ಅಮೆರಿಕದಲ್ಲಿ ಉದ್ಯಮಿಗಳನ್ನು ಭೇಟಿ ಮಾಡಲಿರುವ ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್

11 Sep 2017 11:46 AM |
2121 Report

ಜಾಗತಿಕ ಚಿಂತಕರನ್ನು, ವಾಣಿಜ್ಯೋದ್ಯಮಿಗಳನ್ನು, ರಾಜಕೀಯ ನಾಯಕರನ್ನು, ಸಾಗರೋತ್ತರ ಭಾರತೀಯನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ, ವಿಚಾರ – ವಿನಿಮಯ ನಡೆಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೆರಿಕಾಗೆ ಎರಡು ವಾರಗಳ ಭೇಟಿಗೆ ನಾಳೆ ತೆರಳುತ್ತಿದ್ದಾರೆ.

 

ಎರಡು ವಾರಗಳ ತಮ್ಮ ಅಮೆರಿಕ ಭೇಟಿಯ ಸಂದರ್ಭದಲ್ಲಿ ಜಾಗತಿಕವಾಗಿ, ಆರ್ಥಿಕ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿಯ ಬೆಳವಣಿಗೆಗಳು, ಅವಕಾಶಗಳು, ರಾಜಕೀಯ ವಿದ್ಯಮಾನಗಳು, ಇತ್ಯಾದಿ ವಿಷಯಗಳ ಮೇಲೆ ಚಿಂತನ – ಮಂಥನ ನಡೆಸಲಿದ್ದಾರೆ ಎಂದು ರಾಹುಲ್ ಗಾಂಧಿ ಅವರ ಪ್ರವಾಸದ ಯೋಜಕ ಹಾಗೂ ತಂತ್ರಜ್ಞ ಸ್ಯಾಮ್ ಪಿಟ್ರೋಡ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ, ಬರ್ಕಿಲೆ ವಿಶ್ವವಿದ್ಯಾನಿಲಯಗಳಲ್ಲಿ ಭಾಷಣ ಮಾಡಲಿರುವ ರಾಹುಲ್ ಗಾಂಧಿ ಅಮೆರಿಕಾದ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಲಿದ್ದಾರೆ. ಹಾಗೆಯೇ ಸಾಗರೋತ್ತರ ಭಾರತೀಯರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ .

Edited By

Suresh M

Reported By

congress admin

Comments