ರಾಜ್ಯದ ಕಿಕ್ ಬ್ಯಾಕ್ ಮುಖ್ಯಮಂತ್ರಿ ಸಿದ್ದರಾಮಯ್ಯ : ಎಚ್ ವಿಶ್ವನಾಥ್

05 Oct 2017 1:31 PM |
3482 Report

ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ. ಆ ಸಂಧಿ ಯಾವುದು ಅಂತ ನನಗೆ ಗೊತ್ತಿಲ್ಲಪ್ಪ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯಗೆ ಏಕವಚನವು ಗೊತ್ತಿಲ್ಲ ಹಾಗೂ ಬಹುವಚನವು ಗೊತ್ತಿಲ್ಲ ಎಂದು ಮಾಜಿ ಸಂಸದ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ….

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವನಾಥ್ ಒಬ್ಬ ಹುಚ್ಚ ಅಂತಾ ಸಿಎಂ ಖಾಸಗಿ ಮಾತುಕತೆಯಲ್ಲಿ ಹೇಳಿದ್ದಾರೆ. ಇದು ಸರಿಯಲ್ಲ, ಇಷ್ಟು ಲಘುವಾಗಿ ಮಾತಾಡಬೇಡಿ. ಅನ್ನಭಾಗ್ಯದಂತಹ ಯೋಜನೆ ನಿಮಗೆ ಕೊಟ್ಟಿದ್ದು ಇದೇ ವಿಶ್ವನಾಥ್ ನೆನಪಿರಲಿ. ನಿಮ್ಮ ಗನ್ ಮ್ಯಾನ್ ಥರ ನಾನು ಎಲ್ಲರ ಮನೆಗೆ ಕರೆದುನನಗೆ ಮತ ಹಾಕಬೇಡಿ ಅನ್ನೋಕೆ ನೀವೇನೂ ಕುರುಬ ಸಮಾಜದ ಮನೆ ನಡೆಸುವ ವ್ಯಕ್ತಿಯೇ? ನಿಮಗೆ ದುಡಿದೆ, ಅಧಿಕಾರ ಇದೆ, ದರ್ಪ ಇದೆ. ಆದರೆ ಕಾಮನ್ ಸೆನ್ಸ್ ಇಲ್ಲ ಎಂದು ಸಿಎಂ ವಿರುದ್ಧ ವಿಶ್ವನಾಥ್ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಇಡೀ ಕುರುಬರೆಲ್ಲಾ ನನ್ನ ಜೊತೆ ಇದ್ದಾರೆ ಅಂತಾ ಅಂದುಕೊಂಡಿದ್ದೀರಾ. ಹಿಂದೆ ಆ ಕಾಲ ಇತ್ತು. ಆದರೆ ಈಗ ಹಾಗಿಲ್ಲ. ನಿಮ್ಮ ಜೊತೆ ಕುರುಬರು ಇಲ್ಲ. ಈ ರಾಜ್ಯದ ಒಬ್ಬ ಕಿಕ್ ಬ್ಯಾಕ್ ಸಿಎಂ ಅಂದರೆ ಸಿದ್ದರಾಮಯ್ಯ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲೂ ಚುನಾವಣೆಗೆ ನಿಲ್ಲಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ಎದರಿಸೋಕೆ ಹೀಗೆ ಹೇಳುತ್ತಿದ್ದಾರೆ. ಚುನಾವಣೆಗೆ ಒಂದು ತಿಂಗಳು ಮುಂಚೆ ನಾನು ಎಲ್ಲೂ ಚುನಾವಣೆಗೆ ನಿಲ್ಲಲ್ಲ ಅಂತಾ ಹೇಳುತ್ತಾರೆ. ನೋಡ್ತಾ ಇರಿ ಎಂದರು.

Edited By

Suresh M

Reported By

jds admin

Comments