ನಿಮ್ಮ ಆಂಡ್ರಾಯಿಡ್ ಸ್ಮಾರ್ಟ್​ ಫೋನ್ ‘ಹ್ಯಾಂಗ್’ ಆಗ್ತಿದ್ಯಾ..? ಹಾಗಿದ್ರೆ ಸರಿ ಪಡಿಸಲು ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್…

20 Jul 2018 1:21 PM | Technology
495 Report

ಸ್ಮಾರ್ಟ್ ಫೋನ್ ಅಂದ್ರೆ ಸಾಕು ಎಲ್ಲರ ಮನಸೆಳೆವ ವಸ್ತು. ಎಲ್ಲೆಲ್ಲೂ ಸ್ಮಾರ್ಟ್ ಫೋನ್ ದೇ ಹವಾ..! ಹೌದು, ಸದ್ಯ ಪುಟ್ಟ, ಮಕ್ಕಳು, ಯುವಕ ಯುವತಿರಯರು, ವಯಸ್ಕರು, ಎಲ್ಲರೂ ಬಳಸಲು ಇಚ್ಚಿಸುವುದು ಇದೇ ಫೋನ್ ಅನ್ನ. ಯಾಕಂದ್ರೆ ಸ್ಮಾರ್ಟ್ ಫೋನ್ ಗಳಲ್ಲಿ ಅಷ್ಟು ಉಪಯುಕ್ತ ಅವಕಾಶಗಳಿವೆ.

ಹೌದು, ಇತ್ತೀಚೆಗೆ ಆಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.ಅತ್ಯಂತ ಕಡಿಮೆ ಬೆಲೆಗೆ ದೊರಕುವ ಸ್ಮಾರ್ಟ್ ಫೋನು ಗಳನ್ನು ಕೊಳ್ಳದವರು ಯಾರಿದ್ದಾರೆ ಹೇಳಿ. ಕಾಲೇಜ್ ಹೋಗೋರ್ ಕೈಲೂ ಫೋನು, ಕೂಲಿ ಮಾಡೋರ್ ಕೈಲು ಫೋನು, ಯಾರ ಕೈಯಲ್ಲಿನೋಡಿದರೂ ಸ್ಮಾರ್ಟ್ ಫೋನ್ ಗಳು ಇದ್ದೇಇರುತ್ತವೆ. ಊಟ ಇಲ್ಲದಿದ್ದರೂ ಫೋನ್ ಬೇಕೆಬೇಕು ಎನ್ನುವ ಕಾಲದಲ್ಲಿ ಸ್ಮಾರ್ಟ್ ಫೋನ್ ಬಳಕೆ ದಾರರಿಗೆ ಒಂದು ಸಮಸ್ಯೆ ಕಾಡುತ್ತದೆ. ಅದೇನಪ್ಪಾ ಅಂತೀರಾ..?

ಇತ್ತೀಚೆಗೆ ಅನೇಕ ಜನರಿಗೆ ಎದುರಾಗಿರುವ ಸಮಸ್ಯೆ ಏನೆಂದರೆ ಫೋನ್ ‘‘ಹ್ಯಾಂಗ್” ಆಗುವುದು. ಯಾರಿಗಾದರೂ ತುರ್ತಾಗಿ ಕರೆ ಮಾಡಬೇಕೆಂದುಕೊಳ್ಳುತ್ತಿರುವಾಗಲೇ ‘ಹ್ಯಾಂಗ್’ಆಗುವುದು. ಯಾವುದೇ ಬಟನ್ ಒತ್ತಿದರೂ ಪ್ರಯೋಜನವಾಗದಿರುವುದು, ತಾನಾಗಿಯೇ ಮೊಬೈಲ್ ವರ್ಕ್ ಹಾಕುವುದು, ಹೀಗೆ ಹಲವಾರು ಸಮಸ್ಯೆಗಳು ತಲೆದೋರುತ್ತವೆ.ಇಂತಹ ಹಲವಾರು ಸಮಸ್ಯೆಗಳಿಗೆ ಅತ್ಯಂತ ಸುಲಭವಾಗಿ ಪರಿಹಾರಗಳನ್ನು ಈ ಕೆಳಕಂಡಂತಿವೆ.

