ನಿಮ್ಮ ಫೋನ್ ಮಾರಾಟ ಮಾಡುವ ಮುನ್ನ ಈ ಸುದ್ದಿಯನ್ನು ಒಮ್ಮೆ ಗಮನಿಸಿ ...!!

20 Mar 2018 2:28 PM | Technology
542 Report

ಸ್ಮಾರ್ಟ್ಫೋನ್ನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದ್ದೀರೆ, ನಿಮ್ಮ ಫೋನ್ ಮಾರಾಟ ಮಾಡುವ ಮುನ್ನ ನೀವು ಅನುಸರಿಸಲೇಬೇಕಾದ ವಿಧಾನಗಳು ಯಾವುವು? ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ಫೋನ್ ಮಾರಾಟದಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ತಿಳಿಯಿರಿ. ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿ.

ಸ್ಮಾರ್ಟ್ಫೋನ್ ಅನ್ನು ಮಾರುವ ಮುನ್ನ ನಿಮ್ಮ ಸ್ಮಾರ್ಟ್ಫೋನಿನ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡುವುದು ಕಡ್ಡಾಯ : ನೀವು ಸ್ಮಾರ್ಟ್ಫೋನ್ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿದರೆ ಫೋನಿನಲ್ಲಿನ ನಿಮ್ಮ ಡೇಟಾ ಸಂಪೂರ್ಣವಾಗಿ ಅಳಿಸಿಹೊಗುತ್ತದೆ, ಹಾಗಾಗಿ, ಮರೆಯದೇ ಫ್ಯಾಕ್ಟ್ರಿ ರೀಸೆಟ್ ಮಾಡಿ.

ಫೋನ್ ಬ್ಯಾಕ್‌ಅಪ್ ತೆಗೆದಿಡಿ : ನಿಮ್ಮ ಸ್ಮಾರ್ಟ್ಫೋನ್ ಅನ್ನು ಮಾರಾಟ ಮಾಡುವ ಮುನ್ನವೇ ಸ್ಮಾರ್ಟ್ಫೋನಿನ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ. ಗೂಗಲ್ ಡ್ರೈವ್ ಅಥವಾ ಕಂಪ್ಯೂಟರ್ನಲ್ಲಿ ನಿಮ್ಮೆಲ್ಲಾ ಫೈಲ್ಗಳು, ವಿಡಿಯೊ, ಮತ್ತು ಚಿತ್ರಗಳನ್ನು ಬ್ಯಾಕಪ್ ತೆಗೆದುಕೊಳ್ಳಿ. ಇಲ್ಲವಾದರೆ ಮೊಬೈಲ್ ಖರೀದಿಸಿದವರು ಅದನ್ನು ಡಿಲೀಟ್ ಮಾಡಬಹುದು ಇಲ್ಲವೇ ಮಿಸ್ ಯೂಸ್ ಮಾಡಿಕೊಳ್ಳಬಹುದು.

ಫೋನ್ನ ಬೆಲೆ ಎಷ್ಟು ತಿಳಿಯಿರಿ : ಶೋರೂಂನಿಂದ ಸ್ಮಾರ್ಟ್ಪೋನ್ ಹೊರತಂದರೆ ಸಾಕು ಆ ಮೊಬೈಲ್ ಬೆಲೆ ಶೇ40 ರಷ್ಟು ಇಳೆಯಾಗುತ್ತದೆ ಎನ್ನುತ್ತವೆ ಸೆಕೆಂಡ್ ಹ್ಯಾಂಡ್ ಬೆಲೆಗಳನ್ನು ಹೇಳುವಂತಹ ಸೈಟ್ಗಳು : ಹಾಗಾಗಿ, ನಿಮ್ಮ ಸ್ಮಾರ್ಟ್ಫೋನ್ ಮಾರಾಟ ಮಾಡುವಾಗ ಅದರ ಮಾರ್ಕೆಟ್ ವ್ಯಾಲ್ಯೂ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಫೋನ್ ಖರೀದಿಸುವವರು ಯಾರು? : ನೀವು ಫೋನ್ ಮಾರಾಟ ಮಾಡುತ್ತಿರುವ ವ್ಯಕ್ತಿ ಯಾರು ಎಂಬ ಸಂಪೂರ್ಣ ಮಾಹಿತಿ ನಿಮಗಿರಲಿ. ಇಲ್ಲವಾದರೆ ಖಂಡಿತ ಆ ಪೋನ್ ಮಾರುವ ಸಾಹಸ ಬೇಡ :  ವ್ಯಕ್ತಿಗತವಾಗಿ ಫೋನ್ ಮಾರಾಟ ಮಾಡುವುದಕ್ಕಿಂತಲೂ ಎಕ್ಸ್ಚೇಂಜ್ ಆಫರ್ ಮೂಲಕ ಮತ್ತೊಂದು ಸ್ಮಾರ್ಟ್ಪೋನ್ ಖರೀದಿಸುವುದು ಒಳ್ಳೆಯದು ಎನ್ನಬಹುದು.

ಇರುವ ಫೋನ್ ಅನ್ನೇ ಉಳಿಸಿಕೊಳ್ಳಿ : ಸ್ಮಾರ್ಟ್ಫೋನ್ನ್ನು ಮಾರಾಟ ಮಾಡಲು ಇಚ್ಚೇ ಇದ್ದರೆ ಮಾತ್ರ ಈ ಎಲ್ಲಾ ಕೆಲಸಗಳನ್ನು ಮಾಡಿ. ಆದರೆ, ಸ್ಮಾರ್ಟ್ಫೋನ್ ಮಾರಾಟ ಮಾಡುವ ಮುನ್ನ ಈಗಿರುವ ಫೋನ್ ಅನ್ನೇ ಬಳಕೆ ಮಾಡಲು ಪ್ರಯತ್ನಿಸಿ.ಏಕೆಂದರೆ ಇಂದು ಸೆಕೆಂಡ್ ಹ್ಯಾಂಡ್ ಫೋನ್ ಬೆಲೆಯೂ ಕಡಿಮೆ ಇದೆ ಮತ್ತು ನಿಮ್ಮ ಫೋನ್ ಮಾರಿ ಸಮಸ್ಯೆಯನ್ನು ಎದುರಿಸುವ ಸಂಭವ ಇರಲಿದೆ.

 

Edited By

Shruthi G

Reported By

Madhu shree

Comments