ಕಾಂಗ್ರೆಸ್ ಹಿಂದೆ, ನಂ.1 ಸ್ಥಾನ ಪಡೆದ ಬಿಜೆಪಿ

05 Aug 2017 11:35 AM |
3907 Report

ನವದೆಹಲಿ: ರಾಜ್ಯಸಭೆಯಲ್ಲಿ ಇದುವರೆಗೆ ಅತೀ ದೊಡ್ಡ ಪಕ್ಷವೆಂಬ ಹೆಗ್ಗಳಿಕೆ ಹೊಂದಿದ್ದ ಕಾಂಗ್ರೆಸ್ ಹಿಂದೆ ಬಿದ್ದಿದೆ. ಇದೀಗ ಆ ಪಟ್ಟ ಕಳೆದುಕೊಂಡಿದೆ.ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿಂದಿಕ್ಕಿ ಬಿಜೆಪಿ ನಂ.1 ಪಟ್ಟಕ್ಕೇರಿದೆ. ಮಧ್ಯಪ್ರದೇಶದ ಮಹಿಳೆ ಸಂಪತೀಯ ಉಯ್ಕೆ ರಾಜ್ಯಸಭೆಗೆ ಆಯ್ಕೆಯಾಗುವುದರೊಂದಿಗೆ ಬಿಜೆಪಿ ಸದಸ್ಯರ ಸಂಖ್ಯೆ 58 ಕ್ಕೇರಿದೆ.

ಕಾಂಗ್ರೆಸ್ ಈಗ 58 ಸದಸ್ಯರನ್ನು ಹೊಂದಿದೆ. ಉಳಿದಂತೆ ಸಮಾಜವಾದಿ ಪಕ್ಷ 18, ಎಐಎಡಿಎಂಕೆ 13, ತೃಣಮೂಲ ಕಾಂಗ್ರೆಸ್ 12 ಮತ್ತು ಜೆಡಿಯು 10 ಸದಸ್ಯರನ್ನು ಹೊಂದಿದೆ. ಮುಂದಿನ ವಾರ ರಾಜ್ಯ ಸಭೆಗೆ  ಪ.ಬಂಗಾಲ, ಗುಜರಾತ್ ನಲ್ಲಿ ಚುನಾವಣೆ ನಡೆಯಲಿದ್ದು, ನಂ.1 ಪಟ್ಟ ಬಿಜೆಪಿ ಕೈತಪ್ಪುತ್ತಾ ಕಾದು ನೋಡಬೇಕಿದೆ.

Edited By

Admin bjp

Reported By

Admin bjp

Comments