ಗುಣಮಟ್ಟದಲ್ಲಿ  ಇಂದಿರಾ ಕ್ಯಾಂಟೀನ್ ಗಿಂತ ಅಪ್ಪಾಜಿ ಕ್ಯಾಂಟೀನ್ ಬೆಸ್ಟ್

28 Aug 2017 2:56 PM |
1191 Report

ಮುಖ್ಯಮಂತ್ರಿ ಸಿದ್ದರಾಮಯ್ಯರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಆರಂಭಗೊಂಡು ವಾರ ಕಳೆದರೂ ಈವರೆಗೆ  ಕ್ಯಾಂಟೀನ್‍ ನಲ್ಲಿ ಕೊಡುವ ಆಹಾರದ ಗುಣಮಟ್ಟ ಪರೀಕ್ಷೆಯೇ ಆಗಿಲ್ಲ ಅಂದ್ರೆ ನಂಬ್ತೀರಾ..? ಹೌದು ನಂಬಲೇಬೇಕು.

ಯಾಕೆಂದ್ರೆ ತರಾತುರಿಯಲ್ಲಿ ಕ್ಯಾಂಟಿನ್ ಮಾಡಿದ ಬಿಬಿಎಂಪಿ, ಮತ್ತು ಸರ್ಕಾರಕ್ಕೆ ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಇಲಾಖೆಯಿಂದ ಅನುಮತಿ ಪತ್ರ ಪಡೆದೇ ಇಲ್ಲ. ಇದನ್ನು ಸ್ವತಃ ಬಿಬಿಎಂಪಿ ಕಮೀಷನರೇ ಒಪ್ಪಿಕೊಂಡಿದ್ದಾರೆ. ಇಂದಿರಾ ಕ್ಯಾಂಟೀನ್ ಹೋಲಿಸಿದರೆ ಅಪ್ಪಾಜಿ ಕ್ಯಾಂಟೀನ್ ಗುಣಮಟ್ಟದಲ್ಲಿ ಮೇಲೂ ಅನಿಸುತ್ತಿದೆ .

ಕ್ಯಾಂಟೀನ್‍ ಉದ್ಘಾಟನೆಗೂ ಮುನ್ನವೇ ಎಫ್‍ಎಸ್‍ಎಸ್‍ಎಐನಿಂದ 110  ಕ್ಯಾಂಟೀನ್‍ ಕಾರ್ಯಾಚರಣೆ ಮಾಡೋದಕ್ಕೆ ಅನುಮತಿ ಪಡೆಯಬೇಕಾಗಿತ್ತು. ಆದ್ರೆ ಇದುವರೆಗೂ ಅನುಮತಿ ಪಡೆದಿಲ್ಲ. ಬಡವರಿಗೆ ಊಟ ಹೆಂಗಾದ್ರೇನು ಅನ್ನೋ ತಾತ್ಸಾರನಾ ಅಥವಾ ಆಹಾರದ ಗುಣಮಟ್ಟ ಬಟಾಬಯಲಾಗುತ್ತೆ ಅನ್ನೋ ಅನುಮಾನನ ಗೊತ್ತಿಲ್ಲ. 

Edited By

Suresh M

Reported By

jds admin

Comments