ಸಾಮರಸ್ಯ ಉಳಿಸುವ ಕಾರ್ಯವಲ್ಲ : ಸಿಎಂ ಸಿದ್ದರಾಮಯ್ಯ

28 Sep 2017 12:33 PM |
1634 Report

‘ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿರುವ ಗೋವಾ ಸರ್ಕಾರ ಪದೇ ಪದೇ ಕನ್ನಡಿಗರ ಮೇಲೆ ಈ ರೀತಿಯ ವರ್ತನೆ ತೋರುತ್ತಿರುವುದು ಸರಿಯಲ್ಲ. ಸಾಮರಸ್ಯ ಉಳಿಯಬೇಕಾದರೆ ರಾಜ್ಯಗಳ ನಡುವೆ ಪರಸ್ಪರ ಸಹಕಾರ, ಸಹಾಯ ಇರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಗೋವಾ ನಡೆದುಕೊಳ್ಳಬೇಕು’ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ಗೋವಾ ಬೈನಾ ಬೀಚ್‌ನಲ್ಲಿ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿರುವ ಅಲ್ಲಿನ ಸರ್ಕಾರದ ಕ್ರಮ ಒಕ್ಕೂಟ ವ್ಯವಸ್ಥೆಯಲ್ಲಿ ಸಾಮರಸ್ಯ ಉಳಿಸುವಂತಹದ್ದಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ‘ಗೋವಾದಲ್ಲಿ ವಾಸ ಮಾಡುತ್ತಿದ್ದ ಕನ್ನಡಿಗರು ಕಾನೂನು ಉಲ್ಲಂಘಿಸಿ ಮನೆಗಳನ್ನು ಕಟ್ಟಿಕೊಂಡಿದ್ದರೆ ಕ್ರಮ ಕೈಗೊಳ್ಳಲಿ. ಆದರೆ, ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಬೇಕಲ್ಲವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.‘ಈ ಕುರಿತು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ದೂರವಾಣಿ ಮೂಲಕವೂ ಮಾತುಕತೆ ನಡೆಸುತ್ತೇನೆ’ ಎಂದೂ ಸಿದ್ದರಾಮಯ್ಯ ಹೇಳಿದರು.

Edited By

Hema Latha

Reported By

congress admin

Comments