ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಕೆಕೆಆರ್ ನಿಂದ 11,367 ಕೋಟಿ ಬಂಡವಾಳ ಹೂಡಿಕೆ

22 May 2020 11:07 AM | Technology
449 Report

ರಿಲಯನ್ಸ್ ಇಂಡಸ್ಟ್ರೀಸ್ ಜಿಯೊ ಪ್ಲಾಟ್ ಫಾರಂನಡಿ ಷೇರುಗಳನ್ನು ಮತ್ತೆ ಮಾರಾಟ ಮಾಡಿದೆ. ಅಮೆರಿಕ ಮೂಲದ ಖಾಸಗಿ ಷೇರು ಸಂಸ್ಥೆ ಕೆಕೆಆರ್ ಜಿಯೊ ಡಿಜಿಟಲ್ ನಡಿ 11 ಸಾವಿರದ 367 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ದೇಶದ ದೊಡ್ಡ ಡಿಜಿಟಲ್ ಸೇವೆಗಳ ವೇದಿಕೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್ಫಾರ್ಮ್ಗಳು ಈ ಒಪ್ಪಂದವನ್ನು ಶುಕ್ರವಾರ ಪ್ರಕಟಿಸಿವೆ.

1976ರಲ್ಲಿ ಸ್ಥಾಪನೆಗೊಂಡ ಅಮೆರಿಕದ ಕೆಕೆಆರ್ ಸಂಸ್ಥೆ ವಿಶ್ವದ ಅನೇಕ ಪ್ರಮುಖ ಕಂಪನಿಗಳಿಗೆ ಬಂಡವಾಳ ಹಾಕಿ ನೆರವು ನೀಡುತ್ತಾ ಬಂದಿದೆ. ವಿಶ್ವದ ವಿವಿಧ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕೆಕೆಆರ್ ಈವರೆಗೆ 30 ಬಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿದೆ. ಬಿಎಂಸಿ ಸಾಫ್ಟ್​ವೇರ್, ಬೈಟ್​ಡ್ಯಾನ್ಸ್ ಮೊದಲಾದ ಕಂಪನಿಗಳು ಕೆಕೆಆರ್​ನ ಹೂಡಿಕೆಯ ಲಾಭ ಪಡೆದಿವೆ. ಅಂದಹಾಗೆ, ಏಷ್ಯಾದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಕೆಆರ್ ಹೂಡಿಕೆ ಮಾಡಿರುವುದು ಇದೆ ಮೊದಲು

ರಿಲಯನ್ಸ್ ಇಂಡಸ್ಟ್ರೀಸ್ ಸಂಪೂರ್ಣ ಒಡೆತನದ ಅಂಗಸಂಸ್ಥೆ ಜಿಯೋ ಪ್ಲಾಟ್ ಫಾರ್ಮ್. ಭಾರತದಲ್ಲಿ ಮುಂದಿನ ತಲೆಮಾರಿನ ತಂತ್ರಜ್ಞಾನ ಬಳಸಿಕೊಂಡು, ಅತ್ಯುತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯಲ್ಲಿ ಡಿಜಿಟಲ್ ಸೇವೆಯನ್ನು ನೀಡಲು ಮುಂದಾಗಿರುವ ಜಿಯೋಗೆ ಸದ್ಯಕ್ಕೆ 38.80 ಕೋಟಿ ಗ್ರಾಹಕರಿದ್ದಾರೆ.

Edited By

venki swamy

Reported By

venki swamy

Comments