ಆಗಸ್ಟ್ ಅಂತ್ಯಕ್ಕೆ ಸಿದ್ದರಾಮಯ್ಯ ಸಂಪುಟ ವಿಸ್ತರಣೆ?

09 Aug 2017 4:28 PM |
1974 Report

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ. ಆದ್ದರಿಂದ, ಆಗಸ್ಟ್ 16ರ ನಂತರ ಭೇಟಿಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಸಚಿವ ಮಹದೇವಪ್ಪ ನಿಧನದಿಂದ ಒಂದು ಸ್ಥಾನ ತೆರವಾಗಿದೆ. ಎಚ್.ವೈ.ಮೇಟಿ ಮತ್ತು ಡಾ.ಜಿ.ಪರಮೇಶ್ವರ ಅವರ ರಾಜೀನಾಮೆಯಿಂದ ಎರಡು ಸ್ಥಾನಗಳು ತೆರವಾಗಿದ್ದು, ಒಟ್ಟು ಮೂರು ಸಚಿವ ಸ್ಥಾನಗಳನ್ನು ಭರ್ತಿ ಮಾಡಬೇಕಿದೆ.

ಮೂರು ಖಾತೆಗಳ ಪೈಕಿ ಪ್ರಮುಖವಾದ ಗೃಹ ಖಾತೆಗೆ ಯಾವುದೇ ಸಚಿವರು ಇಲ್ಲ. ಸದ್ಯ, ಸಿದ್ದರಾಮಯ್ಯ ಅವರೇ ಗೃಹ ಖಾತೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

Edited By

congress admin

Reported By

congress admin

Comments