ರಾಜ್ಯದಲ್ಲಿ ಜೆಡಿಎಸ್ 'ಕಿಂಗ್ ಮೇಕರ್' ಆಗಲು ಸಾಧ್ಯವೇ?

29 Aug 2017 10:07 AM |
3051 Report

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮಿಷನ್113 ಘೋಷಿಸಿದ್ದು ಜೆಡಿಎಸ್ ಹೋರಾಟದ ಮುಂಚೂಣಿಯಲ್ಲಿದೆ. ಜೆಡಿಎಸ್ ಮುಖಂಡರುಗಳಾದ ಎಚ್ ಡಿ ದೇವೇಗೌಡ ಮತ್ತು ಕುಮಾರ ಸ್ವಾಮಿ ವಿಶ್ರಾಂತಿಯಿಲ್ಲದಂತೆ ಈಗಾಗಲೇ ಚುನಾವಣಾ ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹೋರಾಡುವಲ್ಲಿ ಜೆಡಿಎಸ್ ಉತ್ತಮ ಯೋಜನೆ ರೂಪಿಸಿದೆ.

ಹಳೇಯ ಮೈಸೂರು ಭಾಗದಲ್ಲಿ ಜೆಡಿಎಸ್ ಸಾಂಪ್ರಾದಾಯಿಕ ಪಕ್ಷ ಎಂದೇ ಗುರುತಿಸಿಕೊಂಡಿತ್ತು, ಆದರೆ ಸದ್ಯ ಉತ್ತರ ಕರ್ನಾಟಕದಲ್ಲಿಯೂ ಜೆಡಿಎಸ್ ದೊಡ್ಡ ಪ್ರಮಾಣದಲ್ಲಿ ರಣತಂತ್ರ ಮಾಡುತ್ತಿದೆ. ಬರ ಪೀಡಿತ ಜಿಲ್ಲೆಗಳ ಭೇಟಿ ಹಾಗೂ ಸಹಾಯ ಮತ್ತು ಹೆಚ್ಚಾಗಿ ರೈತರ ಓಲೈಕೆಯಲ್ಲಿ ಜೆಡಿಎಸ್ ಮುಳುಗಿದೆ.

ಇನ್ನೂ ಜಾತಿ ಲೆಕ್ಕಾಚಾರವನ್ನು ಮನಗಂಡಿರುವ ಜೆಡಿಎಸ್ ಲಿಂಗಾಯತರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಜೊತೆಗೆ  ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರ ಪಟ್ಟಿ ರಿಲೀಸ್ ಮಾಡಲು ಕಾಯುತ್ತಿದೆ. 

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೇ ಕೆಲವು ಮತಗಳ ಅಂತರದಿಂದ ಜೆಡಿಎಸ್ 18 ಕ್ಷೇತ್ರಗಳಲ್ಲಿ ಪರಾಭವಗೊಂಡಿತು ಎಂದು ಹೇಳಿದೆ. 

ಹಳೇಯ ಮೈಸೂರು ಭಾಗದಲ್ಲಿ ತಮ್ಮ ಕೈ ಮೇಲಾಗಲಿದೆ ಎಂದು ಜೆಡಿಎಸ್ ಭರವಸೆ ಹೊಂದಿದೆ. ಬಿಜೆಪಿಗೆ ಈ ಪ್ರದೇಶದಲ್ಲಿ ಹೆಚ್ಚಿನ ಮಾನ್ಯತೆ ಇರದ ಕಾರಣ ಮತ ಹಂಚಿಕೆ ಪ್ರಮಾಣದಲ್ಲಿ ಕಡಿಮೆಯಾಗುವುದಿಲ್ಲ, ಈ ಭಾಗದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಪಕ್ಷದ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ. 

Edited By

hdk fans

Reported By

hdk fans

Comments