20 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಫುಲ್ ಬ್ಯಾಟರಿ ಚಾರ್ಜ್ ಮಾಡಿ

23 Mar 2018 4:47 PM | Technology
562 Report

ಪ್ರಸ್ತುತ ಫಾಸ್ಟ್ ಚಾರ್ಜಿಂಗ್, ವೈರ್‌ಲೆಸ್‌ ತಂತ್ರಗಳ ಜತೆಗೆ ಲೇಸರ್ ಜಾರ್ಜಿಂಗ್ ತಂತ್ರಜ್ಞಾನಗಳು ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಸೇರ್ಪಡೆಯಾಗುತ್ತಿದ್ದು, ಹಾಗಾದರೆ, ಮುಂದಿನ ದಿನಗಳಲ್ಲಿ ಬಳಕೆಗೆ ಬರುವ ಬ್ಯಾಟರಿ ತಂತ್ರಜ್ಞಾನಗಳು ಯಾವುವು? ಹೊಸದಾಗಿ ಅಭಿವೃದ್ದಿಯಾಗಿರುವ ತಂತ್ರಜ್ಞಾನಗಳ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಟರ್ಬೊ ಪವರ್ ಚಾರ್ಜಿಂಗ್ : ಕೇವಲ ಹದಿನೈದು ನಿಮಿಷ ಚಾರ್ಜ್ ಮಾಡಿದರೆ 15 ಗಂಟೆಯಷ್ಟು ಬ್ಯಾಟರಿ ಕಾರ್ಯಾಚರಣೆಗೆ ಲಭ್ಯವಿರುವ ಬ್ಯಾಟರಿ ತಂತ್ರಜ್ಞಾನವಿರುವ ಟರ್ಬೊಪವರ್ ಚಾರ್ಜಿಂಗ್ ವ್ಯವಸ್ಥೆಯನ್ನು ಮೋಟೊರೋಲಾ ಕಂಪೆನಿ ತಂದಿದೆ. ಮೋಟೊರೋಲಾದ ಮೋಟೊ ಝಡ್2 ಫೋರ್ಸ್ ಮತ್ತು ಮೋಟೊ ಜಿ5 ಪ್ಲಸ್ ಸ್ಮಾರ್ಟ್‌ಪೋನ್‌ಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಒನ್‍ಪ್ಲಸ್ 'ಡ್ಯಾಷ್' ಚಾರ್ಜ್ : ಒನ್‍ಪ್ಲಸ್ ಕಂಪೆನಿಯ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅತಿ ವೇಗವಾಗಿ ಚಾರ್ಜ್ ಆಗುವುದು ಒನ್‍ಪ್ಲಸ್ ಕಂಪೆನಿ ಬಳಸುತ್ತಿರುವ ಡ್ಯಾಷ್ ಚಾರ್ಜ್ ವ್ಯವಸ್ಥೆಯಿದೆ. ಉಳಿದ ಎಲ್ಲ ವೇಗದ ಚಾರ್ಜ್ ವ್ಯವಸ್ಥೆಗಳಿಗಿಂತಲೂ 10 ನಿಮಿಷ ವೇಗವಾಗಿ ಚಾರ್ಜ್ ತಂತ್ರಜ್ಞಾನ ಡ್ಯಾಷ್ ಚಾರ್ಜ್ ವ್ಯವಸ್ಥೆಯಲ್ಲಿದ್ದು, ಸ್ಮಾರ್ಟ್‌ಫೋನ್ ಕೇವಲ 30 ನಿಮಿಷಗಳಲ್ಲಿ ಶೇ 60 ಚಾರ್ಜ್ ಆಗಲಿದೆ.

ಮೀಡಿಯಾಟೆಕ್ ಪಂಪ್ :ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಚಿಪ್ ಮಾರಾಟ ಮಾಡುತ್ತಿರುವ ಮೀಡಿಯಾಟೆಕ್ ಕಂಪೆನಿ ಪಂಪ್ ಎಕ್ಸ್‌ಪ್ರೆಸ್‌ ಚಾರ್ಜಿಂಗ್ ವ್ಯವಸ್ಥೆಯನ್ನು ರೂಪಿಸಿದೆ.ಮೀಡಿಯಾಟೆಕ್ ಅಭಿವೃದ್ದಿಪಡಿಸಿರುವ ಪಂಪ್ ಎಕ್ಸ್‌ಪ್ರೆಸ್‌ ತಂತ್ರಜ್ಞಾನದಿಂದ ಡಿವೈಸ್‌ಗಳು ಕೇವಲ 20 ನಿಮಿಷಗಳಲ್ಲಿ ಶೇ 75ರಷ್ಟು ಚಾರ್ಜ್ ಆಗುತ್ತವಂತೆ.

Edited By

Shruthi G

Reported By

Madhu shree

Comments