ಬಿಎಸ್ವೈ 'ಶಿಕಾರಿ'ಗೆ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್?

31 Aug 2017 10:29 AM |
2299 Report

ಬೇರು ಮಟ್ಟದಲ್ಲಿ ಪಕ್ಷ ಸಂಘಟಿಸಿ, ಕಾರ್ಯಕರ್ತರನ್ನು ಹುರಿದುಂಬಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಯಡಿಯೂರಪ್ಪನವರನ್ನು, ಅವರ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲೇ ಸೋಲಿಸಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ನಡೆಸುತ್ತಿದ್ದಾರೆಂದು ಟಿವಿ9 ವರದಿ ಮಾಡಿದೆ.

ಸತತವಾಗಿ ಶಿಕಾರಿಪುರ ಕ್ಷೇತ್ರದಿಂದ ಗೆದ್ದು ಬರುತ್ತಿರುವ ಯಡಿಯೂರಪ್ಪನವರಿಗೆ ಬೆನ್ನಿಗೆ ಬೆನ್ನಾಗಿ ನಿಂತಿದ್ದ ಮಹಾಲಿಂಗಪ್ಪನವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿ ಮತ್ತೆ ಆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುವಂತೆ ಮನವೊಲಿಸಿದ್ದಾರೆ ಎನ್ನುವ ಮಾಹಿತಿಯಿದೆ.

1999ರ ಅಸೆಂಬ್ಲಿ ಚುನಾವಣೆಯಲ್ಲಿ (ಶಿಕಾರಿಪುರ) ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹಾಲಿಂಗಪ್ಪ, ಯಡಿಯೂರಪ್ಪನವರನ್ನು ಸೋಲಿಸಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆನಂತರ ಇಬ್ಬರು ನಾಯಕರ ಸಂಧಾನದ ನಂತರ ಮಹಾಲಿಂಗಪ್ಪ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆ ಚುನಾವಣೆಯಲ್ಲಿ ಮಹಾಲಿಂಗಪ್ಪ 7561 ಮತಗಳ ಅಂತರದಿಂದ ಬಿಎಸ್ವೈ ಅವರನ್ನು ಸೋಲಿಸಿದ್ದರು. ಮಹಾಲಿಂಗಪ್ಪಗೆ 55852 ಮತಗಳು, ಯಡಿಯೂರಪ್ಪಗೆ 48291 ಮತಗಳು ಬಂದಿದ್ದವು.

Edited By

Joy Bose

Reported By

congress admin

Comments