ಸ್ಮಾರ್ಟ್‌ಫೋನ್ ಬಳಸಿದ ಮಕ್ಕಳು ಮತ್ತಷ್ಟು ಮೇಧಾವಿಗಳಾಗಬಲ್ಲರು.!

06 Apr 2018 5:23 PM | Technology
730 Report

ಎಲ್ಲಾ ಪೋಷಕರಿಗೆ ಮಕ್ಕಳು ಎಲ್ಲಿ ಸ್ಮಾರ್ಟ್‌ಫೋನ್ ಹಿಡಿದು ಹಾಳಾಗುತ್ತಾರೊ ಎಂಬ ಭಯ.! ಆದರೆ, ನಿಮಗೆ ಗೊತ್ತಾ? ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆ ಸ್ಮಾರ್ಟ್‌ಫೋನ್ ಕೂಡ ಕಾರಣವಾಗಬಲ್ಲದು

ಹೌದು, ಸ್ಮಾರ್ಟ್‌ಫೋನ್ ಮೇಲೆ ಅವಲಂಬಿತರಾಗುವ ಮಕ್ಕಳಿಗೆ ಸ್ಮಾರ್ಟ್‌ಫೋನ್ ಮೂಲಕವೇ ಪಾಠವನ್ನು ಹೇಳಿಕೊಡುವ ಆಪ್‌ಗಳು ಮತ್ತು ಗೇಮ್‌ಗಳ ಮೂಲಕ ಭೌದ್ದಿಕ ಬೆಳವಣಿಗೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಪಡೆದುಕೊಳ್ಳುತ್ತಾರೆ. ಆಧುನಿಕ ಜೀವನದ ಪಾಠಗಳನ್ನು ಸುಲಭವಾಗಿ ಸ್ಮಾರ್ಟ್‌ಫೋನ್‌ಗಳು ಕಲಿಸಿಕೊಡುತ್ತಿವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.ಉಪಯುಕ್ತ ಆಪ್‌ಗಳು ಮತ್ತು ಗೇಮ್‌ಗಳನ್ನು ಡೌನ್‌ಲೋಡ್ ಮಾಡಿ ಮಕ್ಕಳಿಗೆ ಒಮ್ಮೆ ಕುತೋಹಲ ಮೂಡಿಸಿದರೆ ಸಾಕು, ಆ ಆಪ್‌ಗಳು ಮತ್ತು ಆ ಗೇಮ್‌ಗಳು ಅವರಿಗೆ ಮತ್ತಷ್ಟು ಕುತೋಹಲವನ್ನು ಹೆಚ್ಚುವಂತೆ ಮಾಡುತ್ತವಂತೆ.

ನೀವು ಉಂಟು ಮಾಡಿದ ಕುತೋಹಲ ಮಕ್ಕಳಿಗೆ ಆ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡಿ ಬೌದ್ದಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆಯಂತೆ. ಹಾಗಾಗಿ, ಮಕ್ಕಳಿಗೆ ಸ್ಮಾರ್ಟ್‌ಪೋನ್ ಕೊಟ್ಟರೂ ಅದರಲ್ಲಿ ಸ್ಮಾರ್ಟ್‌ಫೋನ್ ಮೂಲಕವೇ ಪಾಠವನ್ನು ಹೇಳಿಕೊಡುವ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಡಿ. ಆಂಡ್ರೊಬೇಬಿ(Androbaby), ಆಪ್ ಕ್ವಿಜ್ಹ್ ಬೇಬಿ ಗೇಮ್ಸ್, ಫಿಶರ್ ಪ್ರೈಸ್ ಬೇಬಿ ಗೇಮ್ಸ್ (Fisher-Price baby game) ಹೀಗೆ ಹಲವು ಉತ್ತಮ ಮಕ್ಕಳ ಆಪ್‌ಗಳು ಮತ್ತು ಗೇಮ್‌ಗಳು ಆಪ್‌ಸ್ಟೋರ್‌ನಲ್ಲಿ ಬಿಡುಬಿಟ್ಟಿವೆ.

Edited By

Shruthi G

Reported By

Madhu shree

Comments