ಕುಮಾರಸ್ವಾಮಿ ಸರ್ಕಾರ ಬಂದ್ರೆ ನಮಗೇನು ಲಾಭ? ಇಲ್ಲಿದೆ 10 ಪಾಯಿಂಟ್ ಗಳು

01 Jun 2017 2:53 PM |
801 Report

ಕುಮಾರಸ್ವಾಮಿ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ ?? ಜೆಡಿಎಸ್ ಅಧಿಕಾರದ ಕಾರ್ಯವೈಖರಿಯ ಸಣ್ಣ ಪರಿಚಯ ನಿಮಗಾಗಿ

 

  1. “ಪ್ರಬಲವಾದ ಪ್ರಾದೇಶಿಕ ಪಕ್ಷ”
    ಇದರಿಂದ ಕಾವೇರಿ, ಕಳಸ ಬಂಡೂರಿ, ಹಿಂದಿ ಹೇರಿಕೆ ಯಾವುದೇ ವಿಷಯವಿರಲಿ, ಯಾವ ದೊಣ್ಣೆ ನಾಯಕನ ಮುಂದೆಯೂ ಕೈಕಟ್ಟಿ ಕೇಳಿಕೊಳ್ಳುವ ಅವಶ್ಯಕತೆ ಇಲ್ಲ.ಮಲತಾಯಿ ಧೋರಣೆಗೆ ಅವಕಾಶವೇ ಇಲ್ಲ.
    ನಮ್ಮ ರಾಜ್ಯದ  ಬೆನ್ನೆಲುಬಾಗಿರುವ  “ರೈತರ ” ಸಂಪೂರ್ಣ ಸಾಲ ಮನ್ನಾ ಹಾಗು ಅನೇಕ ಯೋಜನೆಗಳ ಅನುಷ್ಠಾನದಿಂದ ರೈತರ ಮೊಗದಲ್ಲಿ ನೆಮ್ಮದಿ ತರುವುದು.
  2. “ಸಮರ್ಥ ನಾಯಕ -HDK”
    ಕುಮಾರಸ್ವಾಮಿಯವರು ಒಬ್ಬ ಅದ್ಭುತ ಹಾಗು ಜನಮೆಚ್ಚುವ ಆಡಳಿತಗಾರ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಇವರು ರಾಜ್ಯದ ಪ್ರತಿಯೊಂದು ಹಳ್ಳಿ, ಪ್ರತಿಯೊಂದು ಸಮಸ್ಯೆಗಳು ಮತ್ತು ಅದರ ಪರಿಹಾರಗಳು, ಪ್ರತಿಯೊಂದು ಇಲಾಖೆ ಎಲ್ಲದರ ಸಂಪೂರ್ಣ ಜ್ಞಾನ ಉಳ್ಳ ಪ್ರಜ್ಞಾವಂತರಾಗಿದ್ದರೆ. ಈ ಹತ್ತು ವರ್ಷಗಳಲ್ಲಿ ಇನ್ನು ಹೆಚ್ಚು ಪಾಠವನ್ನು ಕಲಿತಿದ್ದಾರೆ ಹಾಗು ಪಕ್ವವಾಗಿದ್ದಾರೆ. ಇವರ ಎಲ್ಲ ಯೋಜನೆಗಳು ಎಲ್ಲ ಜನರ ಪರವಾಗಿತ್ತೇ ಹೊರತು ಯಾವುದೇ ಜನಾಂಗ, ಜಾತಿ, ಸಮುದಾಯಗಳನ್ನು ಓಲೈಸುವ ಗಿಮಿಕ್ ರಾಜಕಾರಣ ಮಾಡಲ್ಲ.
  3. “ಅತ್ಯುತ್ತಮ ಜನಪರ ಆಡಳಿತ” 
    ಹಿಂದೆ ನೀವೇ  ಗಮನಿಸಿರಬಹುದು, ಹೇಗೆ ಜನರ ಸಮಸ್ಯೆಗಳನ್ನು ಕೇಳಿ ಮಾರಕವಾಗಿದ್ದ ಲಾಟರಿ ಹಾಗು ಸಾರಾಯಿ ನಿಷೇದ  ಮಾಡಿದ್ದರು.
    ವಿಧವೆಯರು, ವೃದ್ದರು, ಅಂಗವಿಕಲರು, ಬಡ ಹೆಣ್ಣುಮಕ್ಕಳ ಪಾಲಿಗಂತೂ ತಮ್ಮ ಮನೆಯ ಹಿರಿಯಣ್ಣನಂತೆ ಆಸರೆಯಾಗಿದ್ದರು. ಗಾಂಧೀಜಿಯವರ ಕನಸಂತೆ ಹೆಣ್ಣು ಮಕ್ಕಳು ಅರ್ಧ ರಾತ್ರಿಯಲ್ಲೂ ಓಡಾಡುವಷ್ಟು ಉತ್ತಮ ಭದ್ರತೆ ಹಾಗು ಅಪರಾಧ ಪ್ರಕರಣಗಳನ್ನು ಸಂಪೂರ್ಣವಾಗಿ ಕುಗ್ಗಿಸಿದ್ದರು.
  4. “ಕನ್ನಡಿಗರು, ಕರ್ನಾಟಕದ ನೆಲ, ಜಲ, ಭಾಷೆಗೆ ಎಂದೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ”
