ಆಗಸ್ಟ್ 15 ರಂದು 125 ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

05 Aug 2017 5:48 PM |
2567 Report

ಬೆಂಗಳೂರು: ಆಗಸ್ಟ್ 15 ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಲಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದಿರಾ ಕ್ಯಾಂಟೀನ್ ಸಂಬಂಧ ಚರ್ಚೆ ನಡೆಸಲಾಯಿತು, ಇಂದಿರಾ ಕ್ಯಾಂಟೀನ್ ಆರಂಭದಿಂದ ಬಡವರಿಗೆ ಒಳ್ಳೆಯದಾಗಲಿದೆ. ಆದರೆ, ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ವಿರೋಧ ಮಾಡಬೇಕು ಎಂದು ವಿರೋಧಿಸುವುದು ಸರಿಯಲ್ಲ. ಈ ಧೋರಣೆಯನ್ನು ಬದಲಿಸಿಕೊಳ್ಳಬೇಕು ಎಂದರು.

ಈ ಕ್ಯಾಂಟೀನ್‌ನಲ್ಲಿ ಮಾಂಸಹಾರ ಸಿಗಲ್ಲ. ಕೇವಲ ಸಸ್ಯಾಹಾರ ಮಾತ್ರ ಸಿಗಲಿದೆ. ಬಡವರಿಗೆ ನೆರವಾಗುವ ಯೋಜನೆ ಎನ್ನುವ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದೇವೆ. ಕ್ಯಾಂಟೀನ್ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ 125 ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Edited By

congress admin

Reported By

congress admin

Comments