ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ.! ಏನ್ ಗೊತ್ತಾ..?

31 Jul 2018 10:08 AM | Technology
170 Report

ಎಲ್ಲರಿಗೂ ಬೈಕ್ಸ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ …ಅದರಲ್ಲೂ ಯೂತ್ಸ್ ಯಾವ ಹೊಸ ಬೈಕ್ ಮಾರುಕಟ್ಟೆಗೆ  ಲಗ್ಗೆ ಇಡುತ್ತೆ ಅಂತ ಕಾಯುತ್ತಾ ಇರುತ್ತಾರೆ. ಅವರಿಗೊಂದು ಗುಡ್ ನ್ಯೂಸ್.. ದ್ವಿಚಕ್ರ ವಾಹನಗಳಲ್ಲೆ  ಮೊದಲನೇ ಸ್ಥಾನದಲ್ಲಿರುವ  ಹಾರ್ಲೆ ಡೇವಿಡ್‌ಸನ್‌ 2020 ರ ವೇಳೆಗೆ ಮೂರು ಹೊಸ ಮಾಡೆಲ್‌ಗಳ ಬೈಕ್ ಗಳು ಬರಲಿವೆ ಎಂದಿದ್ದಾರೆ.

ತನ್ನ ಐಡೆಂಟಿಟಿಯನ್ನು ಹೇಳುವ ವಿ-ಶೇಪ್‌ ಟ್ವಿನ್‌ ಎಂಜಿನ್‌ಗಳನ್ನು ಮೂರೂ ಮಾಡೆಲ್‌ಗಳ ವಿನ್ಯಾಸದಲ್ಲಿ ಈಗಾಗಲೇ ಸೇರಿಸಿಕೊಳ್ಳಲಾಗಿದೆ. 975 ಸಿಸಿಯ ಸ್ಟ್ರೀಟ್‌ ಫೈಟರ್‌ ಹಾಗೂ 1250 ಸಿಸಿಯ ಎರಡು ಕಸ್ಟಮ್‌ ಮಾಡೆಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈ ಸಂಸ್ಥೆಯು ತನ್ನ ಮೊತ್ತ ಮೊದಲ ಇ-ಮೋಟರ್‌ಸೈಕಲ್‌ನ್ನು 2019ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದಿದ್ದಾರೆ. 2022ರ ವೇಳೆಗೆ ಇಲೆಕ್ಟ್ರಿಕ್‌ ಬೈಕ್‌ಗಳು ಆರಂಭವಾಗಲಿದೆ.

Edited By

Manjula M

Reported By

Manjula M

Comments