ನಿಮಗೆ ಮೊಬೈಲ್ ಮರೆಯುವ ಗುಣವಿದ್ಯಾ..! ಹಾಗಾದ್ರೆ ಬಂದಿದೆ ಈ ನೂತನ ಜಾಕೆಟ್..!!!

14 May 2019 3:46 PM | Technology
250 Report

ದಿನನಿತ್ಯದ ಕೆಲಸದ ನಡುವೆ ಮೊಬೈಲ್ ಅವಿಭ್ಯಾಜ ಅಂಗವಾಗಿ ಬಿಟ್ಟಿದೆ.. ಊಟ ಬೇಕಾದ್ರೂ ಕೂಡ ಮರೀತಾರೆ… ಆದ್ರೆ ಮೊಬೈಲ್ ಮಾತ್ರ ಮರೆಯಲ್ಲಾ… ಮೊಬೈಲ್ ಇಲ್ಲದೆ ಇದ್ರೆ ಬೆಳಿಗ್ಗೆ  ಆಗುವುದಿಲ್ಲ ಕೆಲವರಿಗೆ.. ಮೊಬೈಲ್ ಅನ್ನು ಒಂದು ವೇಳೆ ಮರೆತು ಬಂದ್ರೆ ಇನ್ಮುಂದೆ ಯೋಚನೆ ಮಾಡುವ  ಅವಶ್ಯಕತೆ ಇಲ್ಲ… ಇದೀಗ ಮೊಬೈಲ್ ನ್ನು ಎಲ್ಲೆಂದರಲ್ಲಿ ಮರೆತು ಬರುವವರಿಗಾಗಿ ಇದೀಗ ಹೊಸ ಜಾಕೆಟ್ ವೊಂದನ್ನು ರೆಡಿ ಮಾಡಲಾಗಿದೆ.. ಒಂದು ವೇಳೆ ಇದನ್ನು ಧರಿಸಿದರೆ ನೀವು ಫೋನ್ ಮರೆತು ಹೋದರೆ ಈ ಜಾಕೆಟ್ ನೆನಪಿಸುತ್ತದೆ. 

ಗೂಗಲ್​ ಅಂಡ್ ಲೆವಿಸ್​​ನ ಕಮ್ಯುಟರ್​ ಎಕ್ಸ್​ ಜಾಕಾರ್ಡ್​ ಜಾಕೆಟ್​ 'ಆಲ್ವೇಸ್​ ಟುಗೆದರ್​'(ಸದಾ ಜೊತೆಯಲ್ಲಿ) ಎಂಬ ಹೊಸ ವೈಶಿಷ್ಯವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ನೂತನ ಜಾಕ್ವರ್ಡ್​ ಜಾಕೆಟ್​ನಲ್ಲಿ ಸ್ವಯಂಚಾಲಿತ ಟ್ಯಾಗ್​ ಒಂದನ್ನು ನೀಡಲಾಗಿದೆ. ನಿಮ್ಮ ಸ್ಮಾರ್ಟ್​ಫೋನ್ ಮತ್ತು ಜಾಕೆಟ್​ ಅಂತರ ಹೆಚ್ಚಾದಾಗ ಜಾಕ್ವರ್ಡ್ ಜಾಕೆಟ್​ನಲ್ಲಿರುವ ಟ್ಯಾಗ್​ ಮಿನುಗತೊಡಗುತ್ತದೆ. ಈ ಮೂಲಕ ನೀವು ಸ್ಮಾರ್ಟ್​ಫೋನ್ ತೆದುಕೊಂಡು ಹೋಗಲು​ ಮರೆತಿರುವುದನ್ನು ನಿಮಿಷಾರ್ಧದಲ್ಲೇ ನೆನಪು ಮಾಡುತ್ತದೆ.. ಈ ಸ್ಮಾರ್ಟ್​ ಜಾಕೆಟ್​ 25,000 ರೂ ಬೆಲೆಗೆ ದೊರಕುತ್ತಿದೆ. ನೀವು ಮೊಬೈಲ್ ಅನ್ನು ಮರೆಯುವ ಗುಣವಿದ್ದರೆ ಈ ಜಾಕೆಟ್ ಅನ್ನು ಖರೀದಿ ಮಾಡಿ… ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಅನ್ನೋದಕ್ಕೆ ಇದೇ ಉತ್ತಮ ಉದಾಹರಣೆಯಾಗಿದೆ.

Edited By

Manjula M

Reported By

Manjula M

Comments