ಸಾಮಾಜಿಕ ಜಾಲತಾಣಗಳ ಫಾಲೊವರ್ಸ್ ನಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿರನ್ನು ಹಿಂದಿಕ್ಕಿದ ಬಿ.ಎಸ್‌.ಯಡಿಯೂರಪ್ಪ

25 Sep 2017 12:21 PM |
2100 Report

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಅಬ್ಬರದ ಸಿದ್ಧತೆಗಳನ್ನು ಆರಂಭಿಸುತ್ತಿದ್ದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿವೆ. ಆದರೆ, ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಗಳು ಮಾತ್ರ ಸಾಮಾಜಿಕ ಜಾಲತಾಣಗಳನ್ನು ಪರಿಣಾಮ ಕಾರಿಯಾಗಿ ಬಳಸಿಕೊಳ್ಳುವಲ್ಲಿ ಅಷ್ಟೊಂದು ಕ್ರಿಯಾಶೀಲರಾಗಿಲ್ಲ......

ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ಈ ಪೈಕಿ ಮೊದಲ ಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಿಕ್ಕಿದೆ. ಅವರ ಫೇಸ್‌ಬುಕ್‌ ಪೇಜ್‌ಗೆ 1.36 ಲಕ್ಷ ಮತ್ತು ಟ್ವಿಟರ್‌ ಪೇಜ್‌ಗೆ 1.25 ಲಕ್ಷ ಬೆಂಬಲಿಗರಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೇಸ್‌ಬುಕ್‌ ಪೇಜ್‌ 56,600 ಮತ್ತು ಟ್ವಿಟರ್‌ ಪೇಜ್‌ 13600 ಬೆಂಬಲಿಗರನ್ನು ಹೊಂದಿವೆ. ಇನ್ನು ಎಚ್‌.ಡಿ.ಕುಮಾರಸ್ವಾಮಿ ಅವರ ಫೇಸ್‌ಬುಕ್‌ ಪೇಜ್‌ಗೆ 3664 ಮತ್ತು ಟ್ವಿಟರ್‌ ಪೇಜ್‌ಗೆ 5890 ಬೆಂಬಲಿಗರಿದ್ದಾರೆ.

Edited By

Suresh M

Reported By

Admin bjp

Comments