    ಕಳೆದ 7-8 ವರ್ಷಗಳಿಂದ ವಲಸಿಗರ ಕಾಟ ತುಂಬಾ ಹೆಚ್ಚಾಗಿದೆ, ಕನ್ನಡಿಗರ ಉದ್ಯೋಗಗಳನ್ನು ಕಸಿದುಕೊಂಡಿದ್ದಾರೆ, ಹಾಗು ಕೇಂದ್ರ ಸರ್ಕಾರಗಳಿಂದ ಹಿಂದಿ ಹೇರಿಕೆ, ನೆರೆ ರಾಜ್ಯಗಳಿಂದ ಪ್ರತಿ ವಿಷಯದಲ್ಲೂ ತೊಂದರೆಗಳು ಮುಂದುವರೆಯುತ್ತಲೇ ಇದೆ. ಇದಕ್ಕೆಲ್ಲ ತಕ್ಕ ಪಾಠ ಕಲಿಸಬೇಕಿದೆ. ಇಂತಹ ಕೆಲಸಗಳು ದಿಲ್ಲಿ ಹೈ ಕಮಾಂಡ್ ಇರುವ ರಾಷ್ಟೀಯ ಪಕ್ಷಗಳಿಂದ ಅಸಾಧ್ಯ. ಆದರೆ, ಕುಮಾರಸ್ವಾಮಿ ಅವರು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಎಂದಿಗೂ ಮುಂಚೂಣಿಯಲ್ಲಿರುತ್ತಾರೆ.
  5. “ಸರ್ಕಾರಿ ಹಾಗು ಖಾಸಗಿ ನೌಕರರಿಗೆ ಉತ್ತಮ ಸಂಬಳ” ಸರ್ಕಾರಿ ಹಾಗು ಖಾಸಗಿ ನೌಕರರು ಅಸಮಾಧಾನದಿಂದ ಧರಣಿಗಳು ಮಾಡದ ಹಾಗೆ ನೋಡಿಕೊಂಡು, ಅವರ ಕ್ಷೇಮಾಭಿವೃದ್ಧಿ. ನೌಕರರು ಕಷ್ಟಪಟ್ಟು ಸುರಿಸಿದ ಬೆವರ ಹನಿಗೆ ತಕ್ಕ ಸಂಬಳಗಳು ,ಸೇವೆಗಳು ಸಿಗುವಂತೆ ನೋಡಿಕೊಳ್ಳಲಾಗುವುದು.
  6. “ಬಿಜೆಪಿ & ಕಾಂಗ್ರೆಸ್ ಭ್ರಷ್ಟಾಚಾರ, ದುರಾಡಳಿತದಿಂದ ಕುಲಗೆಟ್ಟಿರುವ ಎಲ್ಲಾ ಇಲಾಖೆ ಹಾಗು ಆಡಳಿತವನ್ನು ಶುಚಿಗೊಳಿಸಲಾಗುವುದು”
    ಚೆನ್ನಾಗಿ ತಿನ್ನುವುದನ್ನು ಖಯಾಲಿ ಮಾಡಿಕೊಂಡಿರುವ ಭ್ರಷ್ಟ ಅಧಿಕಾರಿಗಳನ್ನು ಮೊದಲು ಮನೆಗೆ ಕಳುಹಿಸಿ, ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿಗಳಿಗೆ ಪ್ರಮೋಷನ್ ಕೊಟ್ಟು ಪ್ರೋತ್ಸಾಹಿಸಲಾಗುವುದು. ಯಾವ influence ಗಳು ನಡೆಯುವುದಿಲ್ಲ. ಧೂಳು ಹಿಡಿಯುವಂತೆ ಮಾಡಿರುವ ಎಲ್ಲ ಫೈಲ್ ಗಳಿಗೂ ಜೀವ ತುಂಬಲಾಗುವುದು. ಎಲ್ಲ  ಮಂತ್ರಿಗಳು ಹಾಗು ಶಾಸಕರಿಗೆ ವಿಶೇಷ ತರಬೇತಿ ಹಾಗು ಕಾರ್ಯಗಾರಗಳನ್ನು ಏರ್ಪಡಿಸಲಾಗುವುದು.
  7. “ಶಿಕ್ಷಣವನ್ನು ಒಂದು ಅಸ್ತ್ರವಾಗಿ ಬಳಸಲಾಗುವುದು”
    ಜೆಡಿಎಸ್ ಆಡಳಿತಾವಧಿಯಲ್ಲಿ, ಇದ್ದ ಹೈ ಸ್ಕೂಲ್ ಮತ್ತು ಡಿಗ್ರಿ ಕಾಲೇಜುಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಮಗುವಿಗೂ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಜೊತೆಗೆ ಕನ್ನಡದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ, ಉತ್ತಮ ನಾಗರೀಕರನ್ನಾಗಿ ಮಾಡುವುದು ಜೆಡಿಎಸ್ ಗುರಿಯಾಗಿದೆ. ನೆಲ್ಸನ್ ಮಂಡೇಲರವರು ಹೇಳಿದಂತೆ ಶಿಕ್ಷಣವನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳಲಾಗುವುದು.
  8. “ಮೂಲ ಸೌಕರ್ಯ ಹಾಗೂ ಪರಿಸರ ರಕ್ಷಣೆ“

