ಪೋಷಕರೇ ಎಚ್ಚರ: ಮಕ್ಕಳನ್ನ ಕೊಲ್ಲುವ ಬ್ಲ್ಯೂವೇಲ್ ನಂತರ ಮತ್ತೊಂದು ಡೆಡ್ಲಿ ಗೇಮ್..!

08 Aug 2018 2:21 PM | Technology
342 Report

ಮಕ್ಕಳನ್ನು ಆತ್ಮಹತ್ಯೆಗೆ ತಳ್ಳುವ ಅಪಾಯಕಾರಿ ಆಟ ‘ಬ್ಲೂವೇಲ್ ಚಾಲೆಂಜ್’. ಈ ಆಟದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೆ ಇದೆ.. ಕೆಲ ತಿಂಗಳುಗಳ ಹಿಂದೆ ಈ ಆಟ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಮತ್ತೊಂದು ಡೇಂಜರಸ್ ಆಟ ಆನ್‌ಲೈನ್‌ನಲ್ಲಿ ಬಂದಿದೆ. ಅದರ ಹೆಸರು ‘ಮೋಮೋ ಚಾಲೆಂಜ್’. ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆ್ಯಪ್ ಮೂಲಕ ಈ ಹೊಸ ಆತ್ಮಹತ್ಯಾ ಆಟ ಎಲ್ಲೆಡೆ ಹರಡುತ್ತಿದೆ.

ಅರ್ಜೆಂಟೀನಾದಲ್ಲಿ 12 ವರ್ಷದ ಬಾಲಕಿಯೊಬ್ಬಳು ಈ ಆಟದಿಂದ ಸಾವನ್ನಪ್ಪಿದ್ದು, ಅದಕ್ಕೆ ಮೋಮೋ ಚಾಲೆಂಜ್ ಕಾರಣ ಎಂದು ಪತ್ರಿಕೆಯೊಂದು ಸುದ್ದಿ ಮಾಡಿದೆ. ಇದೆಲ್ಲದರ ನಡುವೆ ಮೋಮೋ ಚಾಲೆಂಜ್ ಕುರಿತು ಸ್ಪೇನ್ ನ ರಾಷ್ಟ್ರೀಯ ಪೊಲೀಸರು ಎಚ್ಚರಿಕೆ ಮಾಹಿತಿಯನ್ನು ರವಾನಿಸಿದ್ದಾರೆ. ಬ್ಲೂವೇಲ್‌ ಮತ್ತು ಈ ಆಟಕ್ಕೂ ಇದಕ್ಕೂ ಬಹಳ ವ್ಯತ್ಯಾಸವೇನೂ ಇಲ್ಲ. ಮೊಮೊ ಆಟಕ್ಕೆ ವೇದಿಕೆಯಾಗಿರುವುದು ಸಾಮಾಜಿಕ ಜಾಲತಾಣವಾದ ವಾಟ್ಸಾಪ್. ಬ್ಲೂವೇಲ್‌ ರೀತಿಯಲ್ಲೇ ಮೊಮೊದಲ್ಲಿಯೂ ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತದೆ ಅತ್ಯಂತ ಭಯಾನಕ ಚಿತ್ರವೊಂದು ವಾಟ್ಸಾಪ್ಗೆ ಬರುತ್ತದೆ. ಅದರ ಜತೆಗೆ ಕೆಲವೊಂದು ಸವಾಲುಗಳನ್ನೂ ಕೂಡ ನೀಡಲಾಗಿರುತ್ತದೆ. ಹದಿಹರೆಯದ ಮಕ್ಕಳಿಗೆ ಸವಾಲಿಗೆ ಅನುಸಾರ ವಿಚಿತ್ರ ನಡವಳಿಕೆ ತೋರಿಸುವಂತೆ ಮಾಡುತ್ತದೆ ಅಷ್ಟೆ ಅಲ್ಲ ಕೊನೆಗೆ ಆತ್ಮಹತ್ಯೆಯಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಹೇಳಲಾಗಿದೆ. ವಾಟ್ಸಾಪ್ ಮೂಲಕ ಮೋಮೊ ಚಾಲೆಂಜ್ ಬರುತ್ತಿದ್ದು, ಅದನ್ನು ಸ್ವೀಕರಿಸಿದವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಬ್ಲೂವೇಲ್ ಚಾಲೆಂಜ್ ರೀತಿಯಲ್ಲೇ ಈ ಆಟವೂ ಕೂಡ ಇರುತ್ತದೆ ಎನ್ನಲಾಗಿದೆ. ಯಾವುದಕ್ಕೂ ಪೋಷಕರು ಹುಷಾರಾಗಿರಿ..

Edited By

Manjula M

Reported By

Manjula M

Comments