ಹೊಸ ವರ್ಷಕ್ಕೆ ಬಂದ್ ಆಗಲಿದ್ಯಾ ವಾಟ್ಸಾಪ್..!!??

25 Dec 2018 11:55 AM | Technology
384 Report

 ಇತ್ತಿಚಿಗೆ ಕಾಲ ಹೇಗೆ ಆಗಿಬಿಟ್ಟಿದೆ ಅಂದರೆ ಊಟ ಬೇಕಾದ್ರೂ ಬಿಟ್ಟಿ ಇರ್ತಿವಿ. ಆದರೆ ಮೊಬೈಲ್ ಅಂತು ಬಿಟ್ ಇರಲ್ಲ ಅನ್ನೋ ತರ  ಆಗಿ ಬಿಟ್ಟಿದೆ. ಕೈಯಲ್ಲಿ ಮೊಬೈಲ್ ಇದ್ದು ಬಿಟ್ಟರೆ ಸಾಕು ಜಗತ್ತನ್ನೆ ಮರೆತು ಬಿಡ್ತಿವಿ.. ಯಾರ ಮಾತು ಕೂಡ ತಲೆ ಒಳಗೆ ಹೋಗೋದೆ ಇಲ್ಲ… ಅಷ್ಟು ಮೊಬೈಲ್ ಗೆ ಅಡಿಟ್ ಆಗಿರುತ್ತೇವೆ. ವಾಟ್ಸಾಪ್ ಅಂತೂ ಬಿಡಿ ತುಂಬಾ ಜನ ಬಳಕೆ ಮಾಡ್ರಾರೆ. ವಾಟ್ಸಾಪ್ ಬಳಕೆದಾರರಿಗೊಂದು ಕಹಿಸುದ್ದಿ. ಡಿಸೆಂಬರ್ 31, 2018 ರ ನಂತರ ವಾಟ್ಸಾಪ್ ಬಂದ್ ಆಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ  ಸಿಕ್ಕಿರುವ ಮಾಹಿತಿ ಪ್ರಕಾರ, ಡಿಸೆಂಬರ್ 31, 2018 ರ ನಂತರ ಕೆಲ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ವಾಟ್ಸಾಪ್ ತನ್ನ ಕಾರ್ಯವನ್ನು ನಿಲ್ಲಿಸಲಾಗಿದೆ  ಎಂದು ಹೇಳಲಾಗುತ್ತಿದೆ.. Nokia S40 ಬಳಕೆದಾರರು ಜನವರಿ 1, 2019 ರ ನಂತರ ವಾಟ್ಸಾಪ್ ಬಳಕೆ ಸಾಧ್ಯವಿಲ್ಲ.ವಾಟ್ಸಾಪ್, ಆಂಡ್ರಾಯ್ಡ್ 2, 3, 7 ಮತ್ತು ಇದಕ್ಕಿಂತ ಹಳೆಯ ಸಿಸ್ಟಂನಲ್ಲಿ ಕೆಲಸ ಮಾಡುವುದಿಲ್ಲ. ಇದರ ಜೊತೆಗೆ iPhone iOS7 ಹಾಗೂ ಇದರ ಹಳೆ ಆಪರೇಟಿಂಗ್ ಸಿಸ್ಟಂನಲ್ಲಿ ಕೂಡ ಕೆಲಸ ನಿಲ್ಲಿಸಲಿದೆ. ಈ ಹಳೆ ಸಿಸ್ಟಂಗೆ ಅನುಗುಣವಾಗಿ ಫೀಚರ್ ಸಿದ್ಧಪಡಿಸಲು ಸಾಧ್ಯವಿಲ್ಲ. ಹಾಗಾಗಿ ವಾಟ್ಸಾಪ್ ಸೇವೆ ನಿಲ್ಲಿಸಲಿದ್ದೇವೆ ಎಂದು ಕಂಪನಿ ಹೇಳಿದೆ. ಹೀಗಾಗಿ ಸಂದೇಶಗಳನ್ನು ಕಳುಹಿಸಲು ಈ ಆ್ಯಫ್ ತುಂಬಾ ಸಹಕಾರಿಯಾಗಿತ್ತು.

Edited By

Manjula M

Reported By

Manjula M

Comments