ವಾಟ್ಸ್‌ಆಪ್ ಗ್ರೂಪ್ ಅಡ್ಮಿನ್ ಗಳು ಇದನ್ನೊಮ್ಮೆ ಓದಲೇ ಬೇಕು..!

23 Apr 2018 1:26 PM | Technology
554 Report

ಮೂಲಕ ಸೋಶಿಯಲ್ ಮೇಸೆಜಿಂಗ್ ಆಪ್ ಗಳು ಸಾಕಷ್ಟಿವೆ. ಜಾಗತಿಕವಾಗಿ ಅತೀ ಬಳಕೆದಾರರನ್ನು ಹೊಂದುವ ಆಫ್ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್. ತನ್ನ ಬಳಕೆದಾರರಿಗೆ ಚಾಟಿಂಗ್ ಅನ್ನು ಮತ್ತಷ್ಟು ಸುಲಭವಾಗಿಸುವ ಸಲುವಾಗಿ ಅನೇಕ ಹೊಸ ಹೊಸ ಆಯ್ಕೆಗಳನ್ನು ನೀಡಲು ವಾಟ್ಸ್‌ಆಪ್  ಮುಂದಾಗಿದೆ. ಈ ಹಿನ್ನಲೆಯಲ್ಲಿ ದಿನಕ್ಕೊಂದು ಹೊಸ ಆಯ್ಕೆಯನ್ನು ಪರೀಕ್ಷಿಸುತ್ತಿದ್ದು, ಇದೇ ಮಾದರಿಯಲ್ಲಿ ಮೊತ್ತೊಂದು ಹೊಸ ಆಯ್ಕೆಯನ್ನು ನೀಡಲು ಯೋಜನೆಯನ್ನು ರೂಪಿಸಿದೆ.

ದಿನಕಳೆದಂತೆ ವಾಟ್ಸ್‌ಆಪ್ ಗ್ರೂಪ್ ಚಾಟಿಂಗ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಇದನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಲು ವಾಟ್ಸ್‌ಆಪ್ ಗ್ರೂಪ್ ಚಾಟಿಂಗ್ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ವಾಟ್ಸ್‌ಆಪ್ ಸಂಸ್ಥೆ ಮುಂದಾಗಿದೆ. ಇದರಿಂದಾಗಿ ಗ್ರೂಪ್‌ಗಳಲ್ಲಿ ಆಡ್ಮಿನ್‌ಗಳು ಮತ್ತು ಸದಸ್ಯರ ನಡುವೆ ಸಮಾನತೆಯೂ ಕಾಣಿಸಿಕೊಳ್ಳಲಿದೆ.ವಾಟ್ಸ್‌ಆಪ್‌ ಗ್ರೂಪ್‌ಗಳು ಇಂದು ಎಲ್ಲಾ ರೀತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ತಂಡದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅವರನ್ನು ಗ್ರೂಪ್‌ ನಿಂದ ಕಿತ್ತು ಹಾಕುವ ಅಧಿಕಾರವನ್ನು ಗ್ರೂಪ್ ಆಡ್ಮಿನ್‌ ಗಳಿಗೆ ನೀಡಲಾಗಿದೆ ಎಂದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.  ಸದ್ಯ ಇದೇ ಮಾದರಿಯಲ್ಲಿ ಗ್ರೂಪ್ ನ ಸದಸ್ಯರು ಗ್ರೂಪ್ ಆಡ್ಮಿನ್‌ಗಳನ್ನು ತೆಗೆದು ಹಾಕುವ ಅವಕಾಶ ಮಾಡಿಕೊಟ್ಟಿದೆ.ವಾಟ್ಸ್‌ಆಪ್‌ ಗ್ರೂಪ್‌ಗಳ ಆಡ್ಮಿನ್ ಗಳನ್ನು ಕಿತ್ತು ಹಾಕುವ ಸಲುವಾಗಿ ಡಿಸ್‌ಮಿಸ್ ಆಡ್ಮಿನ್ ಎನ್ನುವ ಆಯ್ಕೆಯೊಂದನ್ನು ಗ್ರೂಪ್ ಗಳಲ್ಲಿ ನೀಡಲು ವಾಟ್ಸ್‌ಆಪ್ ಇದೀಗ ಮುಂದಾಗಿದೆ. ಸದ್ಯ ಈ ಆಯ್ಕೆಯು ಪ್ರಯೋಗ ಹಂತದಲ್ಲಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೆ ದೊರೆಯುತ್ತದೆ ಹೇಳಿದ್ದಾರೆ.ಇನ್ನೂ ಮುಂದೆ ವಾಟ್ಸ್‌ಆಪ್ ಗ್ರೂಪ್ ಬಳಸುವವರು ಗ್ರೂಪ್ ಅಡ್ಮಿನ್ ಗಳಿಗೆ ಕೇರ್ ಮಾಡೋ ಅವಶ್ಯಕತೆ ಇಲ್ಲ.. ನೀವೆ ಬೇಕಾದ್ರೆ ಅವರನ್ನ ಗ್ರೂಪ್ ನಿಂದ ಎಕ್ಸಿಟ್ ಮಾಡಬಹುದು.

 

Edited By

Manjula M

Reported By

Manjula M

Comments