ಸೆಲ್ಫಿ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚಬಹುದು..?  ಹೇಗೆ ಅಂತಿರಾ..!?

18 Jul 2018 11:57 AM | Technology
277 Report

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅರ್ಥಾತ್ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಗೆ ಸರಿಯಾದ ಚಿಕಿತ್ಸೆ ಇಲ್ಲ. ಆರಂಭಿಕ ಹಂತದಲ್ಲಿ ಗೊತ್ತಾದರೆ ಶಸ್ತ್ರ ಚಿಕಿತ್ಸೆ ಮೂಲಕ ಇದನ್ನು ನಿಯಂತ್ರಿಸಬಹುದು. ಆದ್ರೆ ಅದನ್ನ ಪತ್ತೆ ಹಚ್ಚೋದೇಗೆ ಅಂತೀರಾ..?

ಈಗ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಲ್ಲ ಆ್ಯಪ್ ಒಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್ ನ ಮೂಲಕ ಮೇದೋಜ್ಜೀರಕ ಕ್ಯಾನ್ಸರ್ ಜೊತೆಗೆ ಜಾಂಡೀಸ್ನಂಥ ಕೆಲವು ರೋಗಗಳನ್ನೂ ಕೂಡ ಪತ್ತೆ ಹಚ್ಚಬಹುದು.ಇದನ್ನು ಅಮೆರಿಕಾದ ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಸಂಶೋಧಕರು ಸಂಶೋಧಿಸಿದ್ದಾರೆ. ಬಿಲಿಸ್ಕ್ರೀನ್ ಎಂಬ ಹೆಸರಿನ ಈ ಆ್ಯಪ್ ನಲ್ಲಿ ಕ್ಯಾಮೆರಾ ಮೂಲಕ ತೆಗೆದ ಸೆಲ್ಫಿಯಲ್ಲಿ ರೋಗ ಲಕ್ಷಣವನ್ನು ಪತ್ತೆ ಮಾಡಲಾಗುತ್ತೆ. ಆದರೆ ಇದಕ್ಕೆಂದೇ ಸಿದ್ಧಪಡಿಸಲಾಗಿರುವ ಕನ್ನಡಕವನ್ನು ಧರಿಸಿ ಸೆಲ್ಫಿ ತೆಗೆದುಕೊಳ್ಳಬೇಕು. ಆ ಕನ್ನಡಕದಲ್ಲಿ ಕಣ್ಣಿನೊಳಗಿನ ಬಿಳಿಭಾಗ (ಸ್ಕ್ಲೇರ್)ವನ್ನು ಮಾತ್ರ ತಪಾಸಣೆಗೊಳಪಡಿಸಲಾಗುತ್ತದೆ. ಜಾಂಡಿಸ್ ಮೇದೋಜ್ಜೀರಕ ಕ್ಯಾನ್ಸರ್ನ ಮೊದಲ ಹಂತ. ಈ ಆ್ಯಪ್ ಜಾಂಡೀಸ್ ಸಾಧ್ಯತೆಗಳನ್ನು ಪತ್ತೆ ಹಚ್ಚುತ್ತೆ. ಆ ಮೂಲಕ ಕ್ಯಾನ್ಸರ್ ಸಾಧ್ಯತೆಗಳನ್ನು ತಿಳಿಸುತ್ತೆ. ಒಟ್ಟಾರೆ ಮೊಬೈಲ್ ಮೂಲಕ ಎಷ್ಟು ಉಪಯೋಗಗಳಿದೆಯೋ ಅಷ್ಟೇ ಅಪಾಯಕಾರಿ ಅಂಶವೂ ಇದೆ. ಆದ್ದದರಿಂದ ಎಷ್ಟು ಅಗತ್ಯವೋ ಅಷ್ಟನ್ನ ಬಳಸೋದು ಉತ್ತಮ.

Edited By

Manjula M

Reported By

Manjula M

Comments