ಬಹಿರಂಗ ಚರ್ಚೆಗೆ ಬಿಜೆಪಿಗೆ ಆಹ್ವಾನ ನೀಡಿದ ಸಿದ್ದರಾಮಯ್ಯ

ಲಿಂಗಸಗೂರಿನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಳೆದ 4 ವರ್ಷದಲ್ಲಿ ನೀಡಿದ್ದ 165 ಭರವಸೆಯಲ್ಲಿ 140 ಭರವಸೆ ಈಡೇರಿಸಿದ್ದೇವೆ. ಮೋದಿ ಎಷ್ಟು ಈಡೇರಿಸಿದ್ದಾರೆ ಎಂದು ಹೇಳಲಿ ಅಂತಾ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಸಾಲ ಮನ್ನಾ ಬಗ್ಗೆ ಯಡಿಯೂರಪ್ಪ ಉತ್ತರಕುಮಾರನ ಪೌರುಷ ಪ್ರದರ್ಶನ ಮಾಡಿದರು. ಅವರಿಗೆ ತಾಕತ್ತಿದ್ದರೆ ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ರೈತರ ಸಾಲ ಮನ್ನಾ ಮಾಡಿಸಲಿ.
Comments