ಮತ್ತೆ ಆಶ್ಚರ್ಯ ಮೂಡಿಸಿದ ಈಶ್ವರಪ್ಪ ಹೇಳಿಕೆ

16 Aug 2017 5:19 PM |
2684 Report

ಕಾರವಾರ: ನಾನು ಮತ್ತು ಬಿಎಸ್ ವೈ ಇಬ್ಬರು ರಾಮ ಲಕ್ಷ್ಮಣರಿದ್ದಂತೆ, ನಾವಿಬ್ಬರು ಅಣ್ಣ ತಮ್ಮಂದಿರಿದ್ದಂತೆ ಇದ್ದೇವೆ ಎಂದು ಹೇಳುವ ಮೂಲಕ ಕೆಎಸ್ ಈಶ್ವರಪ್ಪ ಅಚ್ಚರಿ ಮೂಡಿಸಿದ್ದಾರೆ. ಇಬ್ಬರ ನಾಯಕರ ಮಧ್ಯೆ ಮುನಿಸು ಇದೆ. ಆದ್ರೂ ಈ ಮಧ್ಯೆ ಬಿಎಸ್ ಯಡಿಯೂರಪ್ಪ ನವರನ್ನು ಕೆಎಸ್ ಈಶ್ವರಪ್ಪ ಬಣ್ಣಿಸಿರುವುದು ತಿಳಿದು ಬಂದಿದೆ.

ಕಾರವಾರದಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ , ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, 2018ರ ಚುನಾವಣೆಯನ್ನು ಒಟ್ಟಾಗಿಯೇ ಎದುರಿಸುತ್ತೇವೆ. ಮುಂಬರುವ ಎಲೆಕ್ಷನ್ ಗೆ ಟಿಕೆಟ್ ನೀಡಿದರೆ ಶಿವಮೊಗ್ಗದ ಮೇಲೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಒಬ್ಬ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯಲು ಸಿದ್ಧನಿದ್ದೇನೆ. ಟಿಕೆಟ್ ನೀಡುವ ವಿಚಾರ ಅಮಿತ್ ಶಾ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಇದೇ ವೇಳೆ ಡಿ.ಕೆ ಶಿವಕುಮಾರ್ ಕುರಿತು ಮಾತನಾಡಿರುವ ಅವರು, ನಾನೊಬ್ಬ ವ್ಯಾಪಾರಿ ನಮ್ಮ ಮನೆಯಲ್ಲಿ ನೋಟು ಎಣಿಸುವ ಯಂತ್ರವಿದೆ. ನೋಟು ಮುದ್ರಿಸುವ ಯಂತ್ರವಿಲ್ಲ, ಕಾಂಗ್ರೆಸ್ ನಾಯಕರ ಮನೆಯಲ್ಲಿ ನೋಟು ಮುದ್ರಣ ಯಂತ್ರವಿರಬಹುದು ಎಂದು ಕೆ.ಎಸ್ ಈಶ್ವರಪ್ಪ ಆರೋಪಿಸಿದರು.

Edited By

Admin bjp

Reported By

Admin bjp

Comments