ಫೇಸ್ ಬುಕ್'ನಲ್ಲೂ ಡೇಟಿಂಗ್ ಮಾಡಬಹುದು..! ಬಂದಿದೆ ಹೊಸ ಫೀಚರ್ ..!! ಹೇಗೆ ಅಂತೀರಾ..?

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ಹೆಸರು ಮಾಡಿರುವ ಆ್ಯಪ್ ಎಂದರೆ ಅದು ಫೇಸ್ ಬುಕ್. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಕೂಡ ಎಲ್ಲರೂ ಫೇಸ್ ಬುಕ್ ಬಳಕೆಯನ್ನು ಮಾಡುತ್ತಾರೆ. ಆದರೆ ಇದೀಗ ಪೇಸ್ ಬುಕ್ ಹೊಸ ಫಿಚರ್ ಒಂದನ್ನು ಪರಿಚಯ ಮಾಡುತ್ತಿದೆ. ಮೊಬೈಲ್ ನಲ್ಲಿಯೇ ಡೇಟಿಂಗ್ ಮಾಡೋದಕ್ಕೆ ಅವಕಾಶವಿದ್ರೇ ಎಷ್ಟು ಒಳ್ಳೇದಲ್ವಾ ಅಂದುಕೊಳ್ಳೋ ತುಂಬ ಜನರಿದ್ದಾರೆ. ಫೇಸ್ ಬುಕ್ ಆ ಕನಸನ್ನು ಇದೀಗ ನನಸು ಮಾಡಲು ಹೊರಟಿದೆ. ಕೇಳೋದಕ್ಕೆ ಹೌದಾ ಅನಿಸಿದರೂ ಕೂಡ ಅದು ನಿಜ. ಡೇಟಿಂಗ್ ಮಾಡೋರಿಗೀಗ ಫೇಸ್ ಬುಕ್ ಒಂದು ಹೊಸ ಆ್ಯಪ್ ಪರಿಚಯಿಸುತ್ತಿದೆ.
ಫೇಸ್ ಬುಕ್ ಕೊಲಂಬಿಯಾದಲ್ಲಿ ಗುರುವಾರ ಡೇಟಿಂಗ್ ಆ್ಯಪ್’ವೊಂದನ್ನು ಪ್ರಾಯೋಗಿಕವಾಗಿ ಶುರು ಮಾಡಿದೆ.. ಬಳಕೆದಾರರ ಪ್ರೊಫೈಲ್ ನಲ್ಲಿ ಯಾವುದಾದರೂ ಪ್ರಶ್ನೆ ಕೇಳಲು ಮತ್ತು ಅದೇ ರೀತಿ ಅದಕ್ಕೆ ಉತ್ತರವನ್ನೂ ಪಡೆಯಲು, ಅಷ್ಟೆ ಅಲ್ಲದೆ ಜೊತೆಗೆ ಸಂಭಾಷಣೆ ನಡೆಸಲು ಇಲ್ಲಿ ಫೇಸ್ ಬುಕ್ ವೇದಿಕೆಯಾಗಲಿದೆ. ಅದೇ ರೀತಿ ಪ್ರೊಫೈಲ್ ನಲ್ಲಿ ಡೇಟಿಂಗ್ ನಡೆಸೋರಿಗೆ ಎಫ್ ಬಿ ಕೂಡ ಒಂದು ರೀತಿಯಾಗಿ ಕೊಂಡಿಯಾಗಲಿದೆ. ಜನ ಹೆಚ್ಚು ಸರಳ- ಆರಾಮದಾಯಕವಾಗಿ ಆ್ಯಪ್ ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶ ಫೇಸ್ ಬುಕ್ ಸಂಸ್ಥೆಯದ್ದಾಗಿದೆ. ಈ ರೀತಿಯ ಡೇಟಿಂಗ್ ಮಾಡಲು ಸದ್ಯ ಮೊಬೈಲ್ ಆ್ಯಪ್ ನಲ್ಲಷ್ಟೇ ಲಭ್ಯ. ಇದಿನ್ನೂ ಡೆಸ್ಕ್ ಟಾಪ್ ಕಂಪ್ಯೂಟರ್ ಹೊಂದಿರೋಗೆ ಲಭ್ಯವಿಲ್ಲ. 18 ವರ್ಷ ಮೇಲ್ಪಟ್ಟ ವಯಸ್ಕರರು ಮಾತ್ರ ಇದನ್ನ ಬಳಸಲು ಸಾಧ್ಯವಿದೆ ಎಂದು ಹೇಳಲಾಗಿದೆ.
Comments