ರಾಜ್ಯಾದ್ಯಂತ ಹಾಗು ಮುಖ್ಯವಾಗಿ ಬೆಂಗಳೂರಿನಲ್ಲಿ ಆಗುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಪ್ರಪಂಚದ ಉನ್ನತ ತಜ್ಞರಿಂದ ಆಧುನಿಕ ಹಾಗು ವೈಜ್ನ್ಯಾನಿಕ ಪರಿಹಾರ. ಸ್ವಾತಂತ್ರ್ಯ ಬಂದು ೭೦ ವರ್ಷವಾದರೂ ಮೂಲಭೂತ ಸೌಕರ್ಯಗಳೇ ಸಿಕ್ಕದಿರುವುದು ನಮ್ಮ ದೌರ್ಭಗ್ಯ. ಮೊದಲು ಇವುಗಳು ಎಲ್ಲರಿಗು ಸಿಗುವಂತೆ ಮಾಡಲಾಗುವುದು.

ಪರಿಸರ ಸಂರಕ್ಷಣೆಯ ಜವಾಬ್ದಾರಿಯು ನಮ್ಮ ಮೇಲಿರುವುದರಿಂದ, ಹಸಿರು ಕರ್ನಾಟಕ ಕ್ಕೆ ಚಾಲನೆ.

  1. “ಸರ್ಕಾರದ ಸೇವೆಗಳನ್ನು ,ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಲಾಗುವುದು”
    ಮುಖ್ಯವಾಹಿನಿಗೆ ಬಾರದ ಜನಾಂಗಗಳು, ಬುಡಕಟ್ಟು ಜನಾಂಗ ಹೀಗೆ ಪ್ರತಿಯೊಬ್ಬ ನಾಡಿನ ಮಕ್ಕಳ ಜವಾಬ್ದಾರಿ ನಮ್ಮದು. ಅವರಿಗೂ ಸರ್ಕಾರದ ಎಲ್ಲ ಯೋಜನೆಗಳು ತಲುಪುವಂತೆ ಕಾರ್ಯನಿರ್ವಹಿಸಲಾಗುವುದು.
  2. ಅಂದು ಕುಮಾರಣ್ಣ ಕೈಗೆತ್ತಿಕೊಂಡಿದ್ದ ಎಲ್ಲಾ ಅದ್ಭುತ ಯೋಜನೆಗಳನ್ನು, ಚೈತನ್ಯ ತುಂಬಿ ಹೊ

Edited By

civic news

Reported By

hdk fans

Comments