ಹಿಂದು ಕಾರ್ಯಕರ್ತರ ಹತ್ಯೆಗೆ ರಮಾನಾಥ ರೈ ಕಾರಣ : ಬಿಎಸ್​ವೈ

06 Sep 2017 12:54 PM |
1466 Report

ಮಂಗಳೂರು ಚಲೋ ಜಾಥಾ ವಿಚಾರವಾಗಿ ಮಂಗಳೂರಿನಲ್ಲಿ ಬಿ.ಜೆ.ಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪ ರಮಾನಾಥ ರೈ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

 

ಸುದ್ದಿಗಾರರ ಜೊತೆ ಮಂಗಳೂರಿನಲ್ಲಿ ಮಾತನಾಡಿದ ಬಿಎಸ್​ವೈ,ಯಾವುದೆ ಕಾರಣಕ್ಕೂ ಬಿಜೆಪಿಯ ಪ್ರತಿಭಟನಾ ಜಾಥಾ ನಡೆದೇ ನಡೆಯುತ್ತೆ  ಎಂದು ಸ್ಪಷ್ಟಪಡಿಸಿದ್ದಾರೆ.ಕರ್ನಾಟಕದಲ್ಲಿ ಈಗಾಗಲೇ 24 ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ ಅದರಲ್ಲೂ ದ.ಕ. ಜಿಲ್ಲೆಯಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗೆ ಸಚಿವ ರಮಾನಾಥ ರೈ  ಕಾರಣ ಎಂದು ಆರೋಪಿಸಿದ್ದಾರೆ.

ಬಿಜೆಪಿ ಈ ಹೋರಾಟವನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ, ರೈ ರಾಜೀನಾಮೆ ನೀಡೋವರೆಗೂ ಈ ಹೋರಾಟ ನಿಲ್ಲಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

Edited By

Suresh M

Reported By

Admin bjp

Comments