"ಬೆಂಗಳೂರು ಡಿಕ್ಲರೇಷನ್‌'” ನಿರ್ಣಯಗಳನ್ನು ಬಿಡುಗಡೆ ಮಾಡಿದ ಸಿದ್ದರಾಮಯ್ಯ  

25 Jul 2017 1:01 PM |
1054 Report

ಬೆಂಗಳೂರು ಡಿಕ್ಲರೇಷನ್‌' ಹೆಸರಿನಲ್ಲಿ ಡಾ.ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಗಿದೆ, ಎಸ್‌ಸಿ-ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಇಂಗ್ಲಿಷ್‌ ಶಿಕ್ಷಣ ನೀಡುವುದು, ಜಾತಿ ಮತ್ತು ಸಾಮಾಜಿಕ ಗಣತಿ ಶೀಘ್ರ ಬಿಡುಗಡೆ ಮಾಡುವುದು, ದಲಿತ ಸಮುದಾಯದ ಎಲ್ಲ ಒಳ ಸಮುದಾಯಗಳಿಗೆ ಸಮಾನವಾಗಿ ಒಳ ಮೀಸಲಾತಿ ಕಲ್ಪಿಸುವುದು, ದಲಿತರಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವುದು ಸೇರಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ  ನಿರ್ಣಯಗಳನ್ನು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಘೋಷಿಸಿದರು.

ಪ್ರಮುಖ ಅಂಶಗಳನು ವಿವರಿಸಿದರು:
*ಎಸ್ಸಿ, ಎಸ್ಟಿ ಸಮುದಾಯದ ಭೂ ಒಡೆತನವನ್ನು ಖಾತ್ರಿ ಪಡಿಸಲು ಹೊಸ ಕಾನೂನು ಹಾಗೂ ಅವುಗಳ ಕಠಿಣ ಜಾರಿ ಆಗಬೇಕು.
*ನವೋದಯ ವಿದ್ಯಾಲಯ ಮಾದರಿಯಲ್ಲಿ ಎಸ್ಸಿ, ಎಸ್‌ಟಿ ಸಮುದಾಯಗಳಿಗೆ ಶಾಲೆ ನಿರ್ಮಿಸಬೇಕು.
*ಎಸ್ಸಿ, ಎಸ್ಟಿ ಸಮುದಾಯಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು.
*ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಬಡ್ತಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು.
*ಮಾಧ್ಯಮಗಳ ಮೇಲಿನ ಹಾಗೂ ಪತ್ರಕರ್ತರ ಮೇಲಿನ ದಾಳಿ ತಡೆಯಲು ಕಠಿಣ ಕಾನೂನು ಜಾರಿಯಾಗಬೇಕು..
*ಕರ್ನಾಟಕದಲ್ಲಿ 50 ಲಕ್ಷ ರೂ.ವರೆಗಿನ ಟೆಂಡರ್ನಲ್ಲಿ ದಲಿತರಿಗೆ ನೀಡಿರುವಂತೆ ದೇಶಾದ್ಯಂತ 100 ಲಕ್ಷದ ವರೆಗಿನ ಕಾಮಗಾರಿಯಲ್ಲಿ ಮೀಸಲಾತಿ ನೀಡಬೇಕು.
*ಎಸ್ಸಿ, ಎಸ್ಟಿ ಗಳಿಗೆ ಭೂಮಿ ಸುರಕ್ಷತೆ ನೀಡಲು ಲ್ಯಾಂಡ್‌ ಬ್ಯಾಂಕ್‌ ಮಾಡಬೇಕು.
*ಹಿಂಸೆಗಳಲ್ಲಿ ತೊಡಗುವವರ ವಿರುದ್ಧ ಮತ, ಜಾತಿ ಭೇದವಿಲ್ಲದೆ ಕ್ರಮ ಕೈಗೊಳ್ಳಬೇಕು.
*ಪೊಲೀಸ್‌ ವ್ಯವಸ್ಥೆ ರಾಜಕೀಯದಿಂದ ಸಂಪೂರ್ಣ ಮುಕ್ತವಾಗಿಸಿ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು.

*ಅನ್ನದಾತರ ಆದಾಯ ಖಾತ್ರಿಪಡಿಸಲು ರೈತರ ಆದಾಯ ಆಯೋಗ ಸ್ಥಾಪಿಸಬೇಕು.
*ರಾಜ್ಯ ಜಿಡಿಪಿಯ ಶೇ.6 ಪಾಲು ಶಿಕ್ಷಣ,ಶೇ.3 ಪಾಲು ಆರೋಗ್ಯಕ್ಕೆ ಮೀಸಲಿಡಬೇಕು.
*ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು.
*ಎಲ್ಲ ಖಾಸಗಿ ವಸತಿ ಬಡಾವಣೆಗಳಲ್ಲಿ  ಶೇ.20ನ್ನು ಕಡಿಮೆ ದರದ ಮನೆಗಳನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಡಬೇಕು.
*ಚುನಾವಣಾ ಸ್ಪರ್ಧೆಯಲ್ಲಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು.
*ಉನ್ನತ ನ್ಯಾಯಾಂಗ ಹು¨ªೆಗಳಲ್ಲಿ ಎಸ್ಸಿ,ಎಸ್ಟಿ,ಒಬಿಸಿ ಸಮುದಾಯಗಳು ಸೂಕ್ತ ಪ್ರಾತಿನಿಧ್ಯ ಗಳಿಸಲು ಕ್ರಮ ಕೈಗೊಳ್ಳಬೇಕು.
*ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆಯರಿಗೆ ಸಮಾನ ಅವಕಾಶ ಸಿಗುವಂತೆ ಕ್ರಮ ಕೈಗೊಳ್ಳಲು ಸಮಾನ ಅವಕಾಶಗಳ ಆಯೋಗವನ್ನು ಸ್ಥಾಪಿಸಬೇಕು.
*ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ಭೂಮಿ ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಿಸಬೇಕು.
*ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ಹೊರಗುತ್ತಿಗೆ ಬದಲಿಗೆ ಖಾಯಂ ಮಾಡಬೇಕು.
*ಜಾತಿ ಆಧಾರಿತ ಉದ್ಯಮಗಳನ್ನು ಆಧುನಿಕ ಕಾಲಕ್ಕೆ ಅನುಗುಣವಾಗಿ ಬಲಪಡಿಸಬೇಕು.
*ಜಾತಿ ಮತ್ತು ಸಾಮಾಜಿಕ ಜನಗಣತಿಯನ್ನು ಬಹಿರಂಗಪಡಿಸಬೇಕು.

Edited By

madhu mukesh

Reported By

congress admin

Comments