ಡಿಕೆಶಿ ಬಳಿಕ ಮತ್ತೊಬ್ಬ ಸಚಿವರ ಮೇಲೆ ಐಟಿ ದಾಳಿ ಭೀತಿ !

02 Aug 2017 6:49 PM |
1738 Report

ಡಿ.ಕೆ. ಶಿವಕುಮಾರ್ ಅವರ ಮನೆ ಮೇಲಿನ ಐಟಿ ದಾಳಿ ಬಳಿಕ ಕರ್ನಾಟಕದ ಮತ್ತೊಬ್ಬ ಪ್ರಭಾವಿ ಸಚಿವರ ಮನೆ ಮೇಲೂ ಐಟಿ ದಾಳಿ ನಡೆಯುತ್ತಾ..? ಹೌದು ಎನ್ನುತ್ತಿದ್ದಾರೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್.

ಆದಾಯ ತೆರಿಗೆ ಇಲಾಖೆ ನನ್ನನ್ನೂ ಟಾರ್ಗೆಟ್ ಮಾಡಿದೆ. ಐಟಿ ಅಧಿಕಾರಿಗಳು ನನ್ನ ಮನೆಗೆ ಬಂದರೆ ಸ್ವಾಗತ ಕೋರುತ್ತೇನೆ ಎಂದು ಮಾಧ್ಯಮಗಳ ಜೊತೆ ಮಾತನಾಡಿರುವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಕೆಲ ಬಿಜೆಪಿ ನಾಯಕರೇ ನನ್ನ ಮನೆ ಮೇಲೆ ಐಟಿ ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತ, ದಾಳಿಯನ್ನ ಮುಂದುವರೆಸಿರುವ ಐಟಿ ಅಧಿಕಾರಿಗಳು ಮೈಸೂರಿನ ಡಿ.ಕೆ. ಶಿವಕುಮಾರ್ ಅವರ ಮಾವನ ಮನೆಯಲ್ಲೂ ಪರಿಶೀಲನೆ ನಡೆಸಿದೆ. ಡಿ.ಕೆ. ಶಿವಕುಮಾರ್ ಅವರ ಮಾವ ತಿಮ್ಮಯ್ಯ ಻ವರನ್ನ ವಿಚಾರಣೆಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. 

Edited By

congress admin

Reported By

congress admin

Comments