾಕ್ಷೀಕರಿಸುವ ಹಿನ್ನೆಯಲ್ಲಿ ಫೋಟೋ ಸೆಷನ್ ನನ್ನ ನಿಗಧಿ ಮಾಡಲಾಗಿತ್ತು. ಎಲ್ಲಾರಿಗೂ ಎಲ್ಲೆಲ್ಲಿ  ಕುತಿತುಕೊಳ್ಳಬೇಕು ಎಂಬುದರ ಬಗ್ಗೆ ಆಸನಗಳನ್ನು ಏರ್ಪಡಿಸಲಾಗಿತ್ತು.ಆದ್ರೆ ನಾನು ಮಾಜಿ ಮುಖ್ಯಮಂತ್ರಿ ನನಗೆ ಸಿಗಬೇಕಾದ ಗೋರಾವ ಸಿಕ್ಕಿಲ್ಲ. ನನಗೆ ಎಲ್ಲೋ ಒಂದು ಹಿಂಬಾಲಿ ಸೀಟನ್ನು ಕೊಟ್ಟಿದ್ದಾರೆ. ಆಸನದ ವ್ಯವಸ್ಥೆ ಯನ್ನು ಸರಿಯಾಗಿ ಮಾಡಿಲ್ಲ ಎಂದು ಆಕ್ರೋಶ ಗೊಂಡು ಕುಮಾರಸ್ವಾಮಿಯವರು ಹೊರನಡೆದಿದ್ದಾರೆ. ಜೊತೆಗೆ ಅವರು ತಮ್ಮ ಶಾಸಕರನ್ನು ಕರೆದುಕೊಂಡು ಫೋಟೋ ಸೆಷನ್ ನಿಂದ ಹೊರ ನಡೆದಿದ್ದ್ರೆ. ನಾನು ಮಾಜಿ ಸಿಎಂನಂಗೆ ಎಲ್ಲೋ ಹಿಂಬದಿಯಲ್ಲಿ ಸೀಟು ಕೊಟ್ಟಿದ್ದಾರೆ ಅಲ್ಲದೆ ದೇವೇಗೌಡರ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ  ಬೇಸರ ವ್ಯಕ್ತಪಡಿಸಿದ್ದಾರೆ. 

Edited By

Suresh M

Reported By

hdk fans

Comments