ಬೆಂಗಳೂರಿಗರಿಗೆ 'ಉಚಿತ ವೈಫೈ' ಯೋಜನೆ ಕೊಟ್ಟ ಜಿಯೋ

17 Mar 2018 3:28 PM | Technology
610 Report

ಹೌದು, ಬಿಬಿಎಂಪಿಯ ಗೋವಿಂದರಾಜನಗರ ವಾರ್ಡ್‌ನ ನಾಗರಬಾವಿ ಪ್ರದೇಶಕ್ಕೆ ಜಿಯೋ ಉಚಿತ ವೈಫೈ ಅನ್ನು ನೀಡಿದೆ. ನಾಗರಬಾವಿ ಮುಖ್ಯರಸ್ತೆಯ ಟೆಲಿಫೋನ್‌ ಎಕ್ಸ್‌ಚೇಂಜ್‌ನಿಂದ ರಾಷ್ಟ್ರೀಯ ಕಾನೂನು ಶಾಲೆಯವರೆಗೆ ಉಚಿತ ವೈಫೈ ಸೇವೆ ಒದಗಿಸಲಾಗುತ್ತಿದೆ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ನಾಗರಬಾವಿ ಮುಖ್ಯರಸ್ತೆಯಲ್ಲಿ ನಿತ್ಯ ಸಾವಿರಾರು ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರು ಓಡಾಡುವುದರಿಂದ ಅವರಿಗೂ ಮತ್ತು ಅಲ್ಲಿನ ನಿವಾಸಿಗಳಿಗೂ ಜಿಯೋ ಉಚಿತ ವೈಫೈ ಲಭ್ಯವಾಗಲಿದೆನಾಗರಬಾವಿ ಮುಖ್ಯರಸ್ತೆಯಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಸಲುವಾಗಿ ರಿಲಯನ್ಸ್ ಜಿಯೋ ಕಂಪೆನಿ 2.50 ಕೋಟಿ ರೂ. ವೆಚ್ಚ ಮಾಡಿದೆ. ಇದಲ್ಲದೇ ಬೆಂಗಳೂರು ಮಹಾನಗರ ಪಾಲಿಕೆಗೆ 24 ಲಕ್ಷ ರೂ. ಶುಲ್ಕವನ್ನು ಕೂಡ ಜಿಯೋ ಪಾವತಿಸಿದೆ ಎಂದು ತಿಳಿದುಬಂದಿದೆ. ಉಚಿತ ವೈಫೈ ಸೇವೆ ಒದಗಿಸಲೆಂದೇ ಜಿಯೋ ಈ ಯೋಜನೆಗಾಗಿ ಭಾರೀ ಬಂಡವಾಳವನ್ನು ಸಹ ಹೂಡಿದ್ದು, ಹಾಗಾದರೆ, ಜಿಯೋ ಎಷ್ಟು ಉಚಿತ ವೈಫೈ ಅನ್ನು ನೀಡಿದೆ? ಉಚಿತ ವೈಫೈ ಸೌಲಭ್ಯ ಬಳಕೆ ಮಾಡಿಕೊಳ್ಳುವುದು ಹೇಗೆ? ಇದರಿಂದ ಜಿಯೋಗೇನು ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಸಲುವಾಗಿ 2.50 ಕೋಟಿ ರೂ. ವೆಚ್ಚ ಮಾಡಿರುವ ಜಿಯೋ ಮಿತಿಯಿಲ್ಲದ ಅಂತರ್ಜಾಲ ಸಂಪರ್ಕವನ್ನು ನೀಡಲು ಮುಂದಾಘಿದೆ. ಹಾಗಾಗಿ, ನಾಗರಭಾವಿ ಮುಖ್ಯ ರಸ್ತೆಯ ಮಧ್ಯದಿಂದ ಎರಡೂ ಬದಿಯ 50 ಮೀಟರ್‌ ವ್ಯಾಸದಲ್ಲಿ ಯಾರೂ ಬೇಕಾದರೂ ಅನ್‌ಲಿಮಿಟೆಡ್ ಡೇಟಾ ಬಳಕೆ ಮಾಡಿಕೊಳ್ಳಬಹುದು. ದಿನದ 24 ಗಂಟೆಗಳ ಕಾಲ ಉಚಿತವಾಗಿ ವೈಫೈ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶವಿರುವ ಜಿಯೋ ವೈಫೈ ವೇಗ 3 ರಿಂದ 4 ಎಂಬಿಪಿಎಸ್ ಆಗಿದೆ. ವೈಫೈ ಸಂಪರ್ಕಕ್ಕಾಗಿ ಈಗಾಗಲೇ 15 ಸ್ಮಾರ್ಟ್‌ ಪೋಲ್‌ಗಳನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲಿಯೇ ಉಚಿತ ವೈಫೈ ನಾಗರಬಾವಿ ಮುಖ್ಯರಸ್ತೆಯ ಜನರಿಗೆ ದೊರೆಯಲಿದೆ.

Edited By

Shruthi G

Reported By

Madhu shree

Comments