ಮೋದಿ ಆಡಳಿತ ‘ಬಾಯಿ ಬಡಾಯಿ, ಸಾಧನೆ ಶೂನ್ಯ : ಸಿದ್ದು

27 May 2017 12:43 PM |
790 Report

ಪೊಳ್ಳು ಭರವಸೆಗಳ ಮೂಲಕ ನಿರೀಕ್ಷೆಗಳ ಆಶಾಗೋಪುರ ಕಟ್ಟಿದ್ದ ನರೇಂದ್ರ ಮೋದಿ ಅವರ ಮೂರು ವರ್ಷಗಳ ಆಡಳಿತದ ಬಗ್ಗೆ ಜನರು ಭ್ರಮನಿರಸನರಾಗಿದ್ದಾರೆ.

ಮೋದಿಯ ಒಟ್ಟಾರೆ ಆಡಳಿತ ‘ಬಾಯಿ ಬಡಾಯಿ, ಸಾಧನೆ ಶೂನ್ಯ’ ಎಂಬಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳಿದ್ದ ಬಿಜೆಪಿ ಇದೀಗ ದಲಿತರು, ಅಲ್ಪಸಂಖ್ಯಾತರನ್ನು ಮಾತ್ರ ಬರಬೇಡಿ ಎನ್ನುವ ಮೂಲಕ ಸಬ್ ಕಾ ಸಾಥ್ ಪದದ ಅರ್ಥವನ್ನೇ ಕೆಡಿಸಿದೆ. ಪೊಳ್ಳು ಭರವಸೆ ನೋಡಿಕೊಂಡು ಬೆಂಬಲಿಸಿದ್ದ ಯುವಕ-ಯುವತಿಯರಿಗೆ ವಸ್ತುಸ್ಥಿತಿಯ ಅರಿವಾಗುತ್ತಿದೆ ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಇದೀಗ ಅವರೇ ಕೊಟ್ಟಿರುವ ಅಂಕಿ ಅಂಶದ ಪ್ರಕಾರ ೩ ವರ್ಷದಲ್ಲಿ ೪ ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ನಿರ್ಮಲ ಭಾರತದ ಹೆಸರನ್ನು ಸ್ವಚ್ಛ ಭಾರತ ಎಂದು ಬದಲಿಸಿಕೊಂಡು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ತಾರತಮ್ಯ ಮಾಡುತ್ತಿದ್ದು, ಕೇಂದ್ರ ಅನುದಾನಿತ ಎಲ್ಲ ಯೋಜನೆಗಳಿಗೂ ಅನುದಾನ ಕಡಿತಗೊಳಿಸಿದ್ದಾರೆ. ೧೪ನೇ ಹಣಕಾಸು ಆಯೋಗದಲ್ಲಿ ಗುಜರಾತ್‌ಗೆ ಆರು ಸಾವಿರ ಕೋಟಿ ಅನುದಾನ ನೀಡಿ ನಮಗೆ ಒಂದು ಸಾವಿರ ಚಿಲ್ಲರೆ ಕೋಟಿ ಕೊಟ್ಟಿದ್ದಾರೆ ಎಂದು ಟೀಕಿಸಿದರು.

Edited By

congress admin

Reported By

congress admin

Comments