ಎಚ್ಡಿಕೆ ಗ್ರಾಮವಾಸ್ತವ್ಯವನ್ನು ಮತ್ತೆ ಆರಂಬಿಸಲಿದ್ದಾರೆ

13 Jul 2017 12:26 PM |
521 Report

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ "ಗ್ರಾಮವಾಸ್ತವ್ಯ'ಕ್ಕೆ ಮುಂದಾಗಿದ್ದಾರೆ. ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ವರ್ಚಸ್ಸು ವೃದ್ಧಿ ಹಾಗೂ ಜನಪ್ರಿಯತೆಗೆ ಕಾರಣವಾದ "ಗ್ರಾಮವಾಸ್ತವ್ಯ' ಮತ್ತೆ ಆರಂಭಿಸಿ ಆ ಮೂಲಕ ಪಕ್ಷಕ್ಕೆ ಗ್ರಾಮೀಣ ಭಾಗದಲ್ಲಿ ಜನಬೆಂಬಲ ಪಡೆಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಆಷಾಢ ಕಳೆದ ನಂತರ ಒಂದೂವರೆ ತಿಂಗಳ ಕಾಲ ಪ್ರವಾಸ ಕೈಗೊಂಡು "ಗ್ರಾಮವಾಸ್ತವ್ಯ' ನಡೆಸಿ ಜನರ ಕುಂದು ಕೊರತೆ ಆಲಿಸುವ ಜತೆಗೆ ಗ್ರಾಮೀಣ ಮತದಾರರನ್ನು
ಪಕ್ಷದತ್ತ ಸೆಳೆಯಲು ಯೋಜನೆ ರೂಪಿಸಿದ್ದಾರೆ. ರಾಜ್ಯ ಬಜೆಟ್‌ ನಂತರ ಗ್ರಾಮವಾಸ್ತವ್ಯ ಪ್ರಾರಂಭಿಸಲು ಕುಮಾರಸ್ವಾಮಿ ಸಿದ್ಧತೆ ನಡೆಸಿ ಹುಬ್ಬಳ್ಳಿಯಲ್ಲಿ ಅದೇ ಕಾರಣಕ್ಕೆ ಮನೆ ಸಹ ಮಾಡಿದ್ದರು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಇದೀಗ ಗ್ರಾಮವಾಸ್ತವ್ಯ ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Edited By

hdk fans

Reported By

hdk fans

Comments