ಹೊಸ 10 ವಾಟ್ಸ್‌ಆಪ್‌ ಫೀಚರ್ಸ್ ಬಗ್ಗೆ ನೀವು ತಿಳ್ಕೊಂಡಿದ್ದಿರಾ...?

05 Apr 2018 6:00 PM | Technology
450 Report

ವಾಟ್ಸ್‌ಆಪ್ ದಿನೇ ದಿನೇ ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇದರಿಂದಾಗಿ ಹೆಚ್ಚಿನ ಮಂದಿ ವಾಟ್ಸ್‌ಆಪ್ ಬಳಕೆ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.

ವಾಟ್ಸ್‌ಆಪ್ ನಲ್ಲಿಯೇ ಹಣ ಪಾವತಿಸಿ: ವಾಟ್ಸ್ಆಪ್ ಬಳಕೆದಾರರಿಗೆ ನೀಡಿರುವ ಹೊಸ ಸೇವೆಯೂ ಇದಾಗಿದ್ದು, UPI ಬಳಕೆಯ ಮೂಲಕ ವಾಟ್ಸ್‌ಆಪ್ ನಲ್ಲಿ ನಿಮ್ಮ ಸ್ನೇಹಿತರಿಗೆ ಹಣವನ್ನು ಕಳುಹಿಸಬಹುದು ಮತ್ತು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ವ್ಯಾಪಾರಿಗಳಿಗೆ ಪೇಮೆಂಟ್ ಸಹಮಾಡಬಹುದಾಗಿದೆ.

ಮೇಸೆಜ್ ಡಿಲೀಟ್ ಮಾಡಿ: ಇದಲ್ಲದೇ ನೀವು ಗ್ರೂಪ್‌ನಲ್ಲಿ ಇಲ್ಲವೇ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಂದರ್ಭದಲ್ಲಿ ತಿಳಿಯದೆ ತಪ್ಪಾಗಿ ಮೇಸೆಜ್ ಗಳನ್ನು ಸೆಂಡ್ ಮಾಡಿದ ಸಂದರ್ಭದಲ್ಲಿ ಅವರು ನೋಡುವ ಮೊದಲೇ ನೀವು ಅದನ್ನು ಡಿಲೀಟ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಗಂಟೆಗೂ ಹೆಚ್ಚು ಕಾಲಾವಕಾಶವನ್ನು ನೀಡಲಾಗಿದೆ.

ಗ್ರೂಪ್ ಬಗ್ಗೆ ಮಾಹಿತಿ: ಇದಲ್ಲದೇ ನೀವು ಆಡ್ಮಿನ್ ಆಗಿರುವ ಗ್ರೂಪ್‌ ಬಗ್ಗೆ ನೀವು ಮಾಹಿತಿಯನ್ನು ನೀಡಬಹುದಾಗಿದೆ. ನಿಮ್ಮ ಗ್ರೂಪ್ ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ, ಉದ್ದೇಶಗಳೇನು, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಸದಸ್ಯರಿಗೆ ತಿಳಿಸಲು ಇದು ವೇದಿಕೆಯಾಗಲಿದೆ.

ಗ್ರೂಪ್ ವಿಡಿಯೋ ಕಾಲಿಂಗ್: ಮೊದಲು ವಾಟ್ಸ್‌ಆಪ್ ಬಳಕೆದಾರರಿಗೆ 'ಒನ್ ಆನ್ ಒನ್' ವಿಡಿಯೋ ಕಾಲಿಂಗ್ ಮಾಡುವ ಆಯ್ಕೆಯನ್ನು ಮಾತ್ರವೇ ನೀಡಲಾಗಿತ್ತು. ಆದರೆ ಈಗ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವ ಹೊಸ ಆಯ್ಕೆಯೊಂದನ್ನು ನೀಡಲಾಗಿದೆ. ಇದರಲ್ಲಿ ನಿಮ್ಮ ಸ್ನೇಹಿತರೊಂದಿಗೆ ಒಟ್ಟಾಗಿ ಮಾತನಾಡಬಹುದಾಗಿದೆ.

ವಿಡಿಯೋ ಕಾಲ್‌ನಿಂದ ಆಡಿಯೋ ಕಾಲ್‌:  ನಿಮ್ಮ ಸ್ನೇಹಿತರಿಗೆ ಆಡಿಯೋ ಕಾಲ್ ಮಾಡಿ ಮಾತನಾಡುವ ಸಂದರ್ಭದಲ್ಲಿಯೇ ಆಡಿಯೋ ಕಾಲ್ ಅನ್ನು ವಿಡಿಯೋ ಕಾಲ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದ್ದು, ಇದ್ಕಕಾಗಿಯೇ ವಾಟ್ಸ್ ಆಪ್ ಅವಕಾಶವನ್ನು ಮಾಡಿಕೊಟ್ಟಿದೆ.

 ವಾಟ್ಸ್‌ಆಪ್ ನಲ್ಲಿಯೇ ಯೂಟ್ಯೂಬ್: ಈ ಹಿಂದೆ ನಿಮ್ಮ ಸ್ನೇಹಿತರು ಯೂಟ್ಯೂಬ್ ವಿಡಿಯೋ ಲಿಂಕ್ ಶೇರ್ ಮಾಡಿದ ಸಂದರ್ಭದಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅದು ಯೂಟ್ಯೂಬ್ ಆಪ್‌ನಲ್ಲಿ ತೆರೆದುಕೊಳ್ಳುತಿತ್ತು.

ವಾಟ್ಆಪ್ ಐಕಾನ್ ಬದಲಾಯಿಸಿ:  ಇದಲ್ಲದೇ ಆಂಡ್ರಾಯ್ಡ್ ಒರಿಯೋ ಬಳಕೆದಾರರು ತನ್ನ ವಾಟ್ಸ್ ಆಪ್ ಐಕಾನ್ ಅನ್ನು ಬದಲಾಯಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಮತ್ತು ಅದನ್ನು ಸ್ನೇಹಿತರೊಂದಿಗೆ ಶೇರ್ ಸಹ ಮಾಡಬಹುದಾಗಿದೆ.

 

 

 

 

 

Edited By

Shruthi G

Reported By

Madhu shree

Comments