ವಾಟ್ಸಾಪ್ ನಲ್ಲಿ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಈ ನೂತನ ಸೌಲಭ್ಯ..!

11 Jul 2018 10:03 AM | Technology
350 Report

ಸಾಮಾಜಿಕ ಜಾಲತಾಣಗಳ ಬಳಕೆ ಇತ್ತಿಚಿಗೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣ ಮಾತ್ರದಲ್ಲಿ ಎಲ್ಲೆಡೆ ಹರಡುವ ಸುಳ್ಳು ಸುದ್ದಿಯಿಂದಾಗಿ ತುಂಬಾ ಅನಾಹುತಗಳು ಸಂಭವಿಸುತ್ತಿವೆ..

ಈ ಕುರಿತು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವಂತಹ ವಾಟ್ಸಾಪ್ ಕೂಡ ಚಿಂತಿತವಾಗಿದೆ, ಇದಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇನ್ನು ಮುಂದೆ ವಾಟ್ಸಾಪ್ ನಲ್ಲಿ ಯಾವುದಾದರೂ ಸಂದೇಶ ಬಂದರೆ ಅದು ನಂಬಲರ್ಹ ಮೂಲಗಳಿಂದ ಬಂದಿದೆಯೇ ಅಥವಾ ತಮಗೆ ಬಂದ ಸಂದೇಶವನ್ನು ಪರಿಶೀಲಿಸದೆ ಫಾರ್ವರ್ಡ್ ಮಾಡಲಾಗಿದೆಯೇ ಎಂಬುದನ್ನು ತಿಳಿಸುತ್ತದೆ.ಇನ್ನೊಂದು ವಾರದಲ್ಲಿ ಈ ಸೌಲಭ್ಯ ವಾಟ್ಸಾಪ್ ಬಳಕೆದಾರರಿಗೆ ಸಿಗಲಿದ್ದು, ಇದನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಇದಾದ ಬಳಿಕ ವಾಟ್ಸಾಪ್ ನಲ್ಲಿ ಬಂದ ಸಂದೇಶ ಫಾರ್ವರ್ಡ್ ಮಾಡಲಾಗಿದ್ದರೆ ಇದಕ್ಕೆ ಫಾರ್ವರ್ಡೆಡ್ ಎಂಬ ಹೆಡ್ ಲೈನ್ ಕೂಡ ಇರಲಿದೆ.

Edited By

Manjula M

Reported By

Manjula M

Comments