ಕೆಲವೊಂದು ಬಾರಿ ವೆಬ್ ಸೈಟ್ ಓಪನ್ ಮಾಡುವಾಗ 401, 403, 404 ಅಂತಾ ಬರುತ್ತೆ..! ಯಾಕೆ ಗೊತ್ತಾ..?

16 Aug 2018 4:34 PM | Technology
364 Report

ಒಂದು ಕಾಲದಲ್ಲಿ ಬಹಳಷ್ಟು ಮಂದಿ ಇಂಟರ್‌ನೆಟನ್ನು ಕೇವಲ ಕಂಪ್ಯೂಟರ್‌ಗಳಿಗೆ ಮಾತ್ರ ಬಳಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜನ 4ಜಿ ಮಾಯೆಯಲ್ಲಿ ತೇಲಾಡುತ್ತಿದ್ದಾರೆ. ಪ್ರತಿ ಫೋನಲ್ಲೂ ಇಂಟರ್‌ನೆಟ್ ಲಭ್ಯ. ಈ ಕ್ರಮದಲ್ಲಿ ಆ ಇಂಟರ್‌ನೆಟ್ ಮೂಲಕ ಅವರು ಅಗತ್ಯವಾದ ಅದೆಷ್ಟೋ ವೆಬ್‌ಸೈಟ್‌ಗಳನ್ನು ಓಪನ್ ಮಾಡುತ್ತಿರುತ್ತಾರೆ. ಆದರೆ ಒಮ್ಮೊಮ್ಮೆ ವೆಬ್‍ಸೈಟ್ ಓಪನ್ ಮಾಡುವಾಗ 401, 403, 404, 500 ಎಂಬ ಸಂಖ್ಯೆಗಳ ಹೆಸರಿನ ಎರರ್ ಮೆಸೇಜ್ ಬರುತ್ತಿರುತ್ತದೆ. ಈ ಕ್ರಮದಲ್ಲಿ ಈ ನಂಬರ್‌ಗಳು ಯಾಕೆ ಬರುತ್ತವೆ..? ಇಂದಿನ ಯುಗ ಮಾಯಾ ಯುಗವಾಗಿ ಮಾರ್ಪಟ್ಟಿದೆ. ಇಂಟರ್‌ನೆಟ್ ಎಂಬ ಟೆಕ್ನಾಲಜಿ ಜಗತ್ತನ್ನೇ ಒಂದು ಪುಟ್ಟ ಗ್ರಾಮವನ್ನಾಗಿಸಿದೆ. ಅಂಗೈಯಲ್ಲೇ ಇಡೀ ಪ್ರಪಂಚವನ್ನೇ ಒಂದು ಸುತ್ತು ಹಾಕಿ ಬರಬಹುದಾಗಿದೆ.

ಒಂದು ವೇಳೆ ಇಂತಹ ಎರರ್ ಮೆಸೇಜ್ ಏನಾದರೂ ಕಾಣಿಸಿದ್ದೇ ಆದಲ್ಲಿ ಆ ಸೈಟಿಗೆ ಯೂಸರ್ ನೇಮ್, ಪಾಸ್ ವರ್ಡ್ ಇದೆ ಎಂದರ್ಥ. ಅವುಗಳನ್ನ ಸರಿಯಾಗಿ ಎಂಟರ್ ಮಾಡಿದ್ದಲ್ಲಿ ಈ ಎರರ್ ಬರಲ್ಲ. ಇಲ್ಲದಿದ್ದರೆ ಮಾತ್ರ ಈ ರೀತಿಯ ಎರರ್ ಮೇಸೇಜ್‌ಗಳು ಬರುತ್ತಿರುತ್ತವೆ. ಈ ರೀತಿಯ ಮೆಸೇಜ್ ಏನಾದ್ರು ಬಂತು ಎಂದರೇ ಅದರ ಅರ್ಥ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಯೂಸರ್ ಪರ್ಮಿಷನ್ ಇಲ್ಲ ಎಂದು. ಸರ್ವರ್‌ನಲ್ಲಿರುವ ಸೆಕ್ಯೂರ್ಡ್ ಫೋಲ್ಡರನ್ನು ಯಾರಾದರು ಓಪನ್ ಮಾಡಬೇಕೆಂದುಕೊಂಡರೇ ಈ ರೀತಿಯ ಎರರ್ ಮೆಸೇಜ್ ಕಾಣಿಸುತ್ತದೆ. ಸದರಿ ಪೋಲ್ಡರ್ ರಕ್ಷಣೆಗಾಗಿ ಈ ರೀತಿಯ ಮೆಸೇಜ್ ಬರುತ್ತದೆ. ಈ ಎರರ್ ಮೆಸೇಜ್‌ನಿಂದ ನಮಗೆ ಏನು ಗೊತ್ತಾಗುತ್ತದೆಂದರೆ….ಯೂಸರ್ ಹುಡುಕುತ್ತಿರುವ ಆ ಸೈಟ್ ಸರ್ವರ್‌ನಲ್ಲಿ ಇಲ್ಲ ಎಂದರ್ಥ. ಆ ಸೈಟ್‌ನ ಪೋಲ್ಡರ್‌ಗಳು, ಫೈಲ್ಸ್ ಏನೂ ಸರ್ವರ್‌ನಲ್ಲಿ ಇಲ್ಲದಿದ್ದರೆ ಆಗ ಆ ಸೈಟನ್ನು ಯಾರಾದರು ಓಪನ್ ಮಾಡಲು ಪ್ರಯತ್ನಿಸಿದರೇ ಈ ರೀತಿಯ ಮೆಸೇಜ್ ಬರುತ್ತದೆ. ಇದು ಸರ್ವರ್ ಸೈಡ್ ಎರರ್ ಮೆಸೇಜ್. ಸರ್ವರ್‍‌ನಲ್ಲಿರುವ PHP ಫೈಲ್ಸ್, ಡಾಟಾಬೇಸ್, ಪೋಲ್ಡರ್‌ಗಳು ತಪ್ಪಾಗಿ ಸೇವ್ ಆದರೆ ಈ ಮೆಸೇಜ್ ಬರುತ್ತದೆ.

Edited By

Manjula M

Reported By

Manjula M

Comments