ನಿಮ್ಮ ಸ್ಮಾರ್ಟ್​ ಫೋನ್ ಗಳು ಬಿಸಿಯಾಗಲು ಕಾರಣ ಏನ್ ಗೊತ್ತಾ..?

21 Sep 2018 1:06 PM | Technology
582 Report

ಸಾಮಾನ್ಯವಾಗಿ, ಕೆಲವೊಮ್ಮೆ ನಮ್ಮ ಸ್ಮಾರ್ಟ್ಫೋನ್ ಹೆಚ್ಚು ಬಿಸಿ ಆಗಿಬಿಡುತ್ತದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಎದುರಾಗುತ್ತದೆ. ಹಾಗಾಗಿ, ಫೋನ್ ಬಳಕೆದಾರರ ಸಾಮಾನ್ಯ ಪ್ರಶ್ನೆ ‘ಮೊಬೈಲ್ ಬಿಸಿಯಾಗದಂತೆ ತಡೆಯುವುದು ಹೇಗೆ’ ಎಂಬುದು.!!

ಹೌದು, ಇದು ಒಬ್ಬರ ಸಮಸ್ಯೆಯಲ್ಲ. ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.! ಹಾಗಾಗಿ, ಮೊಬೈಲ್ ಬಿಸಿಯಾಗುವುದು ಏಕೆ ಎಂಬುದನ್ನು ತಿಳಿದರೆ ಮೊಬೈಲ್ ಬಿಸಿಯಾಗದಂತೆ ತಡೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವುದು ಅವಶ್ಯಕ.. ಅಂದಹಾಗೆ, ಮೊಬೈಲ್ ಬಿಸಿ ಆಗುವ ಈ ಸಮಸ್ಯೆ ಕೇವಲ ಸ್ಮಾರ್ಟ್ಫೋನ್ಗಳಲ್ಲಿ ಮಾತ್ರ ಹೆಚ್ಚಾಗಿರುತ್ತದೆ. ಏಕೆಂದರೆ, ಕಂಪ್ಯೂಟರ್ , ಲ್ಯಾಪ್ಟಾಪ್ ಅಥವಾ ಇನ್ನಿತರ ದೊಡ್ಡ ದೊಡ್ಡ ಡಿವೈಸ್ಗಳಲ್ಲಿ ಕೂಲಿಂಗ್ ಫ್ಯಾನ್ ಅಳವಡಿಸಲಾಗಿರುತ್ತದೆ. ಆದರೆ ಫೋನ್ಗೆ ಆ ಸೌಲಭ್ಯವಿಲ್ಲದೆ ಇರುವುದರಿಂದ ಸ್ಮಾರ್ಟ್ಫೋನ್ ಹೆಚ್ಚು ಬಿಸಿಯಾಗುತ್ತದೆ.  ಈ ತೊಂದರೆಗೆ ಪರಿಹಾರವಿಲ್ಲ. ಸ್ಮಾರ್ಟ್ಫೋನ್ ಬ್ಯಾಟರಿಗೆ ವಿದ್ಯುತ್ ಪೂರೈಕೆ ಮಾಡುವ ಚಾರ್ಜರ್ ಕೂಡ ಅತ್ಯುತ್ತಮದ್ದಾಗಿರಬೇಕು. ಇಲ್ಲವಾದರೆ, ಸರಿಯಾದ ವಿಧ್ಯುತ್ ಪ್ರವಾಹವಿಲ್ಲದೇ ಸ್ಮಾರ್ಟ್ಫೋನ್ ಬ್ಯಾಟರಿ ಸೆಲ್ಗಳು ಹೆಚ್ಚು ಸಂಕುಚಿತ ಅಥವಾ ವಿಕಸಿತಗೊಂಡು ಫೋನ್ ಬಿಸಿಯಾಗುತ್ತದೆ. ಹಾಗಾಗಿಯೇ, ಉತ್ತಮ ಚಾರ್ಜರ್ ಆದರೂ ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ ಎಂದು ಮೊಬೈಲ್ ತಜ್ಞರು ಹೇಳುವುದು. ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೆಚ್ಚು ಉಪಯೋಗಕಾರಿಯಾಗಿರುವ ಮೊಬೈಲ್ ಕವರ್ ಬಳಕೆಯೂ ಕೂಡ ಸ್ಮಾರ್ಟ್‌ಫೋನ್ ಬಿಸಿಯಾಗಲು ಕಾರಣವಾಗಿದೆ. ಹಾಗಾಗಿ, ಮೊಬೈಲ್ ಕವರ್ ಇಲ್ಲದೇ ಬಳಕೆ ಮಾಡಿದರೆ ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಪ್ಪಿಸಬಹುದಾಗಿದೆ.  ಆಪ್‌ಗಳನ್ನು ತೆರೆದು ಅದರ ಬಳಕೆಯನ್ನು ಪೂರ್ಣವಾಗಿ ರಿಮೂವ್ ಮಾಡದಿರುವುದರಿಂದ ಫೋನ್‌ನಲ್ಲಿ ಬ್ಯಾಗ್ರೌಂಡಿನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ರನ್ ಆಗುತ್ತಿರುತ್ತದೆ. ಹಾಗಾಗಿ, ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡದಿದ್ದರೆ ಫೋನ್ ಬಿಸಿಯಾಗುತ್ತದೆ.  ನಾವು ಬಹಳ ಸಮಯ Wi-Fi ಮತ್ತು ಹಾಟ್‌ಸ್ಪಾಟ್ ಬಳಸಿದರೆ ನಮ್ಮ ಮೊಬೈಲ್ ಬಿಸಿಯಾಗುವ ಸಂಭವ ಹೆಚ್ಚಿರುತ್ತದೆ.! ಈ ಎರಡೂ ಫೀಚರ್‌ಗಳಿಂದ ಮೊಬೈಲ್ ಹೊರಗೆ ಹೆಚ್ಚು ರೇಡಿಯೇಷನ್‌ಗಳು ಬಿಡುಗಡೆಯಾಗುವುದರಿಂದ ಮೊಬೈಲ್ ಬಿಸಿಯಾಗಲು ಕಾರಣವಾಗಿದೆ. ಹಾಗಾಗಿ, ಹಾಟ್‌ಸ್ಪಾಟ್ ಬಳಕೆ ಕಡಿಮೆ ಇರಲಿ. ಒಟ್ಟಾರೆ ನಾವು ಪ್ರತಿನಿತ್ಯ ಮಾಡುವ ಈ ಕೆಲ ತಪ್ಪುಗಳಿಂದಲೇ ನಮ್ಮ ಸ್ಮಾರ್ಟ್ ಫೋನ್ ಗಳು ಬಿಸಿಯಾಗಲು ಕಾರಣ. ಇನ್ಮುಂದೆಯಾದ್ರು ಇಂತಹ ಕಾರ್ಯಗಳಲ್ಲಿ ಸ್ವಲ್ಪ ಎಚ್ಚರ ವಹಿಸಿ.

Edited By

Manjula M

Reported By

Manjula M

Comments