ಶಸ್ತ್ರ ಚಿಕಿತ್ಸೆ ನಂತರ ಎಚ್.ಡಿ.ಕೆಯ ಮೊದಲ ಪತ್ರಿಕಾ ಹೇಳಿಕೆ

25 Sep 2017 3:33 PM |
3309 Report

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೃದಯಕ್ಕೆ ಸಂಬಂಧಿಸಿದ ಲ್ಯಾಪ್ರೋಸ್ಕೋಪಿಕ್ ಕೀ ಹೋಲ್ ಶಸ್ತ್ರಚಿಕಿತ್ಸೆಯನ್ನು ಅಪೋಲೋ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಹೃದ್ರೋಗ ತಜ್ಞ ಡಾ.ಸತ್ಯಕಿ ನಂಬಾಲ ನೇತೃತ್ವದ ನಾಲ್ಕು ವೈದ್ಯರ ತಂಡ ಸತತ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ....

ಅಭಿಮಾನಿಗಳ, ಕಾರ್ಯಕರ್ತರ ಪ್ರಾರ್ಥನೆ ಮಗನ ರಕ್ಷಣೆ ಮಾಡಿದೆ ಎಂದು ಗೌಡರು ಹೇಳಿದರು. ಎಚ್ಡಿಕೆ ಅವರನ್ನು ಆಪರೇಷನ್ ನಂತರ ಮೂರು ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು , 12 ಗಂಟೆ ನಂತರ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬಂದಿತು. ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ಆಸ್ಪತ್ರೆಯಲ್ಲಿ ಜೆಡಿಎಸ್ ವಕ್ತಾರ ಶಿವರಾಮೇಗೌಡ, ಶಾಸಕ ಸಾ.ರಾ.ಮಹೇಶ್, ಮೈಸೂರು ಮೇಯರ್ ರವಿಕುಮಾರ್, ಎಚ್.ಡಿ.ಕೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಕುಮಾರಸ್ವಾಮಿ ಸಹೋದರಿ ಶೈಲಜಾ ಮತ್ತಿತರ ಕುಟುಂಬಸ್ಥರು ಹಾಗೂ ನೂರಾರು ಅಭಿಮಾನಿಗಳು ಹಾಜರಿದ್ದರು.

ನೂರಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಅರಮನೆ ಸಮೀಪದ ಗಣಪತಿ ಮತ್ತು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರಸ್ವಾಮಿಯವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಈ ಬಗ್ಗೆ ಮಾತನಾಡಿದ  ಎಚ್.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ನಾಡಿನ ಜನತೆ ತೋರಿಸುತ್ತಿರುವ ಕಾಳಜಿಯಿಂದ ಮನಸ್ಸು ತುಂಬಿ ಬಂದಿದೆ. ಇಂತಹ ಪ್ರೀತಿಗೆ ಪಾತ್ರನಾಗಿರುವುದರಿಂದ ಜನರ ಸೇವೆಯನ್ನು ಇನ್ನೂ ಹೆಚ್ಚು ಕಳಕಳಿಯಿಂದ ಮಾಡುವ ಉತ್ಸಾಹ ಇಮ್ಮಡಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನನ್ನ ಹೃದಯ ಚಿಕಿತ್ಸೆಯ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Edited By

Suresh M

Reported By

hdk fans

Comments