ಜ್ಞಾಪಕ ಶಕ್ತಿಯನ್ನು ಕುಗ್ಗಿಸುವ ಇನ್​ಸ್ಟಾಗ್ರಾಂ,ಪೋಟೋ ಕ್ಲಿಕ್​ಗಳು..!

05 Jul 2018 6:09 PM | Technology
416 Report

ಯಾವುದೇ ಪಂಕ್ಷನ್ ಗೆ ತೆರಳಿದಾಗ ಬೇಕಾದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ಕೂಡ  ಕಾಮನ್​.ಮತ್ತೊಂದೆಡೆ ನೆನಪುಗಳ ಸಂಗ್ರಹ ಎನ್ನುವ ನೆಪದಲ್ಲಿ ಫೊಟೋಗಳನ್ನು ತೆಗೆದು ಮೊಬೈಲ್​ನಲ್ಲಿ ಸ್ಟೋರ್ ಮಾಡಿಕೊಳ್ಳುವುದು ಕೂಡ ಉಂಟು.

ಕ್ಯಾಮೆರಾದಲ್ಲಿ ತೆಗೆದುಕೊಳ್ಳುವ ಫೋಟೋಗಳು ನಮ್ಮ ಮೆಮೊರಿಯಲ್ಲಿ ಇರುತ್ತದೆ ಎಂದು ಭಾವಿಸಿದಲ್ಲಿ ನಿಮ್ಮ ಊಹೆ ತಪ್ಪು. ಹೌದು, ಸದ್ಯದ ಸಮೀಕ್ಷೆಯೊಂದು ಇಂತಹ ಕ್ಲಿಕ್​ಗಳು ಮಾನವನ ಜ್ಞಾಪಕ ಶಕ್ತಿಯನ್ನು ಕುಗ್ಗಿಸುತ್ತದೆ ಎನ್ನುವ ಅಚ್ಚರಿಯ ಸಂಗತಿಯನ್ನು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ವೈದ್ಯಕೀಯ ವಿದ್ಯಾರ್ಥಿನಿ ಜೂಲಿಯಾ ಸೊರೆಸ್ ನಡೆಸಿರುವ ಸಮೀಕ್ಷೆ ಪ್ರಕಾರ ಈ ಮಾಹಿತಿಯ ಬಹಿರಂಗವಾಗಿದೆ. ಕೆಲವರನ್ನು ಆಯ್ಕೆ ಮಾಡಿ ಈ ಸಮೀಕ್ಷೆಯನ್ನುನಡೆಸಲಾಗಿದೆ. ಮೂರು ವಿಭಿನ್ನ ಸನ್ನಿವೇಶಗಳನ್ನು ನೀಡಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಚಿತ್ರಗಳನ್ನು ನೋಡುವುದು , ಫೋಟೋ ತೆಗೆಯುವುದು, ಸ್ನ್ಯಾಪ್ ಚಾಟ್ ಮುಖಾಂತರ ಫೋಟೋ ಕ್ಲಿಕ್ ಮಾಡುವುದು ಹೀಗೆ ಮೂರು ಭಿನ್ನ ಸನ್ನಿವೇಶಗಳನ್ನು ನೀಡಿ ಅಧ್ಯಯನವನ್ನು ಮಾಡಲಾಗಿದೆ. ಇವುಗಳಲ್ಲಿ ಕ್ಯಾಮರಾ ಬಳಸಿ ಫೋಟೋ ತೆಗೆದ ನಂತರದಲ್ಲಿ ವ್ಯಕ್ತಿಯು ಕೆಲವೇ ಸೆಕೆಂಡ್​ಗಳಲ್ಲಿ ಚಿತ್ರವನ್ನು ಮರೆಯುತ್ತಾನೆ ಎನ್ನುವ ಅಚ್ಚರಿಯ ವಿಷಯ ಅಧ್ಯಯನದ ಕೊನೆಯಲ್ಲಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆಯಂತೆ.

Edited By

Manjula M

Reported By

Manjula M

Comments