ನಿಮ್ಮ ಪಾಸ್‌ವರ್ಡ್ ಕದಿಯಲ್ಪಟ್ಟಿದೆಯಾ, ಇಲ್ಲವಾ ಎಂದು ತಿಳಿದುಕೊಳ್ಳಬೇಕಾ? ಹಾಗಾದ್ರೆ ಇದನ್ನೊಮ್ಮೆ ಓದಿ..

30 May 2018 12:06 PM | Technology
748 Report

ಎಲ್ಲರೂ ಕೂಡ ನಿಮ್ಮ ನಿಮ್ಮ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಸೇಫ್ಟಿಗಾಗಿ ಪಾಸ್ ವರ್ಡ್ ಗಳನ್ನು ಇಟ್ಟುಕೊಂಡಿರುತ್ತೀರಾ? ಆದರೆ ಕೆಲವೊಮ್ಮೆ ಪಾಸ್ ವರ್ಡ್ ಗಳನ್ನು ಕದ್ದು ಬಿಟ್ಟಿ ನಿಮ್ಮ ಅಕೌಂಟ್ ಅನ್ನು ನಿಭಾಯಿಸುತ್ತಿರುತ್ತಾರೆ. ಕೆಲವೊಮ್ಮೆ ನಾವು ಈ ರೀತಿ ಆಗಬಾರದು ಎಂದು ಸ್ಟ್ರಾಂಗ್ ಆಗಿರುವ ಪಾಸ್ ವರ್ಡ್ ನೀಡಿರುತ್ತೇವೆ. ಸೈಬರ್ ಕ್ರೈಮ್ ಗಳಿಗೆ ಕಾರಣವಾಗುವ ಪ್ರಮುಖ ಅಂಶವೇ ಈ ಪಾಸ್ ವರ್ಡ್ ಗಳಾಗಿರುತ್ತವೆ.

ಪಾಸ್ ವರ್ಡ್ ಕಳ್ಳರು  ಪಾಸ್ ವರ್ಡ್ ಗಳನ್ನು ಕದಿಯಲು ಯಾವ ಹಾದಿಯನ್ನು ಬೇಕಿದ್ದರೂ ಹಿಡಿಯಬಹುದು. ಪಾಸ್ ವರ್ಡ್ ಗಳನ್ನು  ಭೂತಕಾಲದ ಡಾಟಾಗಳಿಂದ ಅಂದರೆ ಹಿಂದಿನ ಡಾಟಾಗಳಿಂದಲೂ ಪಾಸ್ ವರ್ಡ್ ಗಳನ್ನು ಕದಿಯುತ್ತಿದ್ದಾರೆ ಎಂಬ ಅಂಶವು ಬೆಳಕಿಗೆ ಬಂದಿದೆ. ಇದರಿಂದ ನಮಗೆ ತಿಳಿದಿರುವುದೇನೆಂದರೆ ಈಗಾಗಲೇ ಕದ್ದಿರುವ ಪಾಸ್ ವರ್ಡ್ ಗಳು ಅಂತರ್ಜಾಲದಲ್ಲಿ ಎಲ್ಲಿ ಬೇಕಾದರೂ ಬಳಸುವುದು ಸುಲಭವಾಗಿದೆ. ಕಳ್ಳರು ಆ ಪಾಸ್ ವರ್ಡ್ ಗಳ ಮೇಲೆ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುತ್ತಾರೆ ಮತ್ತು ಅಂತರ್ಜಾಲದ ಬೇರೆ ಅಕೌಂಟ್ಸ್ ಗಳಲ್ಲಿ ಅದನ್ನು ಬಳಕೆ ಮಾಡುತ್ತಿರುತ್ತಾರೆ. ನಿಮ್ಮ ಪಾಸ್ ವರ್ಡ್ ಎಷ್ಟೆ ಉದ್ದವಿದ್ದರೂ, ಎಷ್ಟೇ ಕಷ್ಟದ್ದೇ ಆಗಿದ್ದರೂ ಕೂಡ ನಿಮ್ಮ ಡಾಟಾ ಬ್ರೀಚ್ ನಿಂದ ಅದನ್ನ ಕದಿಯಬಹುದು. ಎಂದರೆ ಅದು ನಿಷ್ಪ್ರಯೋಜಕವೇ ಸರಿ. ಹಾಗಾಗಿ ಅದನ್ನು ಎಂದಿಗೂ ಬಳಸಬೇಡಿ. ಒಂದು ವೇಳೆ ಹಾಗಾಗಿದ್ದರೆ ಕೂಡಲೇ ನಿಮ್ಮ ಪಾಸ್ ವರ್ಡ್ ಬದಲಿಸಿ.

