ನಿಮ್ಮ ಸ್ಮಾರ್ಟ್​ ಫೋನ್ ಗೆ ಬೇರೆ ಫೋನ್ ನ ಚಾರ್ಜರ್ ನ ಹಾಕ್ತಿದ್ದೀರಾ...?ಅದಕ್ಕೂ ಮೊದಲು ಇದನ್ನೊಮ್ಮೆ ಓದಿ

21 Jul 2018 2:36 PM | Technology
556 Report

ಸಾಮಾನ್ಯವಾಗಿ, ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿರೂ ಅಂಗಡಿಯವನು ಸ್ಮಾರ್ಟ್‌ಫೋನ್ ಜೊತೆಗೆ ನೀಡಿರುವ ಚಾರ್ಜಿಂಗ್ ಕೇಬಲ್‌ನಲ್ಲಿ ಮಾತ್ರ ಪೋನ್ ಚಾರ್ಜ್ ಮಾಡಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅಥವಾ ನಿಮ್ಮ ಸ್ಮಾರ್ಟ್‌ಫೋನನ್ನು ಇತರೆ ಚಾರ್ಜಿಂಗ್ ಕೇಬಲ್‌ಗಳ ಮೂಲಕ ಚಾರ್ಜ್ ಮಾಡಿದಾಗ ಸ್ಮಾರ್ಟ್‌ಫೋನಿನಲ್ಲಿ ಆಗುವ ವ್ಯತ್ಯಾಸ ನಿಮಗೆ ತಿಳಿದಿರಬಹುದು.! ಯಾಕೆ ಇದನ್ನ ಹೇಳ್ತಿದ್ದೀವಿ ಅಂತ ಯೋಚಿಸ್ತಿದ್ದೀರಾ..?