  • ಆಂಡ್ರಾಯಿಡ್ ಫೋನ್ ಗಳು ‘ಹ್ಯಾಂಗ್’ ಆಗುವುದಕ್ಕೆ ಮುಖ್ಯ ಕಾರಣ ‘ಬ್ಯಾಗ್ರೌಂಡ್’ ನಲ್ಲಿ ಅಪ್ಲಿಕೇಷನ್ ಗಳು ರನ್ ಆಗುತ್ತಿರುವುದು. ಆದರೆ ಇವುಗಳನ್ನು ಬಹಳ ಸುಲಭವಾಗಿ ‘ಮೂವ್’ ಮಾಡಬಹುದು. ಹೇಗೆಂದರೆ, ‘ನ್ಯಾವಿಗೇಷನ್ ಸ್ಕ್ರೀನ್’ ಒತ್ತಿದರೆ ಒಂದು ‘ಲಿಸ್ಟ್’ ಬರುತ್ತದೆ. ಅದರಲ್ಲಿರುವ ಎಲ್ಲ ‘ಅಪ್ಲಿಕೇಶನ್'(APP) ‘ಕ್ಲೋಸ್’ ಮಾಡಿದರೆ ಸಾಕು. ಬ್ಯಾಗ್ರೌಂಡ್ ಆಪ್ಸ್ ತನ್ನಿಂದತಾನೇ ಕ್ಲೋಸ್ ಆಗುತ್ತವೆ. ಇದರಿಂದಾಗಿ ಫೋನಿನ ವೇಗ ಹೆಚ್ಚುತ್ತದೆ ಹಾಗು ಹ್ಯಾಂಗಿಂಗ್ ಸಮಸ್ಯೆ ತಪ್ಪುತ್ತದೆ.
  • ಆಂಡ್ರಾಯ್ಡ್ ಡಿವೈಸ್ ಸೆಟ್ಟಿಂಗ್ಸ್-ಪ್ರೈವೆಸಿ ಸೆಟ್ಟಿಂಗ್ಸ್ ಗೆ ಹೋಗಿ ಕ್ಲಿಯರ್ ಆಪ್ಷನನ್ನು ಓಕೆ(OK) ಮಾಡಬೇಕು. ಡಿವೈಸ್ನಲ್ಲಿರುವ ಟೆಂಪರರಿ ಫೈಲುಗಳು,ಕುಕೀಸ್,ಹಿಸ್ಟರೀ ಎಲ್ಲಾ ಅಳಸಿ ಹೋಗಿ ನಿಮ್ಮ ಫೋನ್ ಹ್ಯಾಂಗ್ ಆಗದೆ ಇರುತ್ತದೆ.
  • ಆಂಡ್ರಾಯ್ಡ್ ಫೋನ್ ನಲ್ಲಿ ಯಾವುದಾದರೂ ಕಿರು ತಂತ್ರಾಂಶ ಇನ್ಸ್ಟಾಲ್ ಮಾಡಬೇಕಾದರೆ ಕೇವಲ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಬೇಕು. ಇತರೆ ಸೈಟ್ ಗಳಿಂದ ಆಂಡ್ರಾಯ್ಡ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಲ್ಲಿ ಸಾಫ್ಟ್ ವೇರ್ ಪ್ರಾಬ್ಲಂ ಆಗಿ ನಿಮ್ಮ ಫೋನ್ ಹ್ಯಾಂಗ್ ಆಗುತ್ತದೆ.
  • ಪೋನಿನಲ್ಲಿ ಕೆಲವು ಆಪ್ಗಳ ಅವಶ್ಯಕತೆ ನಮಗಿಲ್ಲದಿದ್ದರೂ ತನ್ನಿಂದ ತಾನೇ ಇನ್ ಸ್ಟಾಲ್ ಆಗಿಬಿಡುತ್ತವೆ. ಇದರಿಂದಲೂ ಸಹ ಡಿವೈಸ್ ಹ್ಯಾಂಗ್ ಆಗುತ್ತದೆ. ಇದಕ್ಕೆ ಸುಲಭ ಪರಿಹಾರವೆಂದರೆ, ಆಂಟಿ ವೈರಸ್ ಇಲ್ಲವೆ ಕ್ಲೀನಿಂಗ್ ಆಪ್ ಇನ್ಸ್ಟಾಲ್ ಮಾಡಿ. ಬೇಡದಿರುವ ಆಪ್ಗಳನ್ನು ಡಿಲೀಟ್ ಮಾಡಬೇಕು.
  • ಫೋನಿನ ಇಂಟರ್ನಲ್ ಮೆಮೊರಿ ಕಡಿಮೆಯಿದ್ದರೂ ಡಿವೈಸ್ ಸರಿಯಾಗಿ ಕೆಲಸಮಾಡುವುದಿಲ್ಲ. ಇಂತಹ ಸಮಯದಲ್ಲಿ ಕೆಲವು ಪೈಲುಗಳನ್ನು ಎಸ್ ಡಿ ಕಾರ್ಡ್ಗೆ ವರ್ಗಾಯಿಸಿದಲ್ಲಿ ,ಡಿವೈಸ್ ಮೆಮೊರಿ ಫ್ರೀ ಆಗಿ ಚೆನ್ನಾಗಿ ಕೆಲಸಮಾಡುತ್ತದೆ.

 

Edited By

Manjula M

Reported By

Manjula M

Comments