ಹಾಗಾದ್ರೆ ನಿಮ್ಮ ಪಾಸ್ ವರ್ಡ್ ಕದಿಯಲ್ಪಟ್ಟಿದೆಯಾ ಅಥವಾ ಇಲ್ಲವಾ ತಿಳಿಯೋದು ಹೇಗೆ ಎಂಬ ಗೊಂದಲ ನಿಮ್ಮನ್ನು ಸಾಮಾನ್ಯವಾಗಿ ಕಾಡುತ್ತಿರುತ್ತದೆ?  ಹಾಗಾದ್ರೆ ಚಿಂತಿಸಬೇಡಿ..ಓಕ್ತಾ( Okta) ಎಂಬ ಲಾಗಿನ್ ಮ್ಯಾನೇಜ್ ಮೆಂಟ್ ಕಂಪೆನಿಯೊಂದು ಬ್ರೌಸರ್ ಪ್ಲಗ್ ಇನ್ ನ್ನು ಪರಿಚಯಿಸಿದೆ. ಅದರ ಹೆಸರು ಪಾಸ್ ಪ್ರೊಟೆಕ್ಟ್. ಈ ಪ್ಲಗ್ ಇನ್ ನಿಮ್ಮ ಪಾಸ್ ವರ್ಡ್ ಎಷ್ಟು ಬಾರಿ ಬಳಕೆಯಾಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ.ಮೊದಲು ವೆಬ್ ಸೈಟ್ ನ ಲಾಗಿನ್ ಪೇಜ್ ಗೆ ಹೋಗಿ ಪಾಸ್ ವರ್ಡ್ ಬರೆಯಿರಿ ನಂತರ, ಎಂಟರ್ ಒತ್ತಿ. ಆಗ ನಿಮಗೊಂದು ವಿಂಡೋ ಪಾಪ್ ಅಪ್ ತೆರೆದುಕೊಳ್ಳಲಿದ್ದು ನಿಮಗೆ ಎಚ್ಚರಿಕೆ ನೀಡಲಿದೆ" "The password you just entered has been found in 26 data breaches. This password is not safe to use." ಎಂದು ತಿಳಿಸುತ್ತೆ.

ಅಂದರೆ ನೀವು ಈಗ ತಾನೆ ಬರೆದ ಪಾಸ್ ವರ್ಡ್ 26 ಬಾರಿ ಡಾಟಾ ಬ್ರೀಚ್ ನಲ್ಲಿ ಓಪನ್ ಆಗಿದೆ ಎಂದು. ಹಾಗಾಗಿ ಈ ಪಾಸ್ ವರ್ಡ್ ಬಳಸುವುದು ನಿಮಗೆ ಹಿತವಲ್ಲ ಎಂಬ ಮಾಹಿತಿಯನ್ನು ನೀಡುತ್ತದೆ. ನೀವು ಈ ಮೆಸೇಜ್ ನ್ನು ಡಿಸ್ ಮಿಸ್ ಮಾಡಿದ ಕೂಡಲೇ, ನೀವು ಪಾಸ್ ವರ್ಡ್ ಬದಲಿಸಲು ಬಯಸುತ್ತಿರೋ ಅಥವಾ ಇಲ್ಲವೋ ಎಂಬ ಪ್ರಶ್ನೆಯನ್ನು ಕೇಳುತ್ತದೆ. ನೀವು ಬಯಸಿದ್ದಲ್ಲಿ ಪಾಸ್ ವರ್ಡ್ ಬದಲಿಸಬಹುದು. ಇನ್ನೂ ಮುಂದೆ ನಿಮ್ಮ ಪಾಸ್ ವರ್ಡ್ ಗಳನ್ನು ಯಾರಾದರೂ ಕದ್ದಿದ್ದಾರೆ ಅನಿಸಿದರೆ ಈ ಮೇಲೆ ತಿಳಿಸಿರುವ ಮೂಲಕ ಪತ್ತೆ ಮಾಡಿಕೊಳ್ಳಬಹುದು.

Edited By

Manjula M

Reported By

Manjula M

Comments