ಅಂದಹಾಗೆ, ನಿಮ್ಮ ಸ್ಮಾರ್ಟ್‌ಫೋನಿಗೆ ಇತರೆ ಯಾವುದೇ ಚಾರ್ಜರ್ ಬಳಕೆ ಮಾಡಿದರೂ ಕೂಡ ಅದು ಚಾರ್ಜ್ ಆಗುತ್ತಿರುತ್ತದೆ. ಆದರೆ, ನಿಮಗೆ ಗೊತ್ತಾ? ಮೊಬೈಲ್ ಸ್ಪೋಟಗೊಳ್ಳಲು, ಸ್ಮಾರ್ಟ್‌ಫೋನ್ ಒಎಸ್ ಹಾಳಾಗಲು ಹಾಗೂ ಮೊಬೈಲ್ ಹ್ಯಾಂಗ್ ಆಗುವಂತರ ಅಮಸ್ಯೆಗಳಿಗೆ ನಿಮ್ಮ ಸ್ಮಾರ್ಟ್‌ಫೋನಿಗೆ ಇತರೆ ಚಾರ್ಜರ್ ಬಳಸುವ ತಪ್ಪುಗಳಿಂದಲೇ ಆಗಿರುತ್ತವೆ.!! ಅರೇ ಹೌದಾ ಅದು ಹೇಗೆ ಅನ್ನೋ ಪ್ರಶ್ನೆ ಕಾಡೋದು ಸಹಜ ಅದಕ್ಕುತ್ತರ ಇಲ್ಲಿದೆ..ಒಂದು ಸ್ಮಾರ್ಟ್‌ಫೋನ್ ಅನ್ನು ಇತರೆ ಯಾವುದೇ ಚಾರ್ಜರ್ ಬಳಸಿ ಚಾರ್ಜ್ ಮಾಡಬಾರದು ಏಕೆ? ಮತ್ತು ಕಳಪೆ ಗುಣಮಟ್ಟದ ಚಾರ್ಜ್ರ್ನಿಂದ ಚಾರ್ಜ್ ಮಾಡುವುದು ಅಪಾಯವಾದರೆ, ನಮ್ಮ ಸ್ಮಾರ್ಟ್‌ಫೋನ್ ಚಾರ್ಜರ್‌ಗಿಂತಲೂ ಹೆಚ್ಚು ಗುಣಮಟ್ಟದ ಚಾರ್ಜರ್ ಬಳಸುವುದು ಇನ್ನೂ ಹೆಚ್ಚು ಅಪಾಯ ಏಕೆ? ಎಂಬುದನ್ನು ತಿಳಿದುಕೊಳ್ಳೋಣ.!ಇತರೆ ಚಾರ್ಜರ್ ಏಕೆ ಬಳಸಬಾರದು? ಅನ್ನೋದಕ್ಕೆ ಮೊದಲ ಕಾರಣ ಇದು.. ಮೊಬೈಲ್ ಕಂಪನಿಗಳು ನೀಡುವ ಚಾರ್ಜರ್‌ಗಳು ಯುಎಸ್‌ಬಿ ಆಧಾರದಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್ ಆಗುವ ಅವಧಿ ನಿರ್ಧಾರವಾಗುತ್ತದೆ. ಐಫೋನ್, ಸ್ಯಾಮ್ಸಂಿಗ್, ಎಲ್‌ಜಿ, ಶಿಯೋಮಿ ಹೀಗೆ ಬಹುತೇಕ ಎಲ್ಲಾ ಮೊಬೈಲ್ ತಯಾರಿಕಾ ಕಂಪೆನಿಗಳು ಯುಎಸ್‌ಬಿ 1.0, 2.0, 3.0 ಮತ್ತು 3.1 ಹೀಗೆ ಪ್ರತ್ಯೇಕ ಯುಎಸ್ಬಿೊಗಳನ್ನು ಬಳಸುತ್ತಿವೆ.!ಯಾವುದೇ ಸ್ಮಾರ್ಟ್‌ಫೋನ್ ಬ್ಯಾಟರಿಗೆ ನಿರ್ದಿಷ್ಟ ವೋಲ್ಟ್ ವಿದ್ಯುತ್ ಅಗತ್ಯವಿರುತ್ತದೆ. ಹೆಚ್ಚು ವಿದ್ಯುತ್ ಹರಿಯುವಿಕೆ ಮತ್ತು ಅಧಿಕ ವೋಲ್ಟೇಜ್ ನೀಡಿದರೆ ಬ್ಯಾಟರಿ ಬಹು ಬೇಗ ಚಾರ್ಜ್ ಆಗುತ್ತದೆ. ಆದರೆ, ಸ್ಮಾರ್ಟ್‌ಪೋನ್ ತಯಾರಿಸಿರುವ ಕಂಪೆನಿ ಬ್ಯಾಟರಿ ವಿದ್ಯುತ್ ಸ್ವೀಕರಿಸುವ ಸಾಮರ್ಥ್ಯಕ್ಕೆ ಚಾರ್ಜ್ ನಿಯಂತ್ರಕದ ಚಿಪ್ ಅಳವಡಿಸಿ ಮಿತಿ ಒಡ್ಡುತ್ತದೆ.!ನೀವು ಈಗ ತಿಳಿದ ಮೇಲಿನ ಕಾರಣಗಳನ್ನು ಸರಿಯಾಗಿ ತಿಳಿದರೆ ನಿಮ್ಮ ಸ್ಮಾರ್ಟ್‌ಫೋನನ್ನು ಕಳಪೆ ಚಾರ್ಜಿಂಗ್ ಕೇಬಲ್‌ಗಳ ಮೂಲಕ ಏಕೆ ಚಾರ್ಜ್ ಮಾಡಬಾರದು ಎಂದು ತಿಳಿಯಬಹುದು. ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಗೆ ನಿರ್ದಿಷ್ಟ ವೋಲ್ಟ್ ವಿದ್ಯುತ್ ಅಗತ್ಯವನ್ನು ಪೂರೈಸಲು ಕಳಪೆ ಚಾರ್ಜರ್‌ಗೆ ಸಾಧ್ಯವಾಗುವುದಿಲ್ಲದಿರುವುದರಿಂದ ಕಳಪೆ ಚಾರ್ಜರ್ ಬಳಕೆ ಬೇಡ.!!ಬಹುತೇಕ ಎಲ್ಲಾ ಮೊಬೈಲ್ ತಯಾರಿಕಾ ಕಂಪೆನಿಗಳು 1.0, 2.0, 3.0 ಮತ್ತು 3.1 ಹೀಗೆ ಪ್ರತ್ಯೇಕ ಯುಎಸ್ಬಿಎಗಳನ್ನು ಬಳಸುವುದರಿಂದ ಶಿಯೋಮಿ ಮೊಬೈಲ್‌ಗೆ ಸ್ಯಾಮ್‌ಸಂಗ್ ಚಾರ್ಜರ್ ಬಳಕೆ ಮಾಡಬಾರದು. ಹೀಗೆ ಅದಲು ಬದಲು ಚಾರ್ಜರ್ ಬಳಕೆ ಮಾಡುವುದರಿಂದ ಯುಎಸ್‌ಬಿ ಶಕ್ತಿ ಬದಲಾಗಿ ಬ್ಯಾಟರಿ ಹಾಳಾಗುತ್ತದೆ.!!ಒಟ್ಟಾರೆ ಹೇಳೋದಾದ್ರೆ ನಿಮ್ಮ ಬ್ಯಾಟರಿ ಹಾಳಾಗೋದಕ್ಕೆ ಕಾರಣ ಏನಿರಬಹುದು ಅನ್ನೋದನ್ನ ತಿಳಿದುಕೊಂಡ್ರಿ ಅಲ್ವ. ಹಾಗಿದ್ಮೇಲೆ ಮತ್ತೆ ಬೇರೆ ಚಾರ್ಜರ್ ನಿಂದ ನಿಮ್ಮ ಮೊಬೈಲ್ ಚಾರ್ಜ್ ಮಾಡಿ ಮೊಬೈಲ್ ಬ್ಯಾಟರಿಯನ್ನ ಹಾಳುಮಾಡಿಕೊಳ್ಳಬೇಡಿ.

Edited By

Manjula M

Reported By

Manjula M